Election Commissionನಿಂದ ಮಹತ್ವದ ಘೋಷಣೆ: ಐದು ರಾಜ್ಯಗಳಲ್ಲಿ ಜ. 22ರವೆಗೂ ಚುನಾವಣಾ ಸಮಾವೇಶಗಳಿಗೆ ನಿಷೇಧ

ಕೋವಿಡ್ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಾಗುತ್ತಿರುವ ಹಿನ್ನಲೆ ಚುನಾವಣೆ ಘೋಷಣೆಯಾಗಿರುವ ಐದು ರಾಜ್ಯಗಳಲ್ಲಿ ಜನವರಿ 22 ರವರೆಗೆ ಯಾವುದೇ ರಾಜಕೀಯ ಸಮಾವೇಶ, ರೋಡ್ ಶೋ ನಡೆಸದಂತೆ ನಿಷೇಧ ವಿಧಿಸಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪಂಚ ರಾಜ್ಯಗಳಲ್ಲಿ ಈಗಾಗಲೇ ಚುನಾವಣಾ ದಿನಾಂಕ ಪ್ರಕಟಿಸಿ ಆಯೋಗ (Election Commission) ಘೋಷಣೆ ಹೊರಡಿಸಿದೆ. ಈ ಬೆನ್ನಲ್ಲೇ ಉತ್ತರಖಂಡ, ಗೋವಾ, ಪಂಜಾಬ್​, ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ರಾಜಕೀಯ ಚುಟುವಟಿಕೆಗಳು ಗರಿಗೆದರಿದೆ. ಚುನಾವಣೆಗೆ ಇನ್ನೇನು ತಿಂಗಳು ಬಾಕಿ ಇರುವ ಹಿನ್ನಲೆ ಪಂಚ ರಾಜ್ಯಗಳಲ್ಲಿ (Five State Election) ಅಭ್ಯರ್ಥಿಗಳ ಪಟ್ಟಿಯನ್ನು ಅನೇಕ ಪಕ್ಷಗಳು ಹೊರಡಿಸಿದೆ. ಮತದಾರರ ಸೆಳೆಯಲು ಮುಂದಾಗಿರುವ ಅಭ್ಯರ್ಥಿಗಳಿಗೆ ಇದೀಗ ಚುನಾವಣಾ ಆಯೋಗ ಬಿಗ್​ ಶಾಕ್​ ನೀಡಿದೆ. ದೇಶದಲ್ಲಿ ಕೋವಿಡ್​ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಚುನಾವಣಾ ಸಮಾವೇಶ, ರೋಡ್​ ಶೋ ಮೇಲೆ ನಿಷೇಧ ವಿಧಿಸಿ ಚುನಾವಣಾ ಆಯೋಗ ಘೋಷಣೆ ಹೊರಡಿಸಿದೆ. 

    ಪಂಚ ರಾಜ್ಯದಲ್ಲೆ ಹೆಚ್ಚುತ್ತಿರುವ ಸೋಂಕು

    ಈ ಸಂಬಂಧ ಇಂದು ಪ್ರಕಟಣೆ ಹೊರಡಿಸಿರುವ ಆಯೋಗ, ಕೋವಿಡ್ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಾಗುತ್ತಿರುವ ಹಿನ್ನಲೆ ಚುನಾವಣೆ ಘೋಷಣೆಯಾಗಿರುವ ಐದು ರಾಜ್ಯಗಳಲ್ಲಿ ಜನವರಿ 22 ರವರೆಗೆ ಯಾವುದೇ ರಾಜಕೀಯ ಸಮಾವೇಶ, ರೋಡ್ ಶೋ ನಡೆಸದಂತೆ ನಿಷೇಧ ವಿಧಿಸಲಾಗಿದೆ ಎಂದು ತಿಳಿಸಿದೆ. ಈ ನಡುವೆ ಒಳಾಂಗಣ ರಾಜಕೀಯ ಸಭೆಗಳನ್ನು 300 ಜನರ ಮಿತಿ ಒಳಗೆ ನಡೆಸಲು ಅನುಮತಿಸಲಾಗುವುದು, ಸಭಾಂಗಣದ ಸಾಮರ್ಥ್ಯದ 50 ಪ್ರತಿಶತ ಅಥವಾ ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಿಗದಿಪಡಿಸಿದ ಮಿತಿ ಅನುಸರ ನಿಯಮ ಪಾಲನೆ ಮಾಡಬೇಕು ಎಂದು ಸೂಚಿಸಿದೆ.

    ನಿಷೇಧ ವಿಸ್ತರಣೆ
    ಚುನಾವಣಾ ಆಯೋಗ ಕಳೆದವಾರವಷ್ಟೇ ಅಂದರೆ ಜನವರಿ 8 ರಂದು ರಾಜಕೀಯ ಸಮಾವೇಶ, ರೋಡ್‌ಶೋಗಳು ಮತ್ತು ಇತರ ರೀತಿಯ ರಾಜಕೀಯ ಕಾರ್ಯಕ್ರಮಗಳು, ಒಳಾಂಗಣ ಮತ್ತು ಹೊರಾಂಗಣವನ್ನು ಜನವರಿ 15 ವರೆಗೆ ನಿಷೇಧಿಸಲಾಗುವುದು. ಬಳಿಕ ಕೋವಿಡ್ ಪರಿಸ್ಥಿತಿ ಅವಲೋಕಿಸಿ ನಂತರ ಆದೇಶವನ್ನು ಪರಿಶೀಲಿಸಲಾಗುವುದು ಎಂದು ಹೇಳಿತ್ತು. ಅದರಂತೆ ಇಂದು ಪುನಃ ಪರಿಷ್ಕೃತ ಆದೇಶ ಹೊರಡಿಸಿದೆ.

    ಈ ಸಂಬಂಧ ಇಂದು ಚುನಾವಣಾ ಆಯೋಗವು ಸರಣಿ ಸಭೆಗಳನ್ನು ನಡೆಸಿತು.ಕೇಂದ್ರ ಆರೋಗ್ಯ ಕಾರ್ಯದರ್ಶಿ ಹಾಗೂ ಎಲ್ಲಾ ಚುನಾವಣೆಗೆ ಒಳಪಟ್ಟ ರಾಜ್ಯಗಳ ಮುಖ್ಯ ಮತ್ತು ಆರೋಗ್ಯ ಕಾರ್ಯದರ್ಶಿಗಳು ಗಳೊಂದಿಗೆ ಮುಖ್ಯ ಚುನಾವಣಾ ಅಧಿಕಾರಿಗಳು ಸಭೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ

    ರೋಡ್​ ಶೋ, ಸಮಾವೇಶಕ್ಕಿಲ್ಲ ಅವಕಾಶ
    ಈ ವೇಳೆ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಸಾಧ್ಯವಾದಷ್ಟು ಸುರಕ್ಷಿತವಾಗಿ ಚುನಾವಣೆ ನಡೆಸುವ ಗುರಿಯನ್ನು ಹೊಂದಿರುವ 16 ಅಂಶಗಳ ಪಟ್ಟಿಯ ಭಾಗವಾಗಿ ಸಮಾವೇಶ ಮತ್ತು ರೋಡ್‌ಶೋಗಳನ್ನು ನಿಷೇಧಿಸುವ ಆದೇಶವನ್ನು ಅಂಗೀಕರಿಸಲಾಗಿದೆ.

    ಈ ಪಟ್ಟಿಯಲ್ಲಿ ರಸ್ತೆಬದಿಯ ಸಭೆಗಳನ್ನು ನಡೆಸುವುದು ಮತ್ತು ಮನೆ-ಮನೆಗೆ ಪ್ರಚಾರಕ್ಕಾಗಿ ಜನರ ಸಂಖ್ಯೆಯನ್ನು ಸೀಮಿತಗೊಳಿಸುವುದು ಸೇರಿದಂತೆ ಯಾವ ರೀತಿ ಕಾರ್ಯಕ್ಕೆ ಅನುಮತಿ ಇಲ್ಲ ಎಂಬುದನ್ನು ತಿಳಿಸಲಾಗಿದೆ.

    ಇದನ್ನು ಓದಿ: ಅಯೋಧ್ಯೆಯಲ್ಲ, ಗೋರಖ್​ಪುರದಿಂದ ಕಣಕ್ಕೆ ಇಳಿಯಲಿರುವ Yogi Adityanath

    ಉತ್ತರ ಪ್ರದೇಶದಲ್ಲಿ ಕೋವಿಡ್​ ನಿಯಮ ಉಲ್ಲಂಘನೆ
    ಉತ್ತರ ಪ್ರದೇಶದಲ್ಲಿ ಚುನಾವಣಾ ಬೆನ್ನಲ್ಲೇ ಪಕ್ಷಾಂತರ ಪರ್ವ ನಡೆಯುತ್ತಿದೆ. ಇಬ್ಬರು ಮಾಜಿ ಬಿಜೆಪಿ ಮಂತ್ರಿಗಳಾದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಂ ಸಿಂಗ್ ಸೈನಿ ಸೇರಿದಂತೆ ಆರು ಶಾಸಕರ ಅಖಿಲೇಶ್ ಯಾದವ್​ ಸಮ್ಮುಖದಲ್ಲಿ ಸಮಾಜವಾದಿ ಪಕ್ಷ ಸೇರಿದರು. ಈ ಪಕ್ಷ ಸೇರ್ಪಡನೆ ಕಾರ್ಯದಲ್ಲಿ ಅಸಂಖ್ಯಾತ ಜನರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನೂರಾರು ಜನರು ಜಮಾಯಿಸಿರುವುದನ್ನು ವೀಡಿಯೊಗಳು ಕೋವಿಡ್ ನಿಯಮಾವಳಿಗಳ ಕುರಿತು ಪ್ರಶ್ನಿಸಿದವು. ಕಾರ್ಯಕ್ರಮದಲ್ಲಿ ಭಾಗಿಯಾದ ಬಹುತೇಕರು ಯಾವುದೇ ಮುಖವಾಡಗಳನ್ನು ಧರಿಸಿರಲಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ.

    ಇದನ್ನು ಓದಿ: ಸರಕು ರೈಲಿಗೆ ಕನ್ನ; ಗ್ರಾಹಕರು ಬುಕ್​ ಮಾಡಿದ ವಸ್ತುಗಳ ದೋಚುತ್ತಿರುವ ಖದೀಮರು

    ಈ ಹಿನ್ನಲೆ ಉತ್ತರ ಪ್ರದೇಶ ಪೊಲೀಸರು 2, 500 ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಪ್ರಾಥಮಿಕವಾಗಿ, ಉಲ್ಲಂಘನೆಯಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಈ ಹಿನ್ನಲೆ ಪಕ್ಷದ ಕಚೇರಿಯಲ್ಲಿ ನೋಟಿಸ್ ಅಂಟಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.
    ಈ ಘಟನೆ ಬೆನ್ನಲ್ಲೇ ಇಂದು ಅಖಿಲೇಶ್​ ಯಾದವ್​ ಕಚೇರಿಗೆ ಬರುವ ಜನರಿಗೆ ಕೋಔಇಡ್​ ನಿಯಮ ಪಾಲನೆ ಮಾಡುವಂತೆ ಮನವಿ ಮಾಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಕೋವಿಡ್ ಸೋಂಕಿನಲ್ಲಿ ಶೇಕಡಾ 1,300 ರಷ್ಟು ಹೆಚ್ಚಳ ವರದಿ ಆಗಿದೆ. ಪಂಜಾಬ್‌ನ 22 ಜಿಲ್ಲೆಗಳಲ್ಲಿ ಶೇಕಡಾ 16ರಷ್ಟು ಅಂದರೆ ಪಾಸಿಟಿವಿಟಿ ದರ ಐದಕ್ಕಿಂತ ಹೆಚ್ಚು ದರವನ್ನು ಹೊಂದಿದ್ದು, ಇದು ಅಪಾಯದ ಮಟ್ಟ ಸೂಚಿಸಿದೆ.
    Published by:Seema R
    First published: