TamilNadu Assembly Election2021: ಸಿಎಂ ಪಳನಿಸ್ವಾಮಿ ತಾಯಿಯ ಬಗ್ಗೆ ಅವಹೇಳನಕರ ಹೇಳಿಕೆ; ಎ. ರಾಜಾ ಪ್ರಚಾರವನ್ನು 48 ಗಂಟೆ ನಿಷೇಧಿಸಿದ ಆಯೋಗ

ಚೆಪಾಕ್-ತಿರುವಳ್ಳಿಕೇಣಿಯಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ, ಪಳನಿಸ್ವಾಮಿ ಜನನ ಅಕ್ರಮ ಸಂಬಂಧದಿಂದ ಮತ್ತು ಅಕಾಲಿಕ ಜನನ ಎಂದು ಡಿಎಂಕೆ ನಾಯಕ ಎ. ರಾಜಾ ಅವಹೇಳನಕಾರಿ ಹೇಳಿಕೆ ನೀಡಿದ್ದರು.

ಡಿಎಂಕೆ ನಾಯಕ ಎ. ರಾಜಾ.

ಡಿಎಂಕೆ ನಾಯಕ ಎ. ರಾಜಾ.

  • Share this:
    ಚೆನ್ನೈ (ಮಾರ್ಚ್​ 01); ತಮಿಳುನಾಡು ಚುನಾವನಾ ಪ್ರಚಾರದ ವೇಳೆ ಇತ್ತೀಚೆಗೆ ಡಿಎಂಕೆ ನಾಯಕ ಎ. ರಾಜಾ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ತಾಯಿಯ ವಿರುದ್ಧ ಅವಹೇಳನಕರ ಹೇಳಿಕೆ ನೀಡಿದ್ದರು. ಪಳನಿಸ್ವಾಮಿ ಅವರ ಜನನ ಅಕ್ರಮವಾದದ್ದು ಎಂದು ನಿಂದಿಸಿದ್ದರು. ಈ ವಿಚಾರ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರನ್ನೂ ನೀಡಲಾಗಿತ್ತು. ಈ ಸಂಬಂಧ ಎ. ರಾಜಾ ಅವರಿಗೆ ನೊಟೀಸ್​ ನೀಡಿದ್ದ ಚುನಾವಣಾ ಆಯೋಗ ಇಂದು ಈ ವಿಚಾರಣೆ ನಡೆಸಿದ್ದು, "ಎ. ರಾಜಾ ಅವಹೇಳನಕಾರಿ ಹೇಳಿಕೆ ನೀಡಿರುವುದು ಸಾಬೀತಾಗಿದೆ. ಹೀಗಾಗಿ ಅವರು ಮುಂದಿನ 48 ಗಂಟೆಗಳ ಕಾಲ ಯಾವ ಚುನಾವಣಾ ಪ್ರಚಾರದಲ್ಲೂ ಭಾಗವಹಿಸುವಂತಿಲ್ಲ" ಎಂದು ಆದೇಶಿಸಿದೆ. 



    ಏಪ್ರಿಲ್ 6 ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆ ಡಿಎಂಕೆ ಮುಖಂಡ ಎ.ರಾಜಾ, ಚೆಪಾಕ್-ತಿರುವಳ್ಳಿಕೇಣಿಯಲ್ಲಿ ಉದಯಾನಿಧಿ ಸ್ಟಾಲಿನ್ ಪರ ಪ್ರಚಾರ ಮಾಡುವ ವೇಳೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು AIADMK ಮತ್ತು ಬಿಜೆಪಿ ಪ್ರತಿಭಟನೆ ನಡೆಸಿದ್ದರು. ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸದಂತೆ ತಡೆಯುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ್ದ ಚುನಾವಣಾ ಆಯೋಗ ಕಳೆದ ಬುಧವಾರವೇ ನೊಟೀಸ್​ ಜಾರಿ ಮಾಡಿತ್ತು.

    ಚೆಪಾಕ್-ತಿರುವಳ್ಳಿಕೇಣಿಯಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ, "ಪಳನಿಸ್ವಾಮಿ ಜನನ ಅಕ್ರಮ ಸಂಬಂಧದಿಂದ ಮತ್ತು ಅಕಾಲಿಕ ಜನನ" ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದಕ್ಕೂ ಮೊದಲು ಮುಖ್ಯಮಂತ್ರಿಯನ್ನು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರ ಚಪ್ಪಲಿಗಿಂತ ಒಂದು ರೂಪಾಯಿ ಕಡಿಮೆ ಎಂದು ಕರೆದಿದ್ದರು.

    ಹಾಗಾಗಿ ಡಿಎಂಕೆ ನಾಯಕ ಎ.ರಾಜಾ ವಿರುದ್ಧ ಐಪಿಸಿಯ ಸೆಕ್ಷನ್ 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 294 ಬಿ (ಸಾರ್ವಜನಿಕ ಸ್ಥಳದಲ್ಲಿ ಕೆಟ್ಟ ಭಾಷೆ) ಮತ್ತು ಜನರ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 127 (ಚುನಾವಣಾ ಸಭೆಗಳಲ್ಲಿ ಅಡಚಣೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಇದನ್ನೂ ಓದಿ: TamilNadu Assembly Election2021: ಸಿಎಂ ಪಳನಿಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಎ. ರಾಜಾಗೆ ಚುನಾವಣಾ ಆಯೋಗ ನೊಟೀಸ್

    ಆದರೆ ಘಟನೆ ಕುರಿತು ಕ್ಷಮೆಯಾಚಿಸರುವ ಎ ರಾಜಾ, "ನಾನು ನನ್ನ ಹೇಳಿಕೆಯನ್ನು ಪುನರುಚ್ಚರಿಸುತ್ತೇನೆ. ನನ್ನ ಭಾಷಣವು ಇಬ್ಬರು ನಾಯಕರ ವಿರುದ್ಧದ ವೈಯಕ್ತಿಕ ಟೀಕೆ ಅಲ್ಲ. ನನ್ನ ಭಾಷಣವು ಸಾರ್ವಜನಿಕ ಜೀವನದಲ್ಲಿರುವ ಇಬ್ಬರು ವ್ಯಕ್ತಿಗಳ ಹೋಲಿಕೆಯಾಗಿದೆ" ಎಂದಿದ್ದರು.

    "ನನ್ನ ಮಾತುಗಳಿಂದ ಮುಖ್ಯಮಂತ್ರಿಗಳಿಗೆ ನೋವುಂಟಾಗಿದೆ ಎಂದು ಮಾಧ್ಯಮಗಳಲ್ಲಿ ಓದಿ ನನಗೆ ನೋವಾಗಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಆದರೂ ನಾನು ಈ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಇದಲ್ಲದೆ, ರಾಜಕೀಯ ಕಾರಣಗಳನ್ನು ಬಿಟ್ಟು, ಇದರಿಂದ ಅವರಿಗೆ ನೋವುಂಟಾಗಿದ್ದರೆ, ಮನಃಪೂರ್ವಕವಾಗಿ ಕ್ಷಮೆಯಾಚಿಸಲು ನನಗೆ ಯಾವುದೇ ಹಿಂಜರಿಕೆ ಇಲ್ಲ" ಎಂದು ಎ.ರಾಜಾ ಹೇಳಿದ್ದರು. ಆದರೆ, ಇದೀಗ ಅವರನ್ನು ಮುಂದಿನ 48 ಗಂಟೆಗಳ ಕಾಲ ಚುನಾವಣಾ ಪ್ರಚಾರದಿಂದಲೇ ನಿಷೇಧಿಸಲಾಗಿರುವುದು ಡಿಎಂಕೆ ಪಕ್ಷಕ್ಕೆ ಹಿನ್ನಡೆಯಾಗಿ ಪರಿಣಮಿಸಲಿದೆ ಎನ್ನಲಾಗುತ್ತಿದೆ.
    Published by:MAshok Kumar
    First published: