ಪಶ್ಚಿಮಬಂಗಾಳಕ್ಕಿಂತ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ಹೆಚ್ಚು ಶಾಂತಿಯುತವಾಗಿ ನಡೆದಿದೆ; ದೀದಿ ವಿರುದ್ಧ ಮೋದಿ ವಾಗ್ದಾಳಿ

ಚುನಾವಣಾ ಪ್ರಚಾರದ ವೇಳೆ ನ್ಯೂಸ್ 18ನ ಅಮಿತಾಬ್​ ಸಿನ್ಹಾ ಮತ್ತು ಬ್ರಜೇಶ್​ ಕುಮಾರ್ ಸಿಂಗ್​ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾತನಾಡಿದ ಪ್ರಧಾನಿ ಮೋದಿ, ಹಿಂಸಾಚಾರ ಘಟನೆ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು.

HR Ramesh | news18
Updated:May 15, 2019, 7:53 PM IST
ಪಶ್ಚಿಮಬಂಗಾಳಕ್ಕಿಂತ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ಹೆಚ್ಚು ಶಾಂತಿಯುತವಾಗಿ ನಡೆದಿದೆ; ದೀದಿ ವಿರುದ್ಧ ಮೋದಿ ವಾಗ್ದಾಳಿ
ಪ್ರಧಾನಿ ಮೋದಿ
  • News18
  • Last Updated: May 15, 2019, 7:53 PM IST
  • Share this:
ಬಿಹಾರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೋಲ್ಕತದಲ್ಲಿ ನೆನ್ನೆ ನಡೆಸಿದ ರೋಡ್​ ಶೋ ವೇಳೆ ನಡೆದ ಹಿಂಸಾಚಾರ ಘಟನೆ ಸಂಬಂಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಪ್ರಧಾನಿ ಮೋದಿ ಅವರು ತೀವ್ರ ವಾಗ್ದಾಳಿ ನಡೆಸಿದರು.

ಚುನಾವಣಾ ಪ್ರಚಾರದ ವೇಳೆ ನ್ಯೂಸ್ 18ನ ಅಮಿತಾಬ್​ ಸಿನ್ಹಾ ಮತ್ತು ಬ್ರಜೇಶ್​ ಕುಮಾರ್ ಸಿಂಗ್​ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾತನಾಡಿದ ಪ್ರಧಾನಿ ಮೋದಿ, ಹಿಂಸಾಚಾರ ಘಟನೆ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಈ ಚುನಾವಣೆಯಲ್ಲಿ ಪಶ್ಚಿಮಬಂಗಾಳದಲ್ಲಿ ಪ್ರತಿ ಹಂತದ ಮತದಾನದ ವೇಳೆ ಹಿಂಸಾಚಾರ ನಡೆದಿರುವ ಬಗ್ಗೆ ವರದಿಗಳು ಬಂದಿವೆ. ಈ ರಾಜ್ಯಕ್ಕಿಂತ ಜಮ್ಮು-ಕಾಶ್ಮೀರದಲ್ಲಿ ಮತದಾನ ಹೆಚ್ಚು ಶಾಂತಿಯುತವಾಗಿ ನಡೆದಿದೆ ಎಂದು ಟೀಕಿಸಿದರು.

ಮಮತಾ ಬ್ಯಾನರ್ಜಿ ಬಿಜೆಪಿ ಸೇರಿದಂತೆ ಕಾಂಗ್ರೆಸ್​ ಅಥವಾ ಇತರೆ ಎಡ ಪಕ್ಷಗಳಿಗೆ ಹೆದರದೆ ಇರಬಹುದು. ಆದರೆ, ಅವರು ಸಾರ್ವಜನಿಕರು ಮತ್ತು ಸತ್ಯಕ್ಕೆ ಹೆದರಲೇಬೇಕು. ಆಡಳಿತದಲ್ಲಿ ವಿಫಲರಾಗಿರುವ ದೀದಿ ಸರ್ಕಾರದ ಬಗ್ಗೆ ಸತ್ಯವನ್ನು ಜನರು ಅರಿತುಕೊಳ್ಳಬೇಕು. ಟಿಎಂಸಿ ಸರ್ಕಾರ ಪಕ್ಷಗಳ ವಿರುದ್ಧ ಹೋರಾಡುವ ಬದಲು ಜನರ ವಿರುದ್ಧ ಹೋರಾಡುತ್ತಿದೆ ಎಂದು ಮೋದಿ ಅವರು ಪ್ರಹಾರ ನಡೆಸಿದರು.

ಇದನ್ನು ಓದಿ: ಪಶ್ಚಿಮಬಂಗಾಳ ಹಿಂಸಾಚಾರಕ್ಕೆ ಮಮತಾ ದೀದಿಯೇ ಕಾರಣ, ಚುನಾವಣಾ ಆಯೋಗ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿ; ಅಮಿತ್ ಶಾ

ಅಮಿತ್ ಶಾ ರೋಡ್​ ಶೋ ವೇಳೆ ನಡೆದ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದು, ಹಿಂಸಾಚಾರಕ್ಕೆ ತಿರುಗಿತ್ತು.ಘಟನೆ ಸಂಬಂಧ ಚರ್ಚಿಸಲು ಟಿಎಂಸಿ ಚುನಾವಣಾ ಆಯೋಗವನ್ನು ಕೋರಿದೆ.  ಅಲ್ಲದೇ, ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಪ್ರಚಾರ ನಡೆಸದಂತೆ ನಿಷೇಧ ಹೇರಲು ಆಯೋಗವನ್ನು ಒತ್ತಾಯಿಸಿದೆ. ಅಲ್ಲದೇ, ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದೆ.

ಬಂಗಾಳದ ಪರಿಸ್ಥಿತಿಯನ್ನು ಜಮ್ಮು-ಕಾಶ್ಮೀರದೊಂದಿಗೆ ಹೋಲಿಕೆ ಮಾಡಿರುವ ಪ್ರಧಾನಿ ಮೋದಿ, ಈ ರಾಜ್ಯಕ್ಕಿಂತ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ಹೆಚ್ಚು ಶಾಂತಿಯುತವಾಗಿ ನಡೆಯುತ್ತದೆ ಎಂದು ಹೇಳಿದ್ದಾರೆ. ಕಾಶ್ಮೀರದಲ್ಲಿ ಪಂಚಾಯತಿ ಚುನಾವಣೆ ವೇಳೆ ಒಂದೇ ಒಂದು ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿಲ್ಲ. ಪ್ರಸ್ತುತ ಈ ಚುನಾವಣೆಯಲ್ಲೂ ಕೂಡ ಗಲಭೆ ನಡೆದ ಬಗ್ಗೆ ವರದಿಯಾಗಿಲ್ಲ. ಆದರೆ, ಇದೇ ಸಮಯದಲ್ಲಿ ಪಶ್ಚಿಮಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಹಲವು ಮಂದಿ ಕೊಲೆಯಾದರು. ಈ ಚುನಾವಣೆಯ ಪ್ರತಿಹಂತದ ಮತದಾನದ ವೇಳೆಯೂ ಹಿಂಸಾಚಾರ ನಡೆದಿವೆ ಎಂದು ವಾಗ್ದಾಳಿ ನಡೆಸಿದರು.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'
First published:May 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading