• Home
 • »
 • News
 • »
 • national-international
 • »
 • Election Results 2022: ಗುಜರಾತ್​ನಲ್ಲಿ ಬಿಜೆಪಿಗೆ ಮುನ್ನಡೆ, ಹಿಮಾಚಲದಲ್ಲಿ ತೀವ್ರ ಪೈಪೋಟಿ: ಹೀಗಿದೆ ಆರಂಭಿಕ ಟ್ರೆಂಡ್​

Election Results 2022: ಗುಜರಾತ್​ನಲ್ಲಿ ಬಿಜೆಪಿಗೆ ಮುನ್ನಡೆ, ಹಿಮಾಚಲದಲ್ಲಿ ತೀವ್ರ ಪೈಪೋಟಿ: ಹೀಗಿದೆ ಆರಂಭಿಕ ಟ್ರೆಂಡ್​

BJP, ಕಾಂಗ್ರೆಸ್​

BJP, ಕಾಂಗ್ರೆಸ್​

ಇಡೀ ದೇಶದ ಚಿತ್ತ ಸೆಳೆದಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಆರಂಭಿಕ ಟ್ರೆಂಡ್ ಹೇಗಿದೆ? ಯಾರು ಮುನ್ನಡೆ ಸಾಧಿಸಿದ್ದಾರೆ? ಇಲ್ಲಿದೆ ನೋಡಿ 9 ಗಂಟೆವರೆಗೆ ಬಂದ ಫಲಿತಾಂಶದ ವಿವರ.

 • News18 Kannada
 • 5-MIN READ
 • Last Updated :
 • Gujarat, India
 • Share this:

  ಅಹಮದಾಬಾದ್(ಡಿ.08): ಭಾರೀ ನಿರೀಕ್ಷೆ ಹುಟ್ಟಿಸಿರುವ ಗುಜರಾತ್​ (Gujarat Assembly Elections) ಹಾಗೂ ಹಿಮಾಚಲ ಪ್ರದೇಶ ಚುನಾವಣೆಯ (Himachal Pradesh Elections) ಫಲಿತಾಂಶ ಇಂದು ಸಿಗಲಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ, ಕಾಂಗ್ರೆಸ್​ ಹಾಗೂ ಆಪ್​ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಅಧಿಕಾರದ ಗದ್ದುಗೆ ಯಾರ ಪಾಲಾಗುತ್ತೆ ಎಂಬುವುದೇ ಭಾರೀ ಕುತೂಹಲ ಸೃಷ್ಟಿಸಿದೆ. ಈಗಾಗಲೇ ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್​ಗಳ ಅನ್ವಯ ಗುಜರಾತ್​ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಅಲ್ಪ ಮುನ್ನಡೆ ಕಾಯ್ದುಕೊಂಡಿದೆ. ಯಾವ ರಾಜ್ಯದಲ್ಲಿ ಹೇಗಿದೆ ಈ ಟ್ರೆಂಡ್​ ಇಲ್ಲಿದೆ ವಿವರ


  ಗುಜರಾತ್​ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಇತಿಹಾಸ ಸೃಷ್ಟಿಸುತ್ತಾ ಬಿಜೆಪಿ?


  ಆರಂಭಿಕ ಟ್ರೆಂಡ್ ಅನ್ವಯ ಮೋದಿ, ಅಮಿತ್ ಶಾ ತವರು ರಾಜ್ಯ ಗುಜರಾತ್​ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬೆಳಗ್ರಗೆ 9 ಗಂಟೆವರೆಗೆ ಬಂದ ಫಲಿತಾಂಶದನ್ವಯ ಬಿಜೆಪಿ 132 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, 41 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಈ ಚುನಾವಣೆಯಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಆಪ್​ ಕೇವಲ 4 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
  ಇದನ್ನೂ ಓದಿ: Gujarat Election Result 2022: ಈ 10 ಜನಪ್ರಿಯ ನಾಯಕರ ಪ್ರತಿಷ್ಠೆ ಕಣಕ್ಕೆ, ಫಲಿತಾಂಶದಿಂದ ಭವಿಷ್ಯ ನಿರ್ಧಾರ


  ಗುಜರಾತ್​ನಲ್ಲಿ ಒಟ್ಟು 182 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತ ಸಾಧಿಸಲು ಬೇಕಾದ ಬಹುಮತದ ಸಂಖ್ಯೆ 92 ಆಗಿದೆ. ಇನ್ನು ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡರೆ ಗುಜರಾತ್ ಚುನಾವಣೆ ಬಹಳಷ್ಟು ಮಹತ್ವ ಪಡೆದುಕೊಳ್ಳುತ್ತದೆ.


  ಹಿಮಾಚಲ ಪ್ರದೇಶದಲ್ಲಿ ಯಾರಿಗೆ ಮುನ್ನಡೆ?


  ಹಿಮಾಚಲ ಪ್ರದೇಶದ ರಾಜಕೀಯ ಇತಿಹಾಸದಲ್ಲಿ ಈವರೆಗೆ ಯಾವತ್ತೂ ಒಂದು ಬಾರಿ ಗೆದ್ದ ಪಕ್ಷ ಮತ್ತೊಮ್ಮೆ ಗೆದ್ದಿಲ್ಲ. ಆದರೆ ಬಿಜೆಪಿ ಈ ಸಂಪ್ರದಾಯವನ್ನು ಮುರಿಯುವ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗಾಗೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಗೊಳಿಸಿತ್ತು. ಸದ್ಯ ಆರಂಭಿಕ ಟ್ರೆಂಡ್​ ಗಮನಿಸಿದರೆ ಕಾಂಗ್ರೆಸ್​ ಕೊಂಚ ಮುನ್ನಡೆ ಸಾಧಿಸಿದೆ. ಹೌದು 31 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಪಡೆದಿದೆ. ಇತ್ತ ಕಾಂಗ್ರೆಸ್​ ಕೇವಲ 35 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಆದರೆ ಈ ನಡುವೆ ಆಪ್​ ಈವರೆಗೂ ತನ್ನ ಖಾತೆ ತೆರೆಯಲು ಸಾಧ್ಯವಾಗಿಲ್ಲ.


  ಇದನ್ನೂ ಓದಿ: Assembly Elections: ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ರೆಡಿಯಾಗಿದೆ ಬಿಜೆಪಿ ಮಾಸ್ಟರ್​ ಪ್ಲಾನ್!


  ಇನ್ನು ಒಟ್ಟು 68 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತ್​ನಲ್ಲಿ ಬಹುಮತ ಸಾಧಿಸಲು ಬೇಕಾದ ಮ್ಯಾಜಿಕ್ ನಂಬರ್ 35 ಆಗಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವಿನ ಅಂತರ ಬಹಳ ಕಡಿಮೆ ಇರುವುದರಿಂದ ಫಲಿತಾಂಶ ಯಾವ ಕ್ಷಣದಲ್ಲಾದರೂ ಬದಲಾಗುವ ಸಾಧ್ಯತೆ ಇದೆ.

  Published by:Precilla Olivia Dias
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು