news18-kannada Updated:January 22, 2021, 10:46 PM IST
ಆನೆ ಮೇಲೆ ಬೆಂಕಿ ಟೈರ್
ತಮಿಳುನಾಡಿನ ನೀಲಿಗಿರಿ ಜಿಲ್ಲೆಯಲ್ಲಿರುವ ಮಸಿನಗುಡಿಯ ಖಾಸಗಿ ರೆಸಾರ್ಟ್ಗೆ ನುಗ್ಗಿದ ಆನೆಯನ್ನು ಅಮಾನುಷವಾಗಿ ಕೊಂದಿರುವ ಘಟನೆ ವರದಿಯಾಗಿದೆ. ಇಲ್ಲಿನ ಕಾಡಂಚಿನ ದಾರಿ ತಪ್ಪಿದ ಆನೆ ರೆಸಾರ್ಟ್ಗೆ ಬಂದಿದ್ದು, ಈ ಆನೆ ಮೇಲೆ ದುಷ್ಕರ್ಮಿಗಳು ಬೆಂಕಿಯ ಟೈರ್ ಎಸೆದಿದ್ದಾರೆ. ಇದರಿಂದ ಆನೆ ಗಂಭೀರವಾಗಿ ಗಾಯಗೊಂಡಿದ್ದು , ಕಿವಿಯಲ್ಲಿ ತೀವ್ರ ರಕ್ತಸ್ರಾವಗೊಂಡಿದೆ. ನೋವಿನಿಂದ ಬಳಸುತ್ತಿದ್ದ ಆನೆಯನ್ನು ಮಸಿನಗುಡಿಯ ಫಾರೆಸ್ಟ್ ಗಾರ್ಡ್ ಕಣ್ಣಿಗೆ ಬಿದ್ದಿದೆ. ತಕ್ಷಣಕ್ಕೆ ಗಾಯಗೊಂಡ ಆನೆಯನ್ನು ಸಮೀಪದ ಮಧುಮಲೈ ಅರಣ್ಯ ವ್ಯಾಪ್ತಿಯಲ್ಲಿನ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗುವ ಪ್ರಯತ್ನ ನಡೆಸಲಾಗಿದೆ, ಆದರೆ, ಸುಟ್ಟ ಗಾಯಗಳಿಂದ ಗಂಭೀರವಾಗಿ ಬಳಲಿದ್ದ ಆನೆ ಮಾರ್ಗ ಮಧ್ಯೆಯಲ್ಲಿಯೇ ಕೊನೆ ಉಸಿರೆಳೆದಿದೆ.
ಘಟನೆ ಸಂಬಂಧ ವಿಶೇಷ ತಂಡ ರಚಿಸಿದ ಅರಣ್ಯ ಅಧಿಕಾರಿಗಳು, ಆನೆಯ ದಾರುಣ ಸಾವಿಗೆ ಕಾರಣರಾದ ರೆಸಾರ್ಟ್ನ ಸಿಬ್ಬಂದಿ ಸೇರಿದಂತೆ ಮಾಲೀಕನನ್ನು ಬಂಧಿಸಿದ್ದಾರೆ. ರೇಮಂಡ್ ಮತ್ತು ಪ್ರಶಾಂತ್ ಬಂಧಿತರು. ಈ ವೇಳೆ ಆನೆಯ ಮೇಲೆ ಉದ್ದೇಶ ಪೂರ್ವಕವಾಗಿ ಬೆಂಕಿ ಟೈರ್ ಎಸೆದಿರುವ ದೃಶ್ಯಗಳನ್ನು ಬಂಧಿತರ ಮೊಬೈಲ್ನಲ್ಲಿ ಸೆರೆಯಾಗಿವೆ.
ಈ ವಿಡಿಯೋವನ್ನು ಅರಣ್ಯ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಮೂಕ ಪ್ರಾಣಿಯ ಮೇಲೆ ದುಷ್ಕರ್ಮಿಗಳು ನಡೆಸಿರುವ ಅಟ್ಟಹಾಸ ಕಂಡು ಬಂದಿದೆ. ಬೆಂಕಿ ಟೈರ್ ಅನ್ನು ಆನೆ ಮೇಲೆ ಎಸೆದ ಪರಿಣಾಮ ಆನೆ ಕಿವಿ ಗಾಯಗೊಂಡಿದ್ದು, ಆನೆ ಓಡಿಹೋಗಿರುವುದು ಕಂಡು ಬಂದಿದೆ.
ರೆಸಾರ್ಟ್ನ ಸಿಬ್ಬಂದಿಗಳು ಬೆಂಕಿ ಮೂಲಕ ಆನೆಯನ್ನು ಎದುರಿಸಲು ಈ ರೀತಿ ಮಾಡಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಹೊತ್ತಿದ ಕೋಲಿನ ಮೂಲಕ ಈ ಪ್ರಯತ್ನ ನಡೆಸಿದ್ದಾರೆ ಏನು ಆಗುತ್ತಿರಲಿಲ್ಲ. ಟೈರ್ ಆದ ಕಾರಣ ಅದು ಆನೆ ಕಿವಿಯಲ್ಲಿ ಹೋಗಿ ಸಿಲಿಕಿದೆ. ಇದರಿಂದ ಆನೆ ಕಿವಿ ಸೇರಿದಂತೆ ದೇಹದ ಕೆಲಭಾಗ ಸುಟ್ಟಿದೆ ಎಂದಿದ್ದಾರೆ.
ಗಾಯಗೊಂಡ ಆನೆ ಬಳಿಕ ಅಣೆಕಟ್ಟಿನ ಬಳಿ ಮಲಗಿದೆ. ಇದನ್ನು ಗಮನಿಸಿದ ಪಶುವೈದ್ಯರು ತಕ್ಷಣವೇ ಅದಕ್ಕೆ ಚಿಕಿತ್ಸೆ ನೀಡಿ ನೋವು ಶಮನವಾಗುವಂತೆ ಮಾಡಿದರೂ ಅದು ವ್ಯರ್ಥವಾಗಿದೆ. ಆನೆಯು ಸೆಪ್ಟಿಕ್ ಪಿಸ್ಟಿಲಾ ಮತ್ತು ರಕ್ತಹೀನತೆ ಹಾಗೂ ಹೈಪೋವೊಲೆಮಿಯಾದಿಂದ ರಕ್ತಸ್ರಾವಗೊಂಡು ಸಾವನ್ನಪ್ಪಿದೆ. ಸುಟ್ಟುಗಾಯಗಳಿಂದ ಅಲ್ಲದ ಎಂದು ಅವರು ತಿಳಿಸಿದ್ದಾರೆ.
(ವರದಿ: ದೀಪಾಬಾಲಕೃಷ್ಣ)
Published by:
Seema R
First published:
January 22, 2021, 10:43 PM IST