• Home
  • »
  • News
  • »
  • national-international
  • »
  • Shiv Sena: ಬಿಲ್ಲೂ ಬೇಡ, ಬಾಣವೂ ಬೇಡ! ಶಿವಸೇನೆ ಚಿಹ್ನೆ ಬಳಸದಂತೆ ಉದ್ಧವ್-ಶಿಂಧೆ ಬಣಕ್ಕೆ ಚುನಾವಣಾ ಆಯೋಗ ಸೂಚನೆ

Shiv Sena: ಬಿಲ್ಲೂ ಬೇಡ, ಬಾಣವೂ ಬೇಡ! ಶಿವಸೇನೆ ಚಿಹ್ನೆ ಬಳಸದಂತೆ ಉದ್ಧವ್-ಶಿಂಧೆ ಬಣಕ್ಕೆ ಚುನಾವಣಾ ಆಯೋಗ ಸೂಚನೆ

ಶಿವಸೇನೆ ಪಕ್ಷದ ಚಿಹ್ನೆ

ಶಿವಸೇನೆ ಪಕ್ಷದ ಚಿಹ್ನೆ

ಶಿವಸೇನೆಯ (Shiv Sena) ಬಿಲ್ಲು ಹಾಗೂ ಬಾಣದ ಚಿಹ್ನೆಗಾಗಿ (bow and arrow symbol) ಕಿತ್ತಾಡುತ್ತಿದ್ದ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ (Ex CM Uddhav Thackeray) ಹಾಗೂ ಹಾಲಿ ಸಿಎಂ ಏಕನಾಥ್ ಶಿಂಧೆ ಬಣಕ್ಕೆ (CM Eknath Shinde) ಕೇಂದ್ರ ಚುನಾವಣಾ ಆಯೋಗ (Central Election Commission) ಶಾಕ್ ನೀಡಿದೆ. ಎರಡೂ ಬಣದ ವಾದ-ಪ್ರತಿವಾದ ಆಲಿಸಿರುವ ಕೇಂದ್ರ ಚುನಾವಣಾ ಆಯೋಗ ಇದೀಗ ಮಧ್ಯಂತರ ಆದೇಶ ನೀಡಿದೆ.

ಮುಂದೆ ಓದಿ ...
  • Share this:

ಮುಂಬೈ: ಮಹಾರಾಷ್ಟ್ರದ ರಾಜಕೀಯ ಸಂಘರ್ಷ (Maharashtra political conflict) ಮತ್ತೊಂದು ಹಂತ ತಲುಪಿದೆ. ಶಿವಸೇನೆಯ (Shiv Sena) ಬಿಲ್ಲು ಹಾಗೂ ಬಾಣದ ಚಿಹ್ನೆಗಾಗಿ (bow and arrow symbol) ಕಿತ್ತಾಡುತ್ತಿದ್ದ ಮಾಜಿ ಸಿಎಂ ಉದ್ಧವ್ ಠಾಕ್ರೆ (Ex CM Uddhav Thackeray) ಹಾಗೂ ಹಾಲಿ ಸಿಎಂ ಏಕನಾಥ್ ಶಿಂಧೆ ಬಣಕ್ಕೆ (CM Eknath Shinde Team) ಕೇಂದ್ರ ಚುನಾವಣಾ ಆಯೋಗ (Central Election Commission) ಶಾಕ್ ನೀಡಿದೆ. ಮುಂದಿನ ಅಂಧೇರಿ ಉಪ ಚುನಾವಣೆಯಲ್ಲಿ (Andheri by-election) ಶಿವಸೇನೆ ಪಕ್ಷಗ ಚಿಹ್ನೆ ಬಳಸದಂತೆ ಖಡಕ್ ಸೂಚನೆ ನೀಡಿದೆ. ಚುನಾವಣಾ ಆಯೋಗದ ಮಧ್ಯಂತರ ಆದೇಶದ ಪ್ರಕಾರ, ಎರಡೂ ಗುಂಪುಗಳು ಈಗ ಹೊಸ ಚಿಹ್ನೆಗಳನ್ನು ಆರಿಸಬೇಕಾಗುತ್ತದೆ. ಸದ್ಯ ಲಭ್ಯವಿರುವ ಉಚಿತ ಚಿಹ್ನೆಗಳ ಪಟ್ಟಿಯಿಂದ ಆಯ್ಕೆಮಾಡಬಹುದಾದ ವಿಭಿನ್ನ ಚಿಹ್ನೆಗಳನ್ನು ಅವರಿಗೆ ಹಂಚಲಾಗುತ್ತದೆ. ಮುಂಬೈನ ಅಂಧೇರಿ ಪೂರ್ವದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಎರಡೂ ಬಣಗಳು ಈಗ ಬೇರೆ ಹೆಸರು ಮತ್ತು ಚಿಹ್ನೆಯನ್ನು ಬಳಸಬೇಕಾಗುತ್ತದೆ.


ಶಿಂಧೆ ಸಿಎಂ ಆಗಿ 4 ತಿಂಗಳ ಬಳಿಕ ಆದೇಶ


ಉದ್ಧವ್ ಠಾಕ್ರೆ ನೇತೃತ್ವದ ಶಾಸಕರ ಬಣದ ಆಡಳಿತ ಕೊನೆಗೊಂಡು, ಬಿಜೆಪಿ ಹಾಗೂ ಶಿವೇಸೆನೆಯ ಏಕನಾಥ್ ಶಿಂಧೆ ನೇತೃತ್ವದ ಬಣ ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿದೆ. ಏಕನಾಥ್ ಶಿಂಧೆ ಅಧಿಕಾರಕ್ಕೆ ಬಂದು 4 ತಿಂಗಳುಗಳ ಬಳಿಕ ಕೇಂದ್ರ ಚುನಾವಣಾ ಆಯೋಗ ಈ ಮಧ್ಯಂತರ ಆದೇಶ ನೀಡಿದೆ.


ಶಿವಸೇನೆ ಹೆಸರೂ ಬೇಡ, ಬಿಲ್ಲು ಬಾಣವೂ ಬೇಡ


ಶಿವಸೇನೆ ಪಕ್ಷದ ಹೆಸರು, ಬಾಣ ಹಾಗೂ ಬಿಲ್ಲಿನ ಬಿಹ್ನೆ ಬಳಸದಂತೆ ಕೇಂದ್ರ ಚುನಾವಣಾ ಆಯೋಗ ಖಡಕ್ ಸೂಚನೆ ನೀಡಿದೆ. ಸದ್ಯ ಮಧ್ಯಂತರ ಆದೇಶ ಬಂದಿದ್ದು, ಮುಂದಿನ ಆದೇಶದವರೆಗೆ ಇದನ್ನು ಬಳಸುವಂತಿಲ್ಲ ಅಂತ ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ಬಣಕ್ಕೆ ಸೂಚನೆ ನೀಡಿದೆ.


ಇದನ್ನೂ ಓದಿ: PFI: ಮೋದಿ, ಮಥುರಾ, ಅಯೋಧ್ಯೆಯೇ ನಮ್ಮ ಟಾರ್ಗೆಟ್! ಪಿಎಫ್‌ಐನಿಂದ ಶಾಸಕರಿಗೆ ಬೆದರಿಕೆ ಪತ್ರ


ಹೊಸ ಹೆಸರು, ಚಿಹ್ನೆ ಬಳಸುವ ಅನಿವಾರ್ಯತೆ


ಚುನಾವಣಾ ಆಯೋಗದ ಮಧ್ಯಂತರ ಆದೇಶದ ಪ್ರಕಾರ, ಎರಡೂ ಗುಂಪುಗಳು ಈಗ ಹೊಸ ಹೆಸರುಗಳನ್ನು ಆರಿಸಬೇಕಾಗುತ್ತದೆ. ಸದ್ಯ ಚುನಾವಣಾ ಆಯೋಗದಲ್ಲಿ ಲಭ್ಯವಿರುವ ಉಚಿತ ಚಿಹ್ನೆಗಳ ಪಟ್ಟಿಯಿಂದ ಆಯ್ಕೆಮಾಡಬಹುದಾದ ವಿಭಿನ್ನ ಚಿಹ್ನೆಗಳನ್ನು ಅವರಿಗೆ ಹಂಚಲಾಗುತ್ತದೆ. ಮುಂಬರುವ ಮುಂಬೈನ ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಎರಡೂ ಬಣಗಳು ಈಗ ಬೇರೆ ಹೆಸರು ಮತ್ತು ಚಿಹ್ನೆಯನ್ನು ಬಳಸಬೇಕಾಗುತ್ತದೆ.


ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ


ಬಾಳಾ ಠಾಕ್ರೆ ಅವರಿಂದ ನಿರ್ಮಾಣವಾದ ಶಿವಸೇನೆ ಪಕ್ಷದ ಹೆಸರು ಹಾಗೂ ಚಿಹ್ನೆಗಾಗಿ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಮತ್ತು ಹಾಲಿ ಸಿಎಂ ಏಕನಾಥ್‌ ಶಿಂಧೆ ಬಣಗಳ ನಡುವೆ ಸಂಘರ್ಷ ನಡೆದಿತ್ತು. ತಮ್ಮದೇ ನೈಜ ಶಿವಸೇನೆ ಎಂದು ಎರಡೂ ಬಣಗಳು ಪ್ರತಿಪಾದಿಸಿದ್ದವು. ಪಕ್ಷದ ಚಿಹ್ನೆಯಾದ ಬಿಲ್ಲು ಹಾಗೂ ಬಾಣದ ಗುರುತಿಗೆ ಪಟ್ಟು ಹಿಡಿದಿದ್ದವು. ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಇದರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಬಳಿಕ ಅರ್ಜಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ವರ್ಗ ಮಾಡಿತ್ತು.


ಇದನ್ನೂ ಓದಿ: Priyanka Gandhi: ಖರ್ಗೆ, ತರೂರ್ ಸ್ಪರ್ಧೆ ಬಗ್ಗೆ ಅಪಸ್ವರ; ಪ್ರಿಯಾಂಕಾ ಕೈ ಅಧ್ಯಕ್ಷೆ ಆಗಲಿ ಎಂದ ಸಂಸದ!


ಸೋಮವಾರದೊಳಗೆ ಅರ್ಜಿ ಸಲ್ಲಿಕೆಗೆ ಸೂಚನೆ


ಎರಡೂ ಬಣದ ವಾದ-ಪ್ರತಿವಾದ ಆಲಿಸಿರುವ ಕೇಂದ್ರ ಚುನಾವಣಾ ಆಯೋಗ ಇದೀಗ ಮಧ್ಯಂತರ ಆದೇಶ ನೀಡಿದೆ. ಹೊಸ ಚಿಹ್ನೆ ಆಯ್ಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಸೋಮವಾರ ಮಧ್ಯಾಹ್ನ 1 ಗಂಟೆಯೊಳಗೆ ಅರ್ಜಿ ಸಲ್ಲಿಸುವಂತೆ ಎರಡೂ ಬಣಗಳಿಗೆ ಆಯೋಗವು ಸೂಚಿಸಿದೆ.

Published by:Annappa Achari
First published: