ರಾಜಕೀಯ ಪಕ್ಷಗಳ ಬೇಡಿಕೆ ಹಿನ್ನಲೆ Punjab Election ದಿನಾಂಕ ಮುಂದೂಡಿಕೆ; ಫೆ 20ಕ್ಕೆ ಮತದಾನ

ಈ ಹಿಂದೆ ನಿಗದಿಸಿದ್ದ ಫೆ 14ರ ಬದಲಿಗೆ ಫೆ 20ರಂದು (Feb 20) ಪಂಜಾಬ್​​​ನಲ್ಲಿ ಏಕ ಹಂತದ ಮತದಾನ ನಡೆಯಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಜ. 17): ಈ ಹಿಂದೆ ನಿಗದಿಯಾಗಿದ್ದ ಪಂಜಾಬ್​ ವಿಧಾನಸಭಾ ಚುನಾವಣಾ (Punjab Election) ದಿನಾಂಕವನ್ನು ಮುಂದೂಡಿ ಚುನಾವಣಾ ಆಯೋಗ ಹೊಸ ದಿನಾಂಕ ಪ್ರಕಟಿಸಿದೆ. ಈ ಹಿಂದೆ ನಿಗದಿಸಿದ್ದ ಫೆ 14ರ ಬದಲಿಗೆ ಫೆ 20ರಂದು (Feb 20) ಪಂಜಾಬ್​​​ನಲ್ಲಿ ಏಕ ಹಂತದ ಮತದಾನ ನಡೆಯಲಿದೆ. ಗುರು ರವಿದಾಸ್​ ಜಯಂತಿ (Guru Ravidas Jayanti) ಹಿನ್ನಲೆ ಈ ದಿನಾಂಕವನ್ನು ಬದಲಾಯಿಸುವಂತೆ ಆಡಳಿತಾರೂಢ ಕಾಂಗ್ರೆಸ್​, ಬಿಜೆಪಿ ಸೇರಿದಂತೆ ಸ್ಥಳೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಅದರಂತೆ ಚುನಾವಣಾ ದಿನಾಂಕವನ್ನು ಮರು ಪರಿಶೀಲಿಸಿದ ಆಯೋಗ ಮತದಾನದ ದಿನಾಂಕವನ್ನು ಫೆ 20ಕ್ಕೆ ನಿಗದಿಸಿ ಘೋಷಣೆ ಹೊರಡಿಸಿದೆ.

  ಗುರು ರವಿದಾಸ್​ ಜಯಂತಿ ಆಚರಣೆ ಹಿನ್ನಲೆ 

  ರಾಜ್ಯದಲ್ಲಿ ಗುರು ರವಿದಾಸ್​ ಜಯಂತಿ ಆಚರಣೆ ನಡೆಯಲಿದೆ. ರಾಜ್ಯದಂತ ಜನರು ಈ ಜಯಂತಿ ಆಚರಣೆ ಮಾಡಲಿದ್ದಾರೆ. ಈ ಹಿನ್ನಲೆ ಭಕ್ತರು ಈ ದಿನದಂದು ಉತ್ತರ ಪ್ರದೇಶದ ವಾರಣಾಸಿಗೆ ತೆರಳುತ್ತಾರೆ. ಈ ಹಿನ್ನಲೆ ಮತದಾನದ ಸಂಖ್ಯೆ ಇಳಿಕೆಯಾಗುವ ಸಾಧ್ಯತೆ ಇದೆ. ಈ ಕಾರಣದಿಂದ ದಿನಾಂಕಗಳನ್ನು ಮರಿ ಪರಿಶೀಲನೆ ಮಾಡುವಂತೆ ಮುಖ್ಯಮಂತ್ರಿಗಳು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಅದರಂತೆ ಇದೀಗ ಹೊಸ ದಿನಾಂಕ ಪ್ರಕಟಿಸಲಾಗಿದೆ.

  ಹೊಸ ದಿನಾಂಕ

  ಇನ್ನು ಪಂಜಾಬ್​ನಲ್ಲಿ ಚುನಾವಣಾ ನಾಮಪತ್ರ ಸಲ್ಲಿಕೆ 25 ಜನವರಿಯಿಂದ ಆರಂಭವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ಕಡೆ ದಿನಾಂಕ ಫೆ 1 ಆಗಿದೆ. ನಾಮಪತ್ರ ಹಿಂಪಡೆಯಲಿ ಫೆ 4 ಕಡೆಯದಿನಾಂಕವಾಗಿದೆ. ಮತದಾನ ಫೆ 20ರ ಭಾನುವಾರ ನಡೆಯಲಿದ್ದು, ಮತದಾನ ಮಾರ್ಚ್ 10 ರಂದು ಮಂಗಳವಾರ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

  ಬನರಾಸ್​​ಗೆ ತೆರಳಲಿರುವ ಭಕ್ತರು

  ಗುರು ರವಿದಾಸ್​ ಜಯಂತಿ ಆಚರಣೆಗಾಗಿ ರಾಜ್ಯದ ಪರಿಶಿಷ್ಠ ಜಾತಿ ಸಮುದಾಯದ ಭಕ್ತರು ವಾರಣಾಸಿಗೆ ಭೇಟಿನೀಡುವ ಸಾಧ್ಯತೆ ಇದೆ. ಫೆ 10 ರಿಂದ 16ರವರೆಗೆ ಅವರು ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದ ಸುಮಾರು 20 ಲಕ್ಷ ಪರಿಶಿಷ್ಟ ಜಾತಿ ಸಮುದಾಯ ಈ ಪ್ರವಾಸ ನಡೆಸುವ ಸಾಧ್ಯತೆ ಇದೆ. ಪರಿಶಿಷ್ಟ ಜಾತಿಗಳ ಸಮುದಾಯವು ಪಂಜಾಬ್‌ನ ಜನಸಂಖ್ಯೆಯ 32 ಪ್ರತಿಶತವನ್ನು ಒಳಗೊಂಡಿದೆ. ಈ ಸಮುದಾಯದ ಅನೇಕ ಜನರು ರಾಜ್ಯ ವಿಧಾನಸಭೆಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ, ಮತದಾನ ಅವ ಸಾಂವಿಧಾನಿಕ ಹಕ್ಕು ಈ ಹಿನ್ನಲೆ ಮತದಾನದ ದಿನಾಂಕ ಮುಂದೂಡುವಂತೆ ಸಿಎಂ ಚನ್ನಿ ಪತ್ರದ ಮೂಲಕ ಆಯೋಗಕ್ಕೆ ಮನವಿ ಮಾಡಿದ್ದರು.

  ಇದನ್ನು ಓದಿ : ಪ್ರಯಾಣಿಕರೇ ಗಮನಿಸಿ, ಜನವರಿ 24ರವರೆಗೆ 22 ರೈಲುಗಳ ಸಂಚಾರ ರದ್ದು

  ಹಲವು ರಾಜಕೀಯ ಪಕ್ಷಗಳಿಂದ ಮನವಿ

  ಪಂಜಾಬ್​ ಬಿಜೆಪಿ ಕೂಡ ಈ ಸಂಬಂಧ ಮನವಿ ಮಾಡಿತ್ತು. ಜೊತೆಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ರಾಜ್ಯ ಚುನಾವಣೆಯನ್ನು ಫೆಬ್ರವರಿ 18 ರ ನಂತರ ದಿನಾಂಕಕ್ಕೆ ಮರು ನಿಗದಿಪಡಿಸುವಂತೆ ಕೇಳಿದ್ದಾರೆ.

  ಇದನ್ನು ಓದಿ: ಸ್ಥಳೀಯರಿಗೆ ಶೇ 75ರಷ್ಟು ಉದ್ಯೋಗ, 30 ಸಾವಿರ ವೇತನ ಕಡ್ಡಾಯ

  ಪಂಜಾಬ್‌ನಲ್ಲಿ ಚುನಾವಣೆಯನ್ನು ಒಂದು ವಾರ ಮುಂದೂಡುವಂತೆ ಪಂಜಾಬ್ ಲೋಕ ಕಾಂಗ್ರೆಸ್ ಕೂಡ ಬೇಡಿಕೆ ಇಟ್ಟಿತು. ಗುರು ರವಿದಾಸ್ ಜಯಂತಿಯಂದು ಪಂಜಾಬ್‌ನಿಂದ ಅನೇಕ ಜನರು ಪ್ರತಿ ವರ್ಷ ಬನಾರಸ್‌ಗೆ ಭೇಟಿ ನೀಡುತ್ತಾರೆ ಎಂದು ಪಿಎಲ್​ಸಿ ಪ್ರಧಾನ ಕಾರ್ಯದರ್ಶಿ ಕಮಲ್ ಸೈನಿ ಚುನಾವಣಾ ಸಮಿತಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
  Published by:Seema R
  First published: