Election Commissionನಿಂದ ಪಂಚರಾಜ್ಯ ಚುನಾವಣೆ ಡಿಜಿಟಲೀಕರಣ-ಮೊದಲ ಬಾರಿಗೆ ಹೊಸ ವಿಧಾನ ಅಳವಡಿಕೆ

New Rules For Election: ಸಾಮಾನ್ಯವಾಗಿ ಚುನಾವಣೆ ಎಂದರೆ ರ್ಯಾಲಿಗಳು ನಡೆಯುತ್ತದೆ, ಜನ ಸೇರುತ್ತಾರೆ, ಪ್ರಚಾರ ಸಭೆಗಳು ಸಹ ನಡೆಯುತ್ತವೆ. ಇದು ಕೊರೊನಾ ಹರಡಲು ಇದೊಂದು ಕಾರಣವಾಗುತ್ತದೆ.  ಅದಕ್ಕೆ ಕರೋನಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ಆಯೋಗವು ಮೊದಲ ಬಾರಿಗೆ ಹಲವು ಪ್ರಯತ್ನಗಳನ್ನು ಮಾಡಲು ಹೊರಟಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದಲ್ಲಿ ಕೊರೊನಾ (Coronavirus) ಆರ್ಭಟ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಹೊಸ ರೂಪಾಂತರಿ ಓಮೈಕ್ರಾನ್ (Omicron) ಸಂಖ್ಯೆ ಸಹ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ ಹಾಗು ವೀಕೆಂಡ್​ ಕರ್ಫ್ಯೂ (Weekend Curfew) ಸೇರಿದಂತೆ ವಿವಿಧ ರೀತಿಯಲ್ಲಿ ಕಠಿಣ ನಿಮಯಗಳನ್ನು ಜಾರಿ ಮಾಡಲಾಗಿದೆ. ಆದರೆ ಈ ನಡುವೆ 5 ರಾಜ್ಯಗಳ ಚುನಾವಣೆ ಸಹ ಸನಿಹದಲ್ಲಿದ್ದು, ಭಾರತ ಚುನಾವಣಾ ಆಯೋಗ  (Election Commission Of India) ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ. ಕೊರೊನಾ ಹೆಚ್ಚಿರುವ ಈ ಸಮಯದಲ್ಲಿ ಚುನಾವಣೆ ನಡೆಸುವುದು ಸುಲಭದ ಮಾತಲ್ಲ. ಸಾಮಾನ್ಯವಾಗಿ ಚುನಾವಣೆ (Election) ಎಂದರೆ ರ್ಯಾಲಿಗಳು ನಡೆಯುತ್ತದೆ, ಜನ ಸೇರುತ್ತಾರೆ, ಪ್ರಚಾರ ಸಭೆಗಳು ಸಹ ನಡೆಯುತ್ತವೆ. ಇದು ಕೊರೊನಾ ಹರಡಲು ಇದೊಂದು ಕಾರಣವಾಗುತ್ತದೆ.  ಅದಕ್ಕೆ ಕರೋನಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ಆಯೋಗವು ಮೊದಲ ಬಾರಿಗೆ ಹಲವು ಪ್ರಯತ್ನಗಳನ್ನು ಮಾಡಲು ಹೊರಟಿದ್ದು, ಚುನಾವಣೆಯನ್ನು  ಡಿಜಿಟಲ್ ಕೇಂದ್ರಿತ (Digital)  ಮಾಡಲು ಹೊರಟಿದೆ.  ಜನರ ನಡುವೆ ಸಂಪರ್ಕ ಕಲ್ಪಿಸಲು ಅನೇಕ ಅಪ್ಲಿಕೇಶನ್‌ಗಳನ್ನು ಸಹ ಪ್ರಾರಂಭಿಸಲಾಗಿದೆ.

ಚುನಾವಣೆ ಆಯೋಗದ ಹೊಸ ಯೋಜನೆಗಳೇನು ಇಲ್ಲಿದೆ.

ವರ್ಚುವಲ್ ರ್ಯಾಲಿ ನಡೆಸಲು ಸಲಹೆ

ಮುಖ್ಯ ಚುನಾವಣಾ ಆಯುಕ್ತರಾದ ಸುಶೀಲ್ ಚಂದ್ರ ಅವರು ಎಲ್ಲಾ ರಾಜಕೀಯ ಪಕ್ಷಗಳಿಗೆ ಜನರನ್ನ ಸೇರಿಸಿ ಸೋಂಕು ಹರಡಿಸುವ ಬದಲು ವರ್ಚುವರ್ ರ್ಯಾಲಿಗಳನ್ನು ಹಮ್ಮಿಕೊಳ್ಳಲು ಸಲಹೆ ನೀಡಿದ್ದಾರೆ. 15 ಜನವರಿ 2022 ರವರೆಗೆ ಯಾವುದೇ ರೋಡ್‌ಶೋ, ಪಾದಯಾತ್ರೆ, ಸೈಕಲ್ ರ್ಯಾಲಿ, ಬೈಕ್ ರ್ಯಾಲಿ ಮತ್ತು ಮೆರವಣಿಗೆ ಮಾಡಲು ಅವಕಾಶ ನೀಡಲಾಗುವುದಿಲ್ಲ, ನಂತರ ದೇಶದಲ್ಲಿ ಕೊರೊನಾ ಪರಿಸ್ಥಿತಿಯನ್ನು ಅವಲೋಕಿಸಿ ಚುನಾವಣಾ ಆಯೋಗವು ಹೊಸ ಸೂಚನೆ ನೀಡಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಇನ್ನು ಚುನಾವಣಾ ಆಯೋಗದ ಇತಿಹಾಸದಲ್ಲಿ ಮೊದಲ ಬಾರಿಗೆ ಪಕ್ಷಗಳಿಗೆ ವರ್ಚುವಲ್ ರ್ಯಾಲಿ ನಡೆಸಲು ಸಲಹೆ ನೀಡಿದೆ.

ಕೊರೊನಾ ಸೊಂಕಿತರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲು ನಿರ್ಧಾರ

ಇದನ್ನೂ ಓದಿ: ಇಂದಿನಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಕಾವೇರಿ ನದಿಗೆ ಡಿಕೆಶಿ ಪೂಜೆ

ಚುನಾವಣಾ ಆಯೋಗವು ಸರ್ಕಾರಿ ನೌಕರರನ್ನು ಹೊರತುಪಡಿಸಿ 80 ವರ್ಷ ಮೇಲ್ಪಟ್ಟ ನಾಗರಿಕರು, ಅಂಗವಿಕಲರು ಮತ್ತು ಕರೋನಾ ಸೋಂಕಿತರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲಿದ್ದು, ಇದು ಸೋಂಕು ಹರಡದಂತೆ ಕಾಪಾಡಲು ಸಹಾಯ ಮಾಡುತ್ತದೆ, ಹಾಗೂ ಮತದಾನದಿಂದ ವಂಚಿತರಾಗದಂತೆ ತಡೆಯುತ್ತದೆ. ಅಲ್ಲದೇ ಇದೇ ಮೊದಲ ಬಾರಿಗೆ ಈ ರೀತಿಯ ಪ್ರಕರಣಗಳಲ್ಲಿ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗುತ್ತಿದೆ.

ಅತಿ ಹೆಚ್ಚು ಸಂಖ್ಯೆಯಲ್ಲಿ ಮತದಾನ ಕೇಂದ್ರಗಳು 

ಮೊದಲೆಲ್ಲ ಚುನಾವಣೆಗಳಲ್ಲಿ ನಿಯಮಿತ ಮತದಾನ ಕೇಂದ್ರಗಳಿರುತ್ತಿದ್ದವು ಆದರೆ ಕೊರೊನಾ ಪರಿಸ್ಥಿತಿಯನ್ನು ಅವಲೋಕಿಸಿ ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆ ಮತದಾನ ಕೇಂದ್ರಗಳನ್ನು ಹೆಚ್ಚಿಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ಕೇಂದ್ರಗಳ ಸಂಖ್ಯೆ ಹೆಚ್ಚಾದಾಗ ಜನರು ಒಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಸಾಧ್ಯವಾಗುವುದಿಲ್ಲ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮತದಾನ ನಡೆಸಲು ಸಾಧ್ಯವಾಗುತ್ತದೆ. ಈ ಬಾರಿ ಕೇವಲ 1250 ಮತದಾರರು ಮಾತ್ರ ಒಂದು ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಮತಗಟ್ಟೆಗಳ ಸಂಖ್ಯೆಯನ್ನು ಶೇ.16ರಷ್ಟು ಹೆಚ್ಚಿಸಲಿದೆ.

ಸುವಿಧಾ ಆಪ್ ಬಿಡುಗಡೆ 

ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿತ್ತಿರುವ ಹಿನ್ನೆಲೆ ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿಗಳ ಜೊತೆಗೆ ಜನ ಸಹ ಸೇರುವುದರಿಂದ ಚುನಾವಣಾ ಆಯೋಗವು ಸಯವಿಧಾ ಆಪ್ ಬಿಡುಗಡೆ ಮಾಡಿದ್ದು, ಇದೇ ಮೊದಲ ಬಾರಿಗೆ ಅಭ್ಯರ್ಥಿಯು ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಸಲು ಚುನಾವಣಾ ಆಯೋಗ ಅವಖಾಶ ನೀಡಿದೆ.

Cvigil App 

ಇದನ್ನೂ ಓದಿ: ಸಾರ್ವಜನಿಕ ರಜೆ ವಿಚಾರ ಮಹತ್ವದ ತೀರ್ಪು ನೀಡಿದ ಬಾಂಬೆ ಹೈಕೋರ್ಟ್

ಚುನಾವಣೆ ವೇಳೆ ನಡೆಯುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಸಿವಿಜಿಲ್ ಆಪ್ ಬಿಡುಗಡೆ ಮಾಡಲಾಗಿದ್ದು, ಅಕ್ರಮ ಕೆಲಸಗಳ ಬಗ್ಗೆ ದೂರು ದಾಖಲಿಸಲು ಹೊಸ ಪ್ರಯತ್ನ ಮಾಡಲಾಗಿದೆ.
Published by:Sandhya M
First published: