Five Sates Elections: ಪಂಚರಾಜ್ಯಗಳ ಚುನಾವಣೆಗೆ ಇಂದು ದಿನಾಂಕ ಪ್ರಕಟಿಸಲಿರುವ ಚುನಾವಣಾ ಆಯೋಗ

ಎಲ್ಲಾ ರಾಜಕೀಯ ಪಕ್ಷಗಳು ಕೂಡ ಐದು ರಾಜ್ಯಗಳಲ್ಲಿ ಅವಧಿಗೆ ಸರಿಯಾಗಿ ಚುನಾವಣೆ ನಡೆಸುವಂತೆ ತಿಳಿಸಿವೆ. ಕೋವಿಡ್ ಮಾರ್ಗಸೂಚಿ ಅನ್ವಯ ಚುನಾವಣೆ ‌ನಡೆಸಿ ಎಂದಿವೆ.

ಚುನಾವಣಾ ಆಯೋಗ

ಚುನಾವಣಾ ಆಯೋಗ

  • Share this:
ನವದೆಹಲಿ, ಜ.‌ 8: ಮುಂದಿನ‌ ತಿಂಗಳು ದೇಶಕ್ಕೆ ಕೊರೋನಾ ಮೂರನೇ ಅಲೆ (Corona Third Wave) ಅಪ್ಪಳಿಸಬಹುದು ಎಂಬ ಆತಂಕ ಇದೆ. ಅಲ್ಲದೆ ಓಮಿಕ್ರಾನ್ ವೈರಸ್ (Omicron Virus) ಕೂಡ ಬಹಳ ಬೇಗವಾಗಿ ಹರಡುತ್ತಿದೆ. ಇದೇ ಕಾರಣಕ್ಕೆ ಚುನಾವಣೆಗಳನ್ನು ಮುಂದೂಡುವಂತೆ ಮನವಿ ಮಾಡಲಾಗಿತ್ತು. ಚುನಾವಣಾ ಸಭೆ, ಸಮಾರಂಭ, ರೋಡ್ ಶೋಗಳನ್ನು ನಿರ್ಬಂಧಿಸುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಇದೆಲ್ಲದರ ನಡುವೆಯೂ ಉತ್ತರ ಪ್ರದೇಶ (Uttar Pradesh), ಉತ್ತರಖಂಡಾ (Uttarkhand), ಪಂಜಾಬ್ (Punjab), ಗೋವಾ (Goa) ಮತ್ತು ಮಣಿಪುರ (Manipura) ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ  (Assembly Elections) ಇಂದು ಕೇಂದ್ರ ಚುನಾವಣಾ ಆಯೋಗ (Central Election Commission) ದಿನಾಂಕವನ್ನು ಪ್ರಕಟಿಸಲಿದೆ.

ಸಿಇಸಿ ಸುದ್ದಿಗೋಷ್ಠಿಯಲ್ಲಿ ಪ್ರಕಟ
ಇಂದು ಮಧ್ಯಾಹ್ನ 3.30ಕ್ಕೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಚಂದ್ರ (Chief Election Commissioner Sunil Chandra) ಅವರು ದೆಹಲಿಯ ‌ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಉತ್ತರ ಪ್ರದೇಶ, ಉತ್ತರಖಂಡಾ, ಪಂಜಾಬ್, ಗೋವಾ  ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಗಳ ದಿನಾಂಕವನ್ನು ಪ್ರಕಟಿಸಲಿದ್ದಾರೆ. ಅಲ್ಲದೆ ಕೋವಿಡ್ ಮತ್ತು ಓಮೈಕ್ರಾನ್ ಇರುವ ಕಾರಣಕ್ಕೆ ಚುನಾವಣಾ ಆಯೋಗ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಆಯಾ ರಾಜ್ಯಗಳು ಏನೆಲ್ಲಾ ಕ್ರಮಗಳನ್ನು ‌ಕೈಗೊಳ್ಳಬೇಕೆಂದು ತಿಳಿಸಲಿದ್ದಾರೆ ಎಂದು ಗೊತ್ತಾಗಿದೆ.

ಇದನ್ನೂ ಓದಿ:Terrorist: ನಾಗ್ಪುರದ RSS ಕಚೇರಿ ಸುತ್ತ ಭೂಸಮೀಕ್ಷೆ ನಡೆಸಿರುವ ಉಗ್ರರು, ಸ್ಥಳದಲ್ಲಿ ಬಿಗಿ ಭದ್ರತೆ, ಡ್ರೋಣ್​ ಹಾರಾಟ ನಿಷೇಧ

ಚುನಾವಣೆ ಮುಂದೂಡುವಂತೆ ಬಂದಿದ್ದ ಮನವಿ
ಇದಕ್ಕೂ ಮೊದಲು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಶೇಖರ್ ಯಾದವ್‌ ಅವರು ಇತ್ತೀಚೆಗೆ 'ಕೊರೋನಾ ಮತ್ತು ಓಮೈಕ್ರಾನ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಗಳನ್ನು ಮುಂದೂಡುವ ಬಗ್ಗೆ ಪರಿಶೀಲನೆ ನಡೆಸಿ'  ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಇದಾದ ಮೇಲೆ ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಲು ಚುನಾವಣಾ ಆಯೋಗದ ಅಧಿಕಾರಿಗಳು ಉತ್ತರ ಪ್ರದೇಶದ ಜಿಲ್ಲಾ ಮತ್ತು ವಿಭಾಗ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಅಲ್ಲದೆ ಇತ್ತೀಚೆಗೆ ಕೇಂದ್ರ ಆರೋಗ್ಯ ಇಲಾಖೆಯ ಉನ್ನಾತಾಧಿಕಾರಿಗಳ ಜೊತೆ ಕೂಡ ಸಭೆ ನಡೆಸಿದ್ದರು. ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಚಂದ್ರ ಅವರು 'ಚುನಾವಣೆ ನಡೆಸಲಾಗುವುದು' ಎಂದೇ ಪ್ರಕಟಿಸಿದ್ದರು.

ಪಕ್ಷಗಳಿಂದ ಚುನಾವಣೆಗೆ ಒಲವು
ಎಲ್ಲಾ ರಾಜಕೀಯ ಪಕ್ಷಗಳು ಕೂಡ ಐದು ರಾಜ್ಯಗಳಲ್ಲಿ ಅವಧಿಗೆ ಸರಿಯಾಗಿ ಚುನಾವಣೆ ನಡೆಸುವಂತೆ ತಿಳಿಸಿವೆ. ಕೋವಿಡ್ ಮಾರ್ಗಸೂಚಿ ಅನ್ವಯ ಚುನಾವಣೆ ‌ನಡೆಸಿ ಎಂದಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ  ಚುನಾವಣೆ ನಡೆಸಲು ನಿರ್ಧರಿಸಿದೆ ಎಂದು ಸುನಿಲ್ ಚಂದ್ರ ತಿಳಿಸಿದ್ದರು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ಆಯೋಗದ ಮೊದಲ ಆದ್ಯತೆ. ಈಗ ಕೊರೋನಾ ಮತ್ತು ಓಮೈಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಕೂಡ ಆಯೋಗದ ಆದ್ಯತೆಯಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: Crime Case: ದೇಶದಲ್ಲಿ ಬೆಂಗಳೂರು ಸೇಫ್: ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆ

ಕೋವಿಡ್ ಮುನ್ನೆಚ್ಚರಿಕೆ
ಚುನಾವಣೆಗೆ ಒಳಪಡುವ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ಶೇಕಡಾ ‌ನೂರರಷ್ಟು ಲಸಿಕೆ ಅಭಿಯಾನ‌ ನಡೆಸಲು ಸೂಚಿಸಲಾಗುವುದು. ಕರ್ತವ್ಯಕ್ಕೆ ನಿಯೋಜಿಸಲಾದ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಸಂಪೂರ್ಣ ಲಸಿಕೆ ಹಾಕಲಾಗುವುದು. ಕೋವಿಡ್ ಲಸಿಕೆಗಳ ಬೂಸ್ಟರ್ ಶಾಟ್‌ಗಳನ್ನು ಪಡೆಯಲು ಅವರನ್ನು ಮುಂಚೂಣಿಯ ಕಾರ್ಯಕರ್ತರು ಎಂದು ಗುರುತಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದರು.
Published by:Latha CG
First published: