Twin Elephants: 80 ವರ್ಷಗಳ ನಂತರ ಮೊದಲ ಬಾರಿ ಅವಳಿ ಆನೆ ಮರಿಗಳ ಜನನ, ಆನೆಗಳಲ್ಲಿ ಅವಳಿಗಳು ಯಾಕೆ ಅಪರೂಪ?

Twin Elephants Born: ಶ್ರೀಲಂಕಾದಲ್ಲಿ ಬರೋಬ್ಬರಿ 80 ವರ್ಷಗಳ ನಂತರ ಒಂದು ಆನೆ ಅವಲಿ ಮರಿಗಳಿಗೆ ಜನ್ಮ ನೀಡಿದೆ. ಮುದ್ದಾಗಿರುವ ಈ ಎರಡು ಗಂಡು ಮರಿಗಳು ತಾಯಿಯ ಸುತ್ತಮುತ್ತಲೇ ಓಡಾಡಿಕೊಂಡಿರೋ ದೃಶ್ಯಗಳು ಈಗ ವಿಶ್ವದೆಲ್ಲೆಡೆ ಹಡಿದಾಡುತ್ತಿದೆ. ಹೇಗಿದೆ ನೋಡಿ ಈ ಪುಟಾಣಿ ಜೋಡಿ...

ತಾಯಿಯೊಂದಿಗೆ ಅವಳಿ ಆನೆ ಮರಿಗಳು

ತಾಯಿಯೊಂದಿಗೆ ಅವಳಿ ಆನೆ ಮರಿಗಳು

  • Share this:
    ಕೊಲಂಬೊ, ಶ್ರೀಲಂಕಾ: ಮನುಷ್ಯರನ್ನೂ ಸೇರಿದಂತೆ ನಾನಾ ಸಸ್ತನಿಗಳಲ್ಲಿ ಅವಳಿ ಮಕ್ಕಳು ಹುಟ್ಟುವುದು ಅಷ್ಟೇನೂ ಅಪರೂಪವಲ್ಲ. ಎರಡಕ್ಕಿಂತ ಹೆಚ್ಚು ಮಕ್ಕಳು ಒಂದೇ ಹೆರಿಗೆಯಲ್ಲಿ ಜನಿಸಿದ ಉದಾಹರಣೆಗಳು ಕೂಡಾ ಸಾಕಷ್ಟಿವೆ. ಆದ್ರೆ ಅದೇನು ಕಾರಣವೋ ಏನೋ, ಆನೆಗಳು ಮಾತ್ರ ಅವಳಿ ಮರಿಗಳಿಗೆ ಜನ್ಮ ನೀಡುವುದು ಬಹಳ ಅಪರೂಪ. ಆನೆಗಳ ಸಂಖ್ಯೆ ಉತ್ತಮವಾಗಿರುವ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಬರೋಬ್ಬರಿ 80 ವರ್ಷಗಳ ನಂತರ ಒಂದು ಆನೆ ಅವಲಿ ಮರಿಗಳಿಗೆ ಜನ್ಮ ನೀಡಿದೆ. ಮುದ್ದಾಗಿರುವ ಈ ಎರಡು ಗಂಡು ಮರಿಗಳು ತಾಯಿಯ ಸುತ್ತಮುತ್ತಲೇ ಓಡಾಡಿಕೊಂಡಿರೋ ದೃಶ್ಯಗಳು ಈಗ ವಿಶ್ವದೆಲ್ಲೆಡೆ ಹಡಿದಾಡುತ್ತಿದೆ. ಶ್ರೀಲಂಕಾದ ಸುಪ್ರಸಿದ್ಧ ಪಿನ್ನಾವಾಲಾ ಆನೆಗಳ ಅನಾಥಾಲಯದಲ್ಲಿ ಇರುವ 25 ವರ್ಷ ವಯಸ್ಸಿನ ಸುರಾಂಗಿ ಎನ್ನುವ ಹೆಣ್ಣು ಆನೆಗೆ ಈ ಮರಿಗಳು ಜನಿಸಿವೆ.

    ಇವುಗಳ ತಂದೆ 17 ವರ್ಷ ವಯಸ್ಸಿನ ಪಾಂಡು ಎನ್ನುವ ಗಂಡಾನೆ ಕೂಡಾ ಅದೇ ಅನಾಥಾಲಯದಲ್ಲಿದೆ. ತಜ್ಞರು ಹೇಳುವಂತೆ 1941ರಲ್ಲಿ ಸಾಕು ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದ್ದೇ ಕೊನೆಯಂತೆ. ಅದರ ನಂತರ ಇದುವರಗೆ ಶ್ರೀಲಂಕಾದಲ್ಲಿ ಅವಳಿ ಆನೆ ಮರಿಗಳು ಹುಟ್ಟೇ ಇರಲಿಲ್ಲ. ಆದ್ದರಿಂದ ಇದೊಂದು ವಿಶೇಷ ಸಂದರ್ಭ. ಎರಡೂ ಮರಿಗಳು ಮತ್ತು ತಾಯಿ ಆರೋಗ್ಯದಿಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶ್ರೀಲಂಕಾದಲ್ಲಿ ಒಟ್ಟು 7500 ಆನೆಗಳು ಇವೆ. ಕೇವಲ ಶೇಕಡಾ 1ರಷ್ಟು ಆನೆಗಳು ಮಾತ್ರ ಅವಳಿ ಮರಿಗಳಿಗೆ ಜನ್ಮ ನೀಡುತ್ತವೆ. ತನ್ನ ಜೀವಿತಾವಧಿಯಲ್ಲಿ ಒಂದು ಆನೆ ನಾಲ್ಕರಿಂದ ಐದು ಮರಿಗಳನ್ನು ಹೆರಬಲ್ಲದು. ಕೆಲವು ಜಾತಿಯ ಆನೆಗಳು ಬರೋಬ್ಬರಿ 22 ತಿಂಗಳವರಗೆ ಗರ್ಭಧರಿಸಬಲ್ಲವು. ಈ ಅವಳಿ ಮರಿಗಳು ಜನಿಸಿರುವ ಪಿನ್ನಾವಾಲಾ ಆನೆಗಳ ಅನಾಥಾಲಯದಲ್ಲಿ ಒಟ್ಟು 90 ಆನೆಗಳಿವೆ. ಈಗ ಈ ಅವಳಿ ಮರಿಗಳಿಂದ ಅವುಗಳ ಸಂಖ್ಯೆ 92ಕ್ಕೆ ಏರಿದೆ.

    ಇದನ್ನೂ ಓದಿ: Viral Video: ಈ ಆನೆ ಹಿಂದಿನ ಜನ್ಮದಲ್ಲಿ ರಾಜಕುಮಾರ ಆಗಿತ್ತಂತೆ, ಅದಕ್ಕೇ ಈಗ ಹೀಗೆ ಇದೆಯಂತೆ..ವಿಡಿಯೋ ನೋಡಿ!

    ಕಳೆದ 15 ವರ್ಷಗಳಲ್ಲಿ 40 ಆನೆಮರಿಗಳನ್ನು ವಿವಿಧ ಪ್ರದೇಶಗಳಿಂದ ಕಳ್ಳರು ಅಪಹರಿಸಿದ್ದಾರೆ ಎಂದು ವನ್ಯಜೀವಿ ಸಂರಕ್ಷಕರು ತಿಳಿಸಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
    Published by:Soumya KN
    First published: