HOME » NEWS » National-international » ELECTIONS RESULTS 2021 BJP ZERO PERFORMANCE IN KERALA ASSEMBLY MAK

Elections Results 2021: ಕೇರಳದಲ್ಲಿ ಬಿಜೆಪಿ ಶೂನ್ಯ ಸಾಧನೆ, ಇದ್ದ ಒಂದು ಕ್ಷೇತ್ರವನ್ನೂ ಕಳೆದುಕೊಂಡ ಕಮಲ!

ಮುಖ್ಯಮಂತ್ರಿ ಪಿಣರಾಯಿ ಈ ಹಿಂದೆ ಬಿಜೆಪಿಗೆ ಇರುವ ಒಂದು ಕ್ಷೇತ್ರವನ್ನು ಕೂಡಾ ‘ಕ್ಲೋಸ್’ ಮಾಡುವುದಾಗಿ ಹೇಳಿದ್ದರು. ಇದೀಗ ತಾವು ಹೇಳಿದಂತೆಯೇ ಬಿಜೆಪಿಯನ್ನು ಮತ್ತೆ ಶೂನ್ಯದತ್ತ ನೂಕಿ ಸರ್ಕಾರ ರಚಿಸಲು ಮುಂದಾಗಿದ್ದಾರೆ.

news18-kannada
Updated:May 2, 2021, 4:44 PM IST
Elections Results 2021: ಕೇರಳದಲ್ಲಿ ಬಿಜೆಪಿ ಶೂನ್ಯ ಸಾಧನೆ, ಇದ್ದ ಒಂದು ಕ್ಷೇತ್ರವನ್ನೂ ಕಳೆದುಕೊಂಡ ಕಮಲ!
ಪ್ರಾತಿನಿಧಿಕ ಚಿತ್ರ.
  • Share this:
ಕೊಚ್ಚಿ (ಮೇ 01); ಇತ್ತೀಚೆಗೆ ಅಂತ್ಯವಾಗಿದ್ದ ಪಂಚರಾಜ್ಯ ಚುನಾವಣೆಗಳ ಪೈಕಿ ಕೇರಳ ಸಹ ಅತ್ಯಂತ ಗಮನ ಸೆಳೆದಿತ್ತು. ಕೇರಳದ ಮತದಾರರ ಮಟ್ಟಿಗೆ ಎಲ್​ಡಿಎಫ್ ಹಾಗೂ ಯುಡಿಎಫ್ ಒಂದೊಂದು ಅವಧಿಗೆ ಅಧಿಕಾರ ಅನುಭವಿಸುವುದು ಕಾಮನ್. ಇದೇ ಕಾರಣಕ್ಕೆ ಈ ಭಾರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತರೂಢ ಎಲ್​ಡಿಎಫ್​ ಸೋಲನುಭವಿಸಲಿದೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್​ ನೇತೃತ್ವದ ಯುಡಿಎಫ್​ ಅಧಿಕಾರಕ್ಕೆ ಏರಲಿದೆ ಎಂದು ಚುನಾವಣೆಗೆ ಮುನ್ನವೇ ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸಿದ್ದರು. ಆದರೆ, ಇಂದು ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಪಿಣರಾಯಿ ವಿಜಯನ್ ಅಧಿಕಾರವನ್ನು ಎರಡನೇ ಅವಧಿಗೆ ಉಳಿಸಿಕೊಳ್ಳುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದಾರೆ. ಆದರೆ, ಬಿಜೆಪಿ ಮಾತ್ರ ಇದ್ದ ಒಂದು ಸ್ಥಾನವನ್ನೂ ಕಳೆದುಕೊಳ್ಳುವ ಮೂಲಕ ಕಮ್ಯೂನಿಸ್ಟ್​ ನೆಲದಲ್ಲಿ ತೀವ್ರ ಮುಖಭಂಗ ಅನುಭವಿಸಿದೆ.

ಕೇರಳದಲ್ಲಿ ಬಿಜೆಪಿ ಜಂಡಾ ಹಾರಿಸಬೇಕು, ಸರ್ಕಾರ ರಚಿಸಬೇಕು ಎಂಬುದು ಬಿಜೆಪಿ ಕೇಂದ್ರ ನಾಯಕರ ಬಹುದಿನದ ಕನಸು. ಇದೇ ಕಾರಣಕ್ಕೆ ಶಬರಿಮಲೆ ಅಯ್ಯಪ್ಪನ ವಿವಾದಿಂದ ಹಿಡಿದು ಅನೇಕ ವಿವಾದಗಳನ್ನು ಮುಂದಿಟ್ಟು ಹಿಂದೂಗಳನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಿ ತನ್ನ ಎಂದಿನ ರಾಜಕೀಯ ಸೂತ್ರವನ್ನು ಮುನ್ನಡೆಸಲು ಅನುವಾಗಿತ್ತು. ಆದರೆ, ಕೇರಳದ ಮತದಾರ ಈ ಯಾವ ಮೋಡಿಗೂ ಒಳಗಾದಂತೆ ಕಾಣುತ್ತಿಲ್ಲ.

ಮತ ಎಣಿಕೆ ಆರಂಭದಲ್ಲಿ ಕೇರಳದ ಪಾಲಕ್ಕಾಡ್, ಕಾಸರಗೋಡ್‌, ನೇಮಂನಲ್ಲಿ ಬಿಜೆಪಿ ಮುನ್ನಡೆಯಲ್ಲಿತ್ತು. ಇದೀಗ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಮುಗ್ಗರಿಸಿದ್ದು ಈ ಹಿಂದೆ ಗೆಲುವು ಸಾಧಿಸಿದ್ದ ‘ನೇಮಂ’ ಕ್ಷೇತ್ರದಲ್ಲೂ ಹಿನ್ನಡೆ ಸಾಧಿಸಿದೆ.

ಮುಖ್ಯಮಂತ್ರಿ ಪಿಣರಾಯಿ ಈ ಹಿಂದೆ ಬಿಜೆಪಿಗೆ ಇರುವ ಒಂದು ಕ್ಷೇತ್ರವನ್ನು ಕೂಡಾ ‘ಕ್ಲೋಸ್’ ಮಾಡುವುದಾಗಿ ಹೇಳಿದ್ದರು. ಇದೀಗ ತಾವು ಹೇಳಿದಂತೆಯೇ ಬಿಜೆಪಿಯನ್ನು ಮತ್ತೆ ಶೂನ್ಯದತ್ತ ನೂಕಿ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಒಟ್ಟಾರೆ ಮೋದಿ ಮೋಡಿ ನಡುವೆಯೂ ಕೇರಳದಲ್ಲಿ ಬಿಜೆಪಿ ಶೂನ್ಯ ಸಾಧನೆ ಪಕ್ಷಕ್ಕೆ ಮತ್ತು ನಾಯಕರಿಗೆ ಅತೊದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಕೇರಳದಲ್ಲಿ ನಿಜವಾದ ಸಮೀಕ್ಷೆಗಳು:

ರಿಪಬ್ಲಿಕ್-ಸಿಎನ್ಎಕ್ಸ್ ಚುನಾವಣಾ ಸಮೀಕ್ಷೆಯ ಪ್ರಕಾರ ಎಲ್​ಡಿಎಫ್ 72-80 ಸ್ಥಾನಗಳನ್ನು ಪಡೆದು ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಆದರೆ ಕಾಂಗ್ರೆಸ್-ಯುಡಿಎಫ್ ಮೈತ್ರಿ 58-64 ಸ್ಥಾನಗಳನ್ನು ಪಡೆಯುವ ಮೂಲಕ ಮತ್ತೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲಿದೆ ಎಂದು ಅಂದಾಜಿಸಿತ್ತು. ಇನ್ನೂ ಬಿಜೆಪಿ - ಎನ್‌ಡಿಎ ಮೈತ್ರಿ ಸುಮಾರು 1 ರಿಂದ 5 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಿಎನ್‌ಎಕ್ಸ್ ಸಮೀಕ್ಷೆ ವ್ಯಾಖ್ಯಾನಿಸಿತ್ತು.

ಇದನ್ನೂ ಓದಿ: Kerala Exit Poll Results 2021: ಕೇರಳದಲ್ಲಿ ಮತ್ತೆ ವಿಜಯ ಸಾಧಿಸಲಿದೆ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಎಲ್​ಡಿಎಫ್!ಇದಲ್ಲದೆ, ಆಕ್ಸಿಸ್ ಮೈ ಇಂಡಿಯಾ 2021 ಸಮೀಕ್ಷೆಯ ಪ್ರಕಾರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್​ಡಿಎಫ್ ಮತ್ತೆ ಅಧಿಕಾರಕ್ಕೆ ಏರಲಿದೆ. ಆಕ್ಸಿಸ್ ಮೈ ಇಂಡಿಯಾ ಭವಿಷ್ಯವಾಣಿಯಂತೆ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಮೈತ್ರಿ ಸುಮಾರು 104-120 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್-ಯುಡಿಎಫ್ ಕೇವಲ 20-36 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಎನ್‌ಡಿಎ ಮೈತ್ರಿಗೆ ಆಕ್ಸಿಸ್ ಮೈ ಇಂಡಿಯಾ 0-2 ಸ್ಥಾನಗಳನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ವ್ಯಾಖ್ಯಾನಿಸಿತ್ತು.

ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಐದು ರಾಜ್ಯಗಳ ಜೊತೆಗೆ ಕೇರಳ ಸಹ ಚುನಾವಣೆಯನ್ನು ಎದುರಿಸಿತ್ತು. 15 ನೇ ವಿಧಾನಸಭೆಗೆ 140 ಸದಸ್ಯರನ್ನು ರಾಜ್ಯಕ್ಕೆ ಆಯ್ಕೆ ಮಾಡಲು ಏಪ್ರಿಲ್ 6 ರಂದು ಕೇರಳದಲ್ಲಿ ಮತದಾನ ನಡೆಯಿತು. ಎಲ್​ಡಿಎಫ್, ಯುಡಿಎಫ್ ಹಾಗೂ ಎನ್​ಡಿಎ ಮೈತ್ರಿಕೂಟದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಸಹ ಎಲ್​ಡಿಎಫ್ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಈ ಎಲ್ಲಾ ಸಮೀಕ್ಷೆಗಳು ಇದೀಗ ನಿಜವಾಗಿದೆ.
Published by: MAshok Kumar
First published: May 2, 2021, 4:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories