ಪ್ರಧಾನಿ ಮೋದಿ ಜೀವನ ಕುರಿತ ವೆಬ್​ ಸೀರೀಸ್​ ಬ್ಯಾನ್​ ಮಾಡಿದ ಚುನಾವಣಾ ಆಯೋಗ

ಪ್ರಧಾನಿ ನರೇಂದ್ರ ಮೋದಿ ಅವರ ಜೀವನಕತೆಯನ್ನು ಹೇಳುವ ಈ ವೆಬ್​ ಸೀರೀಸ್​ನಲ್ಲಿ ಮೋದಿ 12 ವರ್ಷದವರಾಗಿದ್ದಾಗಿನಿಂದ ಪ್ರಧಾನಿಯಾಗುವವರೆಗೆ ಯಾವೆಲ್ಲ ಕಷ್ಟ, ಸವಾಲುಗಳನ್ನು ಎದುರಿಸಿದರು ಎಂಬ ಬಗ್ಗೆ ತಿಳಿಸಲಾಗಿದೆ.

Sushma Chakre | news18
Updated:April 20, 2019, 5:39 PM IST
ಪ್ರಧಾನಿ ಮೋದಿ ಜೀವನ ಕುರಿತ ವೆಬ್​ ಸೀರೀಸ್​ ಬ್ಯಾನ್​ ಮಾಡಿದ ಚುನಾವಣಾ ಆಯೋಗ
ಪ್ರಧಾನಿ ನರೇಂದ್ರ ಮೋದಿ
Sushma Chakre | news18
Updated: April 20, 2019, 5:39 PM IST
ನವದೆಹಲಿ (ಏ. 20): ಮೋದಿ ಜೀವನಚರಿತ್ರೆಯ ಕುರಿತು ಮೂಡಿಬರುತ್ತಿರುವ 'ಮೋದಿ; ಸಾಮಾನ್ಯ ವ್ಯಕ್ತಿಯ ಜೀವನ ಪಯಣ' ಎಂಬ ವೆಬ್​ ಸೀರೀಸ್​ ಅನ್ನು ಚುನಾವಣೆ ಮುಗಿಯುವವರೆಗೆ ಪ್ರಕಟಿಸದಂತೆ ಎರೋಸ್​ ನೌ ಸಂಸ್ಥೆಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಅಲ್ಲದೆ, ವೆಬ್​ ಸೀರೀಸ್​ನ ಎಲ್ಲ ಎಪಿಸೋಡ್​ಗಳನ್ನೂ ವೆಬ್​ಸೈಟ್​ನಿಂದ ಡಿಲೀಟ್​ ಮಾಡುವಂತೆ ಆದೇಶ ನೀಡಲಾಗಿದೆ. ಈ ಬಗ್ಗೆ ಏ. 13ರಂದು ಚುನಾವಣಾ ಆಯೋಗದ ಮೆಟ್ಟಿಲೇರಿದ್ದ ಕಾಂಗ್ರೆಸ್​, ವೆಬ್​ ಸೀರೀಸ್​ ರಿಲೀಸ್​ ಮಾಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿತ್ತು. ಈ ವೆಬ್​ ಸೀರೀಸ್​ ನೋಡುಗರ ಮತ್ತು ಮತದಾರರ ಮೇಲೆ ಪ್ರಭಾವ ಬೀರಲಿದೆ. ಹಾಗಾಗಿ, ಲೋಕಸಭಾ ಚುನಾವಣೆ ಮುಗಿಯುವವರೆಗೆ ಈ ವೆಬ್​ ಸೀರೀಸ್​ ಪ್ರಕಟವಾಗದಂತೆ ತಡೆಯೊಡ್ಡಬೇಕು  ಎಂದು ದೂರಿನಲ್ಲಿ ಹೇಳಲಾಗಿತ್ತು.

ಕಾಫಿ ವಿತ್ ಕರಣ್ ಷೋ ಕಂಟಕ; ಮಹಿಳೆಯರ ಕುರಿತ ಅಸಭ್ಯ ಹೇಳಿಕೆ; ಪಾಂಡ್ಯ ಹಾಗೂ ರಾಹುಲ್​ಗೆ ತಲಾ 20 ಲಕ್ಷ ದಂಡ

ಪ್ರಧಾನಿ ನರೇಂದ್ರ ಮೋದಿ ಅವರ ಜೀವನಕತೆಯನ್ನು ಹೇಳುವ ಈ ವೆಬ್​ ಸೀರೀಸ್​ನಲ್ಲಿ ಮೋದಿ 12 ವರ್ಷದವರಾಗಿದ್ದಾಗಿನಿಂದ ಪ್ರಧಾನಿಯಾಗುವವರೆಗೆ ಯಾವೆಲ್ಲ ಕಷ್ಟ, ಸವಾಲುಗಳನ್ನು ಎದುರಿಸಿದರು ಎಂಬ ಬಗ್ಗೆ ತಿಳಿಸಲಾಗಿದೆ. ಏ. 3ರಿಂದ ಈ ವೆಬ್​ ಸೀರೀಸ್​ನ ಎಪಿಸೋಡ್​ಗಳು ಪ್ರಕಟವಾಗಲಾರಂಭಿಸಿವೆ. ಈಗಾಗಲೇ 5 ಎಪಿಸೋಡ್​ಗಳು ಪ್ರಕಟವಾಗಿದ್ದು, ವೆಬ್​ಸೈಟ್​ನಿಂದ ಅವುಗಳನ್ನೆಲ್ಲ ಡಿಲೀಟ್​ ಮಾಡುವಂತೆ ಸೂಚಿಸಲಾಗಿದೆ. ಈ ಹಿಂದೆ ಮೋದಿ ಜೀವನಕತೆಯನ್ನಾಧರಿಸಿದ, ವಿವೇಕ್​ ಒಬೆರಾಯ್​ ಅಭಿನಯದ ಬಾಲಿವುಡ್​ ಸಿನಿಮಾಗೆ ಕೂಡ ತಡೆ ನೀಡಲಾಗಿತ್ತು. ಲೋಕಸಭಾ ಚುನಾವಣೆ ಮುಗಿಯುವವರೆಗೆ ಸಿನಿಮಾ ಬಿಡುಗಡೆ ಮಾಡದಂತೆ ಆದೇಶಿಸಲಾಗಿತ್ತು.

 

First published:April 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626