Election Dates: ಅ. 28ರಿಂದ ನ. 7ರವರೆಗೆ 3 ಹಂತಗಳಲ್ಲಿ ಬಿಹಾರ ಚುನಾವಣೆ; ನ. 10ಕ್ಕೆ ಫಲಿತಾಂಶ

ಬಿಹಾರ ಚುನಾವಣೆ 3 ಹಂತಗಳಲ್ಲಿ ನಡೆಯಲಿದೆ. ನವೆಂಬರ್ 29ರೊಳಗೆ ಬಿಹಾರದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿಸಲು ನಿರ್ಧರಿಸಿದೆ. ದೇಶಾದ್ಯಂತ ಶಿರಾ, ಮಸ್ಕಿ ಸೇರಿದಂತೆ 65 ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಗಳೂ ಇದೇ ಸಮಯದಲ್ಲಿ ನಡೆಯಲಿವೆ.

news18
Updated:September 25, 2020, 1:27 PM IST
Election Dates: ಅ. 28ರಿಂದ ನ. 7ರವರೆಗೆ 3 ಹಂತಗಳಲ್ಲಿ ಬಿಹಾರ ಚುನಾವಣೆ; ನ. 10ಕ್ಕೆ ಫಲಿತಾಂಶ
ಸಾಂದರ್ಭಿಕ ಚಿತ್ರ.
  • News18
  • Last Updated: September 25, 2020, 1:27 PM IST
  • Share this:
ನವದೆಹಲಿ(ಸೆ. 25): ಬಿಹಾರ ವಿಧಾನಸಭಾ ಚುನಾವಣೆ ಹಾಗೂ ದೇಶಾದ್ಯಂತ ಉಪಚುನಾವಣೆಗಳಿಗೆ ಚುನಾವಣಾ ಆಯೋಗ ದಿನಾಂಕಗಳನ್ನ ಪ್ರಕಟಿಸಿದೆ. ಬಿಹಾರ ಚುನಾವಣೆ 3 ಹಂತಗಳಲ್ಲಿ ನಡೆಯಲಿದೆ. ಅಕ್ಟೋಬರ್ 28ಕ್ಕೆ ಮೊದಲ ಹಂತ, ನವೆಂಬರ್ 3ಕ್ಕೆ ಎರಡನೇ ಹಂತ, ನವೆಂಬರ್ 7ಕ್ಕೆ ಮೂರನೇ ಹಂತದ ಮತದಾನ ನಡೆಯಲಿದೆ. ನವೆಂಬರ್ 10ಕ್ಕೆ ಮತ ಎಣಿಕೆ ಆಗಲಿದೆ. ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರು ಈ ವಿಚಾರ ಪ್ರಕಟಿಸಿದ್ದಾರೆ. ಕೋವಿಡ್ ದೃಷ್ಟಿಯಿಂದ ಮತದಾನದ ಅವಧಿಯನ್ನು 1 ಗಂಟೆ ವಿಸ್ತರಿಸಲಾಗಿದೆ. ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯವರೆಗೆ ಮತದಾನ ನಡೆಯಲಿದೆ. ದೇಶಾದ್ಯಂತ ಶಿರಾ, ಮಸ್ಕಿ ಸೇರಿದಂತೆ 65 ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಗಳ ಫಲಿತಾಂಶವೂ ನವೆಂಬರ್ 10ಕ್ಕೆ ಪ್ರಕಟವಾಗಲಿದೆ.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಅಕ್ಟೋಬರ್ 28ರ ಮೊದಲ ಹಂತದ ಮತದಾನದಲ್ಲಿ 71 ಸ್ಥಾನಗಳು, ನವೆಂಬರ್ 3ರಂದು 94 ಸ್ಥಾನಗಳು, ನವೆಂಬರ್ 7ರಂದು 78 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ಬಿಹಾರ ಚುನಾವಣೆ ಕೊರೋನಾ ಬಿಕ್ಕಟ್ಟಿನ ಮಧ್ಯೆ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಚುನಾವಣೆ ಆಗಿದೆ. ಬಿಹಾರ ಚುನಾವಣೆಯಲ್ಲಿ ಕೊರೋನಾ ಮುಂಜಾಗ್ರತಾ ಕ್ರಮವಾಗಿ 7 ಲಕ್ಷ ಸ್ಯಾನಿಟೈಸರ್​ಗಳು, 46 ಲಕ್ಷ ಮಾಸ್ಕ್​ಗಳು, 6 ಲಕ್ಷ ಪಿಪಿಇ ಕಿಟ್​ಗಳು, 7.6 ಲಕ್ಷ ಫೇಸ್ ಶೀಲ್ಡ್​ಗಳು ಹಾಗೂ 23 ಲಕ್ಷ ಕೈವಸುಗಳ ವ್ಯವಸ್ಥೆ ಮಾಡಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ತಿಳಿಸಿದ್ದಾರೆ.
Published by: Vijayasarthy SN
First published: September 25, 2020, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading