Elephant Retirement: ಮನುಷ್ಯರಂತೆ ಆನೆಗಳಿಗೂ ನಿವೃತ್ತಿ; ವಿದಾಯ ಸಭೆಯ ಭಾವನಾತ್ಮಕ ವಿಡಿಯೋ ವೈರಲ್

ವಿದಾಯ ಸಮಾರಂಭದಲ್ಲಿ ಮೂರ್ತಿ ಮತ್ತು ಮುದುಮಲೈ ಆನೆಗಳನ್ನು ಅಲಂಕರಿಸಲಾಗಿತ್ತು. ಶಿಬಿರದಲ್ಲಿದ್ದ ಇತರ ಕುಮ್ಕಿ ಆನೆಗಳು ಎರಡೂ ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದವು.  ತಮ್ಮ ಸಹೋದ್ಯೋಗಿಗಳಿಗೆ ಅದ್ಧೂರಿಯಾಗಿ ಕಳುಹಿಸಲು ಜೋರಾಗಿ ಘೀಳಿಟ್ಟವು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊಯಂಬತ್ತೂರು : ಮನುಷ್ಯರಿಗೆ ಕೆಲಸದಿಂದ ನಿವೃತ್ತಿ ಇರುವಂತೆ ಪ್ರಾಣಿಗಳಿಗೂ ಇರುತ್ತದೆ. ಈ ವಿಷಯ ನಿಮಗೆ ಅಚ್ಚರಿ ಅನಿಸಬಹುದು. ಆದರೆ ಇದು ನಿಜಕ್ಕೂ ಸತ್ಯ. ಜನವಸತಿ ಪ್ರದೇಶಗಳಿಗೆ ದಾಳಿ ಮಾಡುವ, ತಂಟೆ ಮಾಡುವ ಆನೆಗಳನ್ನೋ, ಇತರ ಪ್ರಾಣಿಗಳನ್ನೋ ಸೆರೆ ಹಿಡಿಯಲು ಅರಣ್ಯ ಇಲಾಖೆ (Forest Department) ಆನೆಗಳಿಗೇ ತರಬೇತಿ ನೀಡಿ ಸಲಹುತ್ತದೆ. ಇಂತಹ ಆನೆಗಳಿಗೆ, ನಾಯಿಗಳಿಗೆ ಅವುಗಳ ವಯಸ್ಸಿಗೆ ಅನುಗುಣವಾಗಿ ನಿವೃತ್ತಿ (Retiring Kumki elephants Farewell) ನೀಡಲಾಗುತ್ತದೆ. ಹೀಗೆ ಅರಣ್ಯ ಇಲಾಖೆ ತನ್ನ ಕಾರ್ಯಾಚರಣೆಗಳಲ್ಲಿ ಬಳಸುವ ಆನೆಗಳಿಗೆ ಕುಮ್ಕಿ ಆನೆಗಳು ಎಂದು ಕರೆಯಲಾಗುತ್ತದೆ. ಸದ್ಯ ಇಂತಹ ಎರಡು ಕುಮ್ಕಿ ಆನೆಗಳಿಗೆ (Kumki Elephant Farewell) ಫೇರ್​ವೆಲ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಭಾರೀ ವೈರಲ್ ಆಗುತ್ತಿದೆ.   ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ತಮಿಳುನಾಡು ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಭಾಗವಹಿಸಿ ನಿವೃತ್ತರಾದ ಎರಡು ಹಿರಿಯ ಆನೆಗಳಿಗೆ ಅರಣ್ಯಾಧಿಕಾರಿಗಳು ಬೀಳ್ಕೊಡುಗೆ ನೀಡಿದ್ದಾರೆ.

  58 ವರ್ಷಗಳಿಗಿಂತ ಹೆಚ್ಚು ವಯಸ್ಸು
  ಮುದುಮಲೈ ಮತ್ತು ಮೂರ್ತಿ ಎಂಬ ಎರಡು ಆನೆಗಳು 58 ವರ್ಷಕ್ಕಿಂತ  ಹೆಚ್ಚು ವಯಸ್ಸಾಗಿದೆ ಎಂದು ಹೇಳಲಾಗಿದೆ. ಕಾಡು ಆನೆಗಳ ದಾಳಿಯನ್ನು ಕಡಿಮೆ ಮಾಡಲು ಈ ಆನೆಗಳನ್ನು ಅರಣ್ಯ ಇಲಾಖೆ ಬಳಸಿಕೊಂಡಿತ್ತು, ಸದ್ಯ ಈ ಎರಡು ಆನೆಗಳಿಗೆ ನಿವೃತ್ತಿ ಘೋಷಿಸಲಾಗಿದೆ.

  ಇದನ್ನೂ ಓದಿ: Giridih Jain Temple: 500 ಕೋಟಿ ಹಣ, 10 ವರ್ಷದಿಂದ ಕೆಲಸ! ಇನ್ನೂ ಮುಗಿದಿಲ್ಲ ಈ ದೇಗುಲದ ನಿರ್ಮಾಣ!

  ಈ ಆನೆಗಳು ಅರಣ್ಯ ಇಲಾಖೆ ಸೇರಿದ್ದು ಹೇಗೆ?
  1998ರಲ್ಲಿ ಕೇರಳದಲ್ಲಿ 20ಕ್ಕೂ ಹೆಚ್ಚು ಜನರನ್ನು ಕೊಂದಿರುವ ಆರೋಪದ ಮೇಲೆ ಮೂರ್ತಿ ಎಂಬ ಆನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿತ್ತು. ಆದರೆ ಆನೆ ಶಿಬಿರವನ್ನು ಮೂರ್ತಿ ವಿಧೇಯ ಆನೆಯಾಗಿ ಮಾರ್ಪಟ್ಟಿತ್ತು. ಇತರ ಕಾಡು ಆನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯು ಮೂರ್ತಿ ಆನೆಯನ್ನು ಬಳಸಿಕೊಂಡಿತ್ತು. ಮುದುಮಲೈ ಎಂಬ ಆನೆಯು ಮೂರು ವರ್ಷದಾಗಿದ್ದಾಗ ಹಳ್ಳಕ್ಕೆ ಬಿದ್ದ ಸಂದರ್ಭದಲ್ಲಿ ಸಿಕ್ಕಿತ್ತು.

  ಭಾವನಾತ್ಮಕ ವಿದಾಯ ಸಭೆ
  ವಿದಾಯ ಸಮಾರಂಭದಲ್ಲಿ ಮೂರ್ತಿ ಮತ್ತು ಮುದುಮಲೈ ಆನೆಗಳನ್ನು ಅಲಂಕರಿಸಲಾಗಿತ್ತು. ಶಿಬಿರದಲ್ಲಿದ್ದ ಇತರ ಕುಮ್ಕಿ ಆನೆಗಳು ಎರಡೂ ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದವು.  ತಮ್ಮ ಸಹೋದ್ಯೋಗಿಗಳಿಗೆ ಅದ್ಧೂರಿಯಾಗಿ ಕಳುಹಿಸಲು ಜೋರಾಗಿ ಘೀಳಿಟ್ಟವು. ನಿವೃತ್ತಿ ಹೊಂದಿದ ಈ ಎರಡೂ ಆನೆಗಳು ಸಹ ತಮ್ಮ ನಿವೃತ್ತಿ ಜೀವನವನ್ನು ಆನೆ ಶಿಬಿರದಲ್ಲಿ ಆರಾಮದಾಯಕವಾಗಿ ಕಳೆಯಬಹುದಾಗಿದೆ.

  ಗುತ್ತಿಗೆದಾರರ ನಿರ್ಲಕ್ಷ್ಯ: ಹೆದ್ದಾರಿ ನಿರ್ಮಾಣಕ್ಕಾಗಿ ಹಕ್ಕಿಗಳ ಮಾರಣಹೋಮ!
  ಕೇರಳದ ಮಲಪ್ಪುರಂ(Kerala's Malappuram District) ಜಿಲ್ಲೆಯ ತಿರುರಂಗಡಿಯಿಂದ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆದ್ದಾರಿ ನಿರ್ಮಾಣಕ್ಕಾಗಿ ನಿರ್ಲಕ್ಷ್ಯದಿಂದ ದೊಡ್ಡ ಹುಣಸೆ ಮರವನ್ನು ಕಡಿದು ನೂರಾರು ಪಕ್ಷಿಗಳು ಮತ್ತು ಅವುಗಳ ಮರಿಗಳು ಸಾವನ್ನಪ್ಪಿವೆ. ಸದ್ಯ ಈ ವಿಚಾರವಾಗಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಗುತ್ತಿಗೆದಾರರ (Contractors) ನಿರ್ಲಕ್ಷ್ಯದಿಂದ ನೂರಾರು ಪಕ್ಷಿಗಳು ಸಾವನ್ನಪ್ಪಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಈ ಘಟನೆ ಗುರುವಾರ ನಡೆದಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ತಿರುರಂಗಡಿ ಎಂಬ ನಗರದಿಂದ ವೈರಲ್ ಆಗಿರುವ ವೀಡಿಯೊದಲ್ಲಿ, ನೂರಾರು ಪಕ್ಷಿಗಳು ಮತ್ತು ಅವುಗಳ ಮರಿಗಳು ದೊಡ್ಡ ಹುಣಸೆ ಮರದಡಿ ಸಿಲುಕಿ ಸಾವನ್ನಪ್ಪಿವೆ.

  ಇದನ್ನೂ ಓದಿ: Dinosaur: ಹಿತ್ತಲಿಗೆ ಬಂದ ಡೈನೋಸಾರ್! ಶಾಕ್ ಆದ ಮನೆ ಓನರ್!

  ಹೌದು ಹಕ್ಕಿಗಳ ಸಮೂಹ ದೊಡ್ಡ ಮರದಲ್ಲಿ ಗೂಡುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದವು. ಆದರೀಗ ಹೆದ್ದಾರಿ ನಿರ್ಮಾಣಕ್ಕಾಗಿ ಈ ಮರವನ್ನು ಧರೆಗುರುಳಿಸಿದ್ದಾರೆ. ಹೀಗಿರುವಾಗ ಏಕಾಏಕಿ ಮರ ಕಡಿದ ಪರಿಣಾಮ ಹಕ್ಕಿಗಳೆಲ್ಲಾ ಮರದ ಟೊಂಗೆಯಡಿ ಸಿಲುಕಿ ಸಾವನ್ನಪ್ಪಿವೆ. ರಸ್ತೆಯೆಲ್ಲಾ ಸತ್ತ ಹಕ್ಕಿಗಳ ರಾಶಿ ಬಿದ್ದಿತ್ತು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಮರಗಳನ್ನು ಕಡಿಯುವಾಗ ಪಕ್ಷಿಗಳು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
  Published by:guruganesh bhat
  First published: