ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್ನ್ನು (Gujarat Assembly Elections Results Today) ಬಿಜೆಪಿ ಮತ್ತೆ ತನ್ನ ತೆಕ್ಕೆಗೆ ಹಾಕಿಕೊಳ್ಳುವತ್ತ ಮುನ್ನುಗ್ಗುತ್ತಿದೆ. ಬಿಜೆಪಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವನ್ನು ಧೂಳೀಪಟಗೊಳಿಸಿ ಬಹುಮತದತ್ತ ಹೆಜ್ಜೆಹಾಕುತ್ತಿದೆ. ಬೆಳಗ್ಗೆ 10:15ರ ಅಪ್ಡೇಟ್ ಪ್ರಕಾರ ಬಿಜೆಪಿ 148 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಕಾಂಗ್ರೆಸ್ (Congress) ಕೇವಲ 18, ಆಮ್ ಆದ್ಮಿ 8 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಲ್ಲಿದೆ. ಮೂರನೇ ಹಂತದ ಮತ ಎಣಿಕೆಯ ನಂತರರ 11,131 ಮತಗಳಿಂದ ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್ (Hardik Patel) ಮುನ್ನಡೆ ಸಾಧಿಸಿದ್ದಾರೆ.
ಗುಜರಾತ್ ಗೆಲ್ಲಲು ಇಷ್ಟು ಸ್ಥಾನ ಸಾಕು
ಗುಜರಾತ್ನಲ್ಲಿ ಒಟ್ಟು 182 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತ ಸಾಧಿಸಲು ಬೇಕಾದ ಬಹುಮತದ ಸಂಖ್ಯೆ 92 ಆಗಿದೆ. ಇನ್ನು ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡರೆ ಗುಜರಾತ್ ಚುನಾವಣೆ ಬಹಳಷ್ಟು ಮಹತ್ವ ಪಡೆದುಕೊಳ್ಳುತ್ತದೆ.
ಹಾರ್ದಿಕ್ ಪಟೇಲ್ ಹಿನ್ನೆಲೆ
ಪಟೇಲ್ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ನಡೆಸಿದ ದೀರ್ಘ ಹೋರಾಟದ ಮೂಲಕ ಹಾರ್ದಿಕ್ ಪಟೇಲ್ ಮುನ್ನೆಲೆಗೆ ಬಂದಿದ್ದರು.
ಅಹಮದಾಬಾದ್ನ ವಿರಾಮಗಾಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಫೈರ್ಬ್ರಾಂಡ್ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಕಣಕ್ಕಿಳಿಸಿದೆ. ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಹಾರ್ದಿಕ್ ಪಟೇಲ್ ಕೂಡ ಒಬ್ಬರು. ಅವರು ಜೂನ್ನಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ಸೇರಿದ್ದರು. ಅವರ ಮೊದಲ ವಿಧಾನಸಭಾ ಚುನಾವಣೆಯು ಕಾಂಗ್ರೆಸ್ ಶಾಸಕ ಲಖಾಭಾಯಿ ಭಾರವಾಡ್ ಮತ್ತು ಎಎಪಿಯ ಅಮರಸಿಂಗ್ ಠಾಕೂರ್ ವಿರುದ್ಧವಾಗಿದೆ. ಇದಲ್ಲದೆ, ಖ್ಯಾತ ದಲಿತ ಕಾರ್ಯಕರ್ತ ಕಿರೀಟ್ ರಾಥೋಡ್ ಕೂಡ ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಸದ್ಯ ಅವರು ಸ್ಪರ್ಧಿಸಿದ ಮತದಾರರಿರುವ ವಿರಾಮಗಾಂ ವಿಧಾನಸಭಾ ಕ್ಷೇತ್ರದಲ್ಲಿ ಹಾರ್ದಿಕ್ ಪಟೇಲ್ ಸ್ಪರ್ಧಿಸಿದ್ದಾರೆ. ಇನ್ನು ಹಾರ್ದಿಕ್ ಪಟೇಲ್ ಸ್ಪರ್ಧಿಸಿರುವ ವೀರಮ್ಗಂ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3,2,574 ಮತದಾರರರಿದ್ದಾರೆ. 1,55,923 ಪುರುಷ ಮತದಾರರು, 1,46,620 ಮಹಿಳಾ ಮತದಾರರಿದ್ದಾರೆ. ಠಾಕೂರ್ ಮತದಾರರು 95000, ಪಟೇಲ್ 38000, ದಲಿತ 28000, ಕೋಲಿ ಪಟೇಲ್ 21000, ಬಲವಿ ಠಾಕೂರ್ 21000, ಮುಸ್ಲಿಂ 23000, ರಜಪೂತ ಸಮಾಜ 5000 ಮತಗಳಿವೆ.
ಇದನ್ನೂ ಓದಿ: Gujarat Election Results: 2024ರಲ್ಲಿ ಹೇಗಿರುತ್ತೆ ಕಾಂಗ್ರೆಸ್ ಸ್ಥಿತಿ? ನಿರ್ಧರಿಸುತ್ತೆ ಗುಜರಾತ್, ಹಿಮಾಚಲ ಫಲಿತಾಂಶ!
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಹುಮತ?
ಇನ್ನು ಹಿಮಾಚಲ ಪ್ರದೇಶದ ಮತ ಎಣಿಕೆಯತ್ತ (Himachal Pradesh Elections Results Today) ಗಮನ ಹರಿಸುವುದಾದರೆ ಒಟ್ಟು 68 ಕ್ಷೇತ್ರಗಳಲ್ಲಿ ಕಾಂಗ್ರೆಸ್ 35ರಲ್ಲಿ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 29 ಕ್ಷೇತ್ರಗಳಲ್ಲಿ ಗೆಲುವಿನತ್ತ ಸಾಗಿದ್ದು ಆಮ್ ಆದ್ಮಿ ಪಕ್ಷ ಗೆಲುವಿನ ಖಾತೆ ತೆಗೆಯುವ ಸಾಧ್ಯತೆ ಇನ್ನೂ ವ್ಯಕ್ತವಾಗಿಲ್ಲ.
ಇದನ್ನೂ ಓದಿ: Gujarat Election Result 2022: ಈ 10 ಜನಪ್ರಿಯ ನಾಯಕರ ಪ್ರತಿಷ್ಠೆ ಕಣಕ್ಕೆ, ಫಲಿತಾಂಶದಿಂದ ಭವಿಷ್ಯ ನಿರ್ಧಾರ
ಹಿಮಾಚಲದಲ್ಲಿ ಬಹುಮತ ಗಳಿಕೆಗೆ ಎಷ್ಟು ಸ್ಥಾನ ಬೇಕು?
ಇನ್ನು ಒಟ್ಟು 68 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತ್ನಲ್ಲಿ ಬಹುಮತ ಸಾಧಿಸಲು ಬೇಕಾದ ಮ್ಯಾಜಿಕ್ ನಂಬರ್ 35 ಆಗಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಅಂತರ ಬಹಳ ಕಡಿಮೆ ಇರುವುದರಿಂದ ಫಲಿತಾಂಶ ಯಾವ ಕ್ಷಣದಲ್ಲಾದರೂ ಬದಲಾಗುವ ಸಾಧ್ಯತೆ ಇದೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ ಮತ್ತೆ ಅಧಿಕಾರಕ್ಕೆ
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ ಅದಕ್ಕೆ ಸಂಜೀವಿನಿಯಾಗಲಿದೆ, ಏಕೆಂದರೆ ಬಹುಕಾಲದ ನಂತರ ತನ್ನದೇ ಆದ ಅರ್ಹತೆಯ ಮೇಲೆ ಕಾಂಗ್ರೆಸ್ ರಾಜ್ಯವೊಂದರ ಅಧಿಕಾರವನ್ನು ಪಡೆಯಲಿದೆ. ಪ್ರಸ್ತುತ ಕಾಂಗ್ರೆಸ್ ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಸರ್ಕಾರಗಳನ್ನು ಹೊಂದಿದೆ. ಹಿಮಾಚಲ ಪ್ರದೇಶದ ಗೆಲುವು ಕಾಂಗ್ರೆಸ್ಗೆ ಉತ್ತೇಜನ ನೀಡಲಿದೆ ಎಂದು ಕಾಂಗ್ರೆಸ್ನ ಮಾಜಿ ವಕ್ತಾರ ಸಂಜಯ್ ಝಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ