HOME » NEWS » National-international » ELECTION COMMISSION HELD SECOND ELECTION TO FIVE STATES AFTER CORONAVIRUS PANDEMIC RHHSN

Five States Election: ಕೊರೋನಾ ಬಳಿಕ 5 ರಾಜ್ಯಗಳಿಗೆ ನಡೆಯುತ್ತಿರುವ 2ನೇ ಚುನಾವಣೆ, ಆಯೋಗಕ್ಕೆ ಕಠಿಣ ಸವಾಲು

ಅಂಚೆ ಮತಪತ್ರ ವ್ಯವಸ್ಥೆಯನ್ನು 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು, ವಿಕಲಚೇತನರು ಮತ್ತು ಅಗತ್ಯ ಸೇವೆಗಳಲ್ಲಿ ತೊಡಗಿರುವ ಜನರಿಗೆ ವಿಸ್ತರಿಸಲಾಗಿದೆ. ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಲಾಗಿದೆ ಎಂದು ಸಿಇಸಿ ಸುನಿಲ್ ಅರೋರಾ ತಿಳಿಸಿದ್ದಾರೆ.

news18-kannada
Updated:February 26, 2021, 6:13 PM IST
Five States Election: ಕೊರೋನಾ ಬಳಿಕ 5 ರಾಜ್ಯಗಳಿಗೆ ನಡೆಯುತ್ತಿರುವ 2ನೇ ಚುನಾವಣೆ, ಆಯೋಗಕ್ಕೆ ಕಠಿಣ ಸವಾಲು
ಚುನಾವಣಾ ಆಯೋಗ
  • Share this:
ನವದೆಹಲಿ: ಅಸ್ಸಾ, ಕೇರಳ, ತಮಿಳುನಾಡು, ಪಶ್ಚಿಮಬಂಗಾಳ ಸೇರಿ ಪುದುಚೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ  ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ. ಕೊರೋನಾ ಸಾಂಕ್ರಾಮಿಕ ದೇಶದಲ್ಲಿ ಆವರಿಸಿದ ಬಳಿಕ ನಡೆಯುತ್ತಿರುವ ಎರಡನೇ ಚುನಾವಣೆ ಇದಾಗಿದ್ದು, ಈ ಮೊದಲು ಬಿಹಾರದಲ್ಲಿ ಕೊರೋನಾತಂಕದ ನಡುವೆಯೂ ಯಶಸ್ವಿಯಾಗಿ ಚುನಾವಣೆ ನಡೆಸಲಾಗಿತ್ತು. ಇದೀಗ ಕೊರೋನಾ ಮಾರ್ಗಸೂಚಿಗಳನ್ವಯ ಐದು ರಾಜ್ಯಗಳಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ.

ಐದು ರಾಜ್ಯಗಳ ವಿಧಾನಸಭಾ ಅವಧಿ ಮೇ 24ಕ್ಕೆ ಮುಕ್ತಾಯವಾಗಲಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಐದು ರಾಜ್ಯಗಳಿಗೆ ಚುನಾವಣೆ ದಿನಾಂಕವನ್ನು ಮುಖ್ಯ ಚುನಾವಣಾ ಆಯುಕ್ತರಾದ ಸುನೀಲ್ ಅರೋರಾ ಅವರು ಪ್ರಕಟಿಸಿದರು. ಇದರೊಂದಿಗೆ ಇತರೆ ಕೆಲ ರಾಜ್ಯಗಳ ಉಪಚುನಾವಣೆಗೂ ದಿನಾಂಕ ನಿಗದಿ ಮಾಡಲಾಗಿದೆ.

ಕೇರಳ, ಅಸ್ಸಾಂ, ಪಶ್ಚಿಮಬಂಗಾಳ, ತಮಿಳುನಾಡು ಸೇರಿ ಪುದುಚೇರಿ ರಾಜ್ಯಗಳ ಒಟ್ಟು 824 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿದೆ. ಪಶ್ಚಿಮಬಂಗಾಳದ 294 ಕ್ಷೇತ್ರಗಳು, ತಮಿಳುನಾಡಿನ 234 ಕ್ಷೇತ್ರಗಳು, ಕೇರಳದ 140 ಕ್ಷೇತ್ರಗಳು, ಅಸ್ಸಾಂನ 126 ಕ್ಷೇತ್ರಗಳು ಹಾಗೂ ಪುದುಚೇರಿಯ 30 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಐದು ರಾಜ್ಯಗಳಲ್ಲಿ ಮಾರ್ಚ್ 27ರಿಂದ ಮತದಾನ ಆರಂಭವಾಗಿ, ಏಪ್ರಿಲ್ 29ರವರೆಗೆ ನಡೆಯಲಿದೆ. ಐದು ರಾಜ್ಯಗಳ ಫಲಿತಾಂಶ  ಮೇ 2ರಂದು ಪ್ರಕಟವಾಗಲಿದೆ.

ಈ ಐದು ರಾಜ್ಯಗಳಲ್ಲಿ ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಅಭ್ಯರ್ಥಿಗಳು ಕ್ರಿಮಿನಲ್  ಅಪರಾಧವುಳ್ಳವರು ಆ ಬಗ್ಗೆ ಕನಿಷ್ಠ ಮೂರು ಬಾರಿ ಮಾಧ್ಯಮದಲ್ಲಿ ಮಾಹಿತಿ ನೀಡಬೇಕು ಎಂದು ಸುನೀಲ್ ಅರೋರಾ ಅವರು ತಿಳಿಸಿದ್ದಾರೆ.

ಇದನ್ನು ಓದಿ: Assembly Election Dates: ಪಂಚರಾಜ್ಯಗಳ ಚುನಾವಣೆಗೆ ದಿನಾಂಕ ನಿಗದಿ, ಮೇ 2ರಂದು 5 ರಾಜ್ಯಗಳ ಫಲಿತಾಂಶ ಪ್ರಕಟ

ಕೊರೋನಾ ಸಾಂಕ್ರಾಮಿಕ ದಟ್ಟವಾಗಿ ಹಬ್ಬಿದ್ದ ಸಮಯದಲ್ಲಿ ಚುನಾವಣಾ ಆಯೋಗ ರಾಜ್ಯಸಭೆಗೆ 18 ಸ್ಥಾನಗಳಿಗೆ ಚುನಾವಣೆಯೊಂದಿಗೆ ಪರೀಕ್ಷಾ ಪ್ರಯೋಗಗಳನ್ನು ಪ್ರಾರಂಭಿಸಿತು. ಅದರ ನಂತರ, ಬಿಹಾರ ಚುನಾವಣೆಯ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿತ್ತು. ಇದೀಗ ಐದು ರಾಜ್ಯಗಳ ಚುನಾವಣೆ ದೊಡ್ಡ ಸವಾಲಾಗಿದೆ. ಕೊರೋನಾ ಸಾಂಕ್ರಾಮಿಕ ದೇಶದಲ್ಲಿ ಆವರಿಸಿದ ಬಳಿಕ ನಡೆಯುತ್ತಿರುವ ಎರಡನೇ ಚುನಾವಣೆ ಇದಾಗಿದ್ದು, ಈ ಮೊದಲು ಬಿಹಾರದಲ್ಲಿ ಕಳೆದ ವರ್ಷ ನವೆಂಬರ್​ನಲ್ಲಿ ಯಶಸ್ವಿಯಾಗಿ ಚುನಾವಣೆ ನಡೆದಿತ್ತು. ಇದೀಗ ಎರಡನೇ ಬಾರಿಗೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಕೊರೋನಾ ಮಾರ್ಗಸೂಚಿಗಳನ್ವಯ ಚುನಾವಣೆ ನಡೆಯಲು ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕೊರೋನಾ ಲಸಿಕೆ ಪಡೆದುಕೊಳ್ಳಬೇಕು ಎಂದು ಆದೇಶ ಮಾಡಲಾಗಿದೆ.
ಅಂಚೆ ಮತಪತ್ರ ವ್ಯವಸ್ಥೆಯನ್ನು 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು, ವಿಕಲಚೇತನರು ಮತ್ತು ಅಗತ್ಯ ಸೇವೆಗಳಲ್ಲಿ ತೊಡಗಿರುವ ಜನರಿಗೆ ವಿಸ್ತರಿಸಲಾಗಿದೆ. ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಲಾಗಿದೆ ಎಂದು ಸಿಇಸಿ ಸುನಿಲ್ ಅರೋರಾ ತಿಳಿಸಿದ್ದಾರೆ.
Published by: HR Ramesh
First published: February 26, 2021, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories