ರಿವರ್ಸ್​ ಗೇರ್​ ಇರುವ ಈ ಸ್ಕೂಟರ್​ ಪೆಟ್ರೋಲ್​ ಇಲ್ದೆ 75 ಕಿ.ಮೀ ಮೈಲೇಜ್ ನೀಡುತ್ತೆ..!

ಇನ್ಫೋಟೈನ್ಮೆಂಟ್ ಸಿಸ್ಟಂ ವಾಟರ್​ ಪ್ರೂಫ್​ ಆಗಿದ್ದು, ಇಲ್ಲಿ ನಿಮ್ಮ ಡ್ರೈವಿಂಗ್ ಲೈಸನ್ಸ್​ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್​ಲೋಡ್​ ಮಾಡಿಕೊಳ್ಳಬಹುದು.

zahir | news18
Updated:January 1, 2019, 6:39 PM IST
ರಿವರ್ಸ್​ ಗೇರ್​ ಇರುವ ಈ ಸ್ಕೂಟರ್​ ಪೆಟ್ರೋಲ್​ ಇಲ್ದೆ 75 ಕಿ.ಮೀ ಮೈಲೇಜ್ ನೀಡುತ್ತೆ..!
@atherenergy.com
zahir | news18
Updated: January 1, 2019, 6:39 PM IST
ಒಂದೆಡೆ ಏರುತ್ತಿರುವ ಇಂಧನ ಬೆಲೆ, ಮತ್ತೊಂದೆಡೆ ಪರಿಸರ ಮಾಲಿನ್ಯ. ಇವಕ್ಕೆಲ್ಲ ಪರಿಹಾರ ಎಂಬಂತೆ ಕೇಂದ್ರ ಸರ್ಕಾರ ಎಲೆಕ್ಟ್ರಿಕ್​ ವಾಹನಗಳ ತಯಾರಿಕೆಗೆ ಪ್ರೋತ್ಸಾಹ ನೀಡಿದೆ. ಹೀಗಾಗಿಯೇ ದೇಶದಲ್ಲಿ ಬ್ಯಾಟರಿ ಚಾಲಿತ ವಾಹನಗಳ ಉತ್ಪಾದನೆಯ ಕಡೆ ಹಲವು ಕಂಪೆನಿಗಳು ಮುಖ ಮಾಡಿದೆ. ಅದರಲ್ಲಿ ಮುಖ್ಯವಾಗಿ ಈಗಾಗಲೇ ಕೆಲವೊಂದು ಕಂಪೆನಿಗಳ ಇ-ಸ್ಕೂಟರ್​ಗಳು ಮಾರುಕಟ್ಟೆ ಪ್ರವೇಶಿಸಿದೆ.

ಮತ್ತಷ್ಟು ಆಟೋ ಮೊಬೈಲ್​ ಕಂಪೆನಿಗಳು ಅತ್ಯಾರ್ಕಷಕ ಎಲೆಕ್ಟ್ರಿಕ್​ ವಾಹನಗಳನ್ನು ಪರಿಚಯಿಸಲು ಮುಂದಾಗಿದೆ. ಇದೀಗ ಅಥರ್ ಎನರ್ಜಿ ಎಂಬ ಕಂಪೆನಿಯೊಂದು ಹೊಸ ಮಾದರಿ ಎಲೆಕ್ಟ್ರಿಕ್​ ಸ್ಕೂಟರ್​ನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್​ನ ವಿಶೇಷತೆ ಮತ್ತು ಸೌಲಭ್ಯಗಳೇನು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಅಂಡ್ರಾಯ್ಡ್​ ಅಪರೇಟಿಂಗ್ ಸಿಸ್ಟಂ

ಅಥರ್​ ಎಸ್​340 ಎಂಬ ಈ ಇ-ಸ್ಕೂಟರ್​ ಸಂಪೂರ್ಣ ವಿದ್ಯುತ್​ ಚಾಲಿತ ವಾಹನ. ಇದರ ಮುಖ್ಯ ವಿಶೇಷತೆ ಎಂದು ಇದರಲ್ಲಿ ಕಾರುಗಳಲ್ಲಿರುವ ಇನ್ಫೋಟೈನ್ಮೆಂಟ್ ಸಿಸ್ಟಂ ಅಳವಡಿಸಿರುವುದು. ಈ ರೀತಿಯ ಸಿಸ್ಟಂ ಸೌಲಭ್ಯವಿರುವ ಮೊದಲ ಸ್ಕೂಟರ್ ಅಥರ್ ಎಸ್ 340. ಸ್ಪೀಡೋಮೀಟರ್​ ಬದಲಾಗಿ ಈ ಸಿಸ್ಟಂ ಅನ್ನು ನೀಡಲಾಗಿದ್ದು,  ಅಂಡ್ರಾಯ್ಡ್​ ಅಪರೇಟಿಂಗ್ ಸಿಸ್ಟಂನಿಂದ ಕಾರ್ಯಾಚರಿಸಲಿದೆ. ಈ ಪ್ರೊಜೆಕ್ಷನ್ ಸಿಸ್ಟಂ ಟಚ್​ ಸ್ಕ್ರೀನ್​ ಆಗಿದ್ದು, ಇಲ್ಲಿ ನೀವು ನೆವಿಗೇಷನ್, ಪಾರ್ಕಿಂಗ್ ಅಸಿಸ್ಟ್​, ಗೂಗಲ್ ಮ್ಯಾಪ್, ಚಾರ್ಜರ್​ ಸೇರಿದಂತೆ ಅಂಡಾಯ್ಡ್​ ಮೊಬೈಲ್​ನಲ್ಲಿ ಸಿಗುವ ಹಲವು ಮೋಡ್​ಗಳನ್ನು ಬಳಸಿಕೊಳ್ಳಬಹುದು.

@atherenergy.com


ಲೈಸೆನ್ಸ್​ ಅಪ್​ಲೋಡ್​ ಮಾಡಬಹುದು
ಇನ್ಫೋಟೈನ್ಮೆಂಟ್ ಸಿಸ್ಟಂ ವಾಟರ್​ ಪ್ರೂಫ್​ ಆಗಿದ್ದು, ಇಲ್ಲಿ ನಿಮ್ಮ ಡ್ರೈವಿಂಗ್ ಲೈಸನ್ಸ್​ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್​ಲೋಡ್​ ಮಾಡಿಕೊಳ್ಳಬಹುದು. ಈ ರೀತಿಯ ಹೊಸ ಸೌಲಭ್ಯದಿಂದ ದಾಖಲೆಗಳನ್ನು ಮರೆತು ಹೋಗುವುದು ಮತ್ತು ಡ್ಯಾಕುಮೆಂಟ್​ ಕಳೆದು ಹೋಗುವ ತೊಂದರೆಗಳಿಂದ ಪಾರಾಗಬಹುದು.

ಇದನ್ನೂ ಓದಿ: ಹೊಸ ವರ್ಷಕ್ಕೆ ಕೇಂದ್ರದಿಂದ ಭರ್ಜರಿ ಗಿಫ್ಟ್​: ಗ್ಯಾಸ್​ ದರ 120 ರೂ. ಇಳಿಕೆ

ಫಾಸ್ಟ್​ ಚಾರ್ಜಿಂಗ್
ಅಥರ್ ಎಸ್ 340 ಸ್ಕೂಟರ್​ನ ಮತ್ತೊಂದು ವಿಶೇಷತೆ ಎಂದರೆ ವೇಗದ ಚಾರ್ಜಿಂಗ್. ಕೇವಲ 50 ನಿಮಿಷಗಳಲ್ಲಿ ಈ ಸ್ಕೂಟರ್​ನ್ನು ಶೇ.80 ರಷ್ಟು ಚಾರ್ಜ್​ ಮಾಡಿಕೊಳ್ಳಬಹುದಾಗಿದೆ. ಇದರಿಂದ ಚಾರ್ಜಿಂಗ್​ಗಾಗಿ ಹೆಚ್ಚಿನ ಸಮಯ ವ್ಯಯಿಸಬೇಕಾಗಿಲ್ಲ.

ಇದನ್ನೂ ಓದಿ: ಜೇಬಿನಲ್ಲೇ ಐಫೋನ್​ ಸ್ಫೋಟ: ಕೋರ್ಟ್​ ಮೆಟ್ಟಿಲೇರಿದ ಗ್ರಾಹಕ

ಉತ್ತಮ ಮೈಲೇಜ್
ಒಂದು ಬಾರಿ ಚಾರ್ಜ್​ ಮಾಡಿಕೊಂಡರೆ ಬರೋಬ್ಬರಿ 75 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಇದರ ಟಾಪ್​ ಸ್ಪೀಡ್​ 80kmph ಆಗಿದ್ದು, ಚಾರ್ಜಿಂಗ್ ವ್ಯವಸ್ಥೆಯಿದ್ದರೆ ದೂರದ ಊರುಗಳಿಗೂ ಹೋಗಿ ಬರಬಹುದು.

ಇದನ್ನೂ ಓದಿ; ಹೊಸ ವರ್ಷದಲ್ಲಿ ಕೇವಲ 500 ರೂ. ಉಳಿತಾಯ ಮಾಡಿ ಕೋಟ್ಯಾಧಿಪತಿಗಳಾಗಿ..!

ರಿವರ್ಸ್​​ ಗೇರ್
ಅಥರ್ ಎಸ್ 340 ಸ್ಕೂಟರ್​ನ ಹೊಸ ಆಯ್ಕೆ ಎಂದರೆ ಇದರಲ್ಲಿ ರಿವರ್ಸ್​​ ಗೇರ್​ ನೀಡಿರುವುದು. ಈ ಗೇರ್​ ಬಳಸಿ ಸುಲಭವಾಗಿ ಸ್ಕೂಟರ್​ನ್ನು ಹಿಮ್ಮುಖದ ಕಡೆ ಚಲಿಸುವಂತೆ ಮಾಡಬಹುದು. ಇದರಿಂದ ಸ್ಕೂಟರ್​ನ್ನು ತಿರುಗಿಸಲು ಸುಲಭವಾಗಲಿದೆ.

ಅಥರ್ ಎಸ್ 340 ಬೆಲೆ
ಮೇಕ್​ ಇನ್​ ಇಂಡಿಯಾ ಯೋಜನೆಯಲ್ಲಿ ನಿರ್ಮಾಣವಾಗಿರುವ ಹೊಸ ಸ್ಕೂಟರ್​ನ ಮಾರುಕಟ್ಟೆ ಬೆಲೆ ಇನ್ನಷ್ಟೇ ನಿಗದಿ ಪಡಿಸಬೇಕಿದೆ. ಆದರೂ ಈ ಹೊಸ ಸ್ಕೂಟರ್​ನ ಬೆಲೆ ಒಂದು ಲಕ್ಷ 10 ಸಾವಿರ ಆಗಿರಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಳೆದ ವರ್ಷ ಬಿಡುಗಡೆಯಾದ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್​ಫೋನ್​ಗಳು

First published:January 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...