• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Maharashtra News: 15-20 ದಿನದೊಳಗೆ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಪತನ! ಹೀಗೆ ಹೇಳಿದ್ಯಾರು ಗೊತ್ತಾ?

Maharashtra News: 15-20 ದಿನದೊಳಗೆ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಪತನ! ಹೀಗೆ ಹೇಳಿದ್ಯಾರು ಗೊತ್ತಾ?

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಉದ್ಧವ್‌ ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ 16 ಶಿವಸೇನೆಯ (ಶಿಂಧೆ ಬಣ) ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪಿಗಾಗಿ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ನಾಯಕರು ಕಾಯುತ್ತಿದ್ದಾರೆ.

 • News18 Kannada
 • 5-MIN READ
 • Last Updated :
 • Mumbai, India
 • Share this:

ಮುಂಬೈ: ಸಿಎಂ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ (Maharashtra Govt) ‘ಡೆತ್‌ ವಾರೆಂಟ್‌’ (Death Warrant) ಹೊರಡಿಸಲಾಗಿದೆ ಮತ್ತು ಮುಂದಿನ 15-20 ದಿನಗಳಲ್ಲಿ ಆ ಸರ್ಕಾರ ಪತನವಾಗಲಿದೆ ಎಂದು ಶಿವಸೇನಾ (Shiv Sena) (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಭವಿಷ್ಯ ನುಡಿದಿದ್ದಾರೆ.


ಈ ಸಂಬಂಧ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಶಿವಸೇನಾ ಬಣದ ಪ್ರಮುಖ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್, ನಮ್ಮ ಪಕ್ಷವು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದೆ ಮತ್ತು ನ್ಯಾಯ ಸಿಗುತ್ತದೆ ಎಂಬ ಭರವಸೆಯಲ್ಲಿ ಇದ್ದೇವೆ ಎಂದು ಹೇಳಿದರು. ಇದೇ ವೇಳೆ, ಉದ್ಧವ್‌ ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ 16 ಶಿವಸೇನೆಯ (ಶಿಂಧೆ ಬಣ) ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿ ಸೇರಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸಂಜಯ್ ರಾವತ್ ಉಲ್ಲೇಖಿಸಿದರು.


'ನಾನು ಹಿಂದೆಯೇ ಹೇಳಿದ್ದೆ'


15 ದಿನಗಳಲ್ಲಿ ಶಿಂಧೆ ಸರ್ಕಾರ ಪತನವಾಗಲಿದೆ ಎಂದು ಈ ಹಿಂದೆಯೇ ಹೇಳಿದ್ದೆ. ಆದರೆ ಅದು ಆಗಲಿಲ್ಲ. ಯಾಕೆಂದರೆ ಸುಪ್ರೀಂ ಕೋರ್ಟ್ ತನ್ನ ವಿಚಾರಣೆಯನ್ನು ಮುಂದೂಡಿತ್ತು. ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ನ ತೀರ್ಪು ಹೊರ ಬೀಳಲಿದ್ದು, ಆಗ ಏಕನಾಥ್ ಶಿಂಧೆ ನೇತೃತ್ವದ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಸಂಜಯ್ ರಾವತ್ ಹೇಳಿದರು.


ಇದನ್ನೂ ಓದಿ: Shiv Sena Symbol Row: ಶಿಂಧೆ ಬಣದ ಪಾಲಾಯ್ತು ಶಿವಸೇನೆ ಬಿಲ್ಲು-ಬಾಣ! ಉದ್ಧವ್​ ಠಾಕ್ರೆಗೆ ಹಿನ್ನಡೆ, ಸಿಎಂ ಏಕನಾಥ್‌ಗೆ ಗೆಲುವು


ತನ್ನ ಎಲ್ಲಾ ಬ್ಯಾಗ್‌ಗಳನ್ನು ಪ್ಯಾಕ್ ಮಾಡಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಬಿಜೆಪಿ ಹೇಳಿದೆ ಎಂದು ವ್ಯಂಗ್ಯವಾಡಿರುವ ಸಂಜಯ್ ರಾವತ್, ಸದ್ಯ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ 40 ಶಾಸಕರ ಸರ್ಕಾರ 15-20 ದಿನಗಳಲ್ಲಿ ಪತನವಾಗಲಿದೆ. ಈ ಸರ್ಕಾರದ ಡೆತ್ ವಾರಂಟ್ ಹೊರಡಿಸಲಾಗಿದೆ. ಇದಕ್ಕೆ ಯಾರು ಸಹಿ ಹಾಕುತ್ತಾರೆ ಎಂಬುದನ್ನು ಸದ್ಯದಲ್ಲೇ ನಿರ್ಧರಿಸಲಾಗುವುದು ಎಂದು ರಾವತ್ ಹೇಳಿದ್ದಾರೆ.


2 ಬಣಗಳಾಗಿ ವಿಂಗಡಣೆ


ಕಳೆದ ವರ್ಷ ಜೂನ್‌ನಲ್ಲಿ, ಏಕನಾಥ್ ಶಿಂಧೆ ಮತ್ತು ಶಿವಸೇನೆಯ 39 ಶಾಸಕರು ಉದ್ಧವ್ ಠಾಕ್ರೆ ಬಣದ ಶಿವಸೇನಾ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು. ಇದರ ಪರಿಣಾಮವಾಗಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ (ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ) ಪಕ್ಷದ ವಿಭಜನೆ ಮತ್ತು ಸರ್ಕಾರ ಪತನಕ್ಕೆ ಕಾರಣವಾಗಿತ್ತು.


ಬಳಿಕ  ಏಕನಾಥ್ ಶಿಂಧೆ ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದರು. 2022ರ ಜೂನ್ 30 ರಂದು ಏಕನಾಥ್ ಶಿಂಧೆ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ರೆ, ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.


ಇದನ್ನೂ ಓದಿ: Sanjay Raut: ಉದ್ಧವ್ ಠಾಕ್ರೆ ಕೋರ್ಟ್‌ಗೆ ಹೋಗೋ ದಿನವನ್ನು ದೆಹಲಿ ಸ್ಕ್ರಿಪ್ಟ್‌ ರೈಟರ್ಸ್‌ ನಿರ್ಧರಿಸುತ್ತಾರೆ: ಸಂಜಯ್ ರಾವತ್ ಕಿಡಿ


ಶಿವಸೇನೆ ಚಿಹ್ನೆ ಶಿಂಧೆ ಬಣದ ಪಾಲು!


ಶಿವಸೇನೆ ಪಕ್ಷ ಒಡೆದು ಎರಡು ಹೋಳಾದ ನಂತರ ಶಿಂಧೆ ಬಣ ಹಂತ ಹಂತವಾಗಿ ಶಿವಸೇನೆಯ ಎಲ್ಲಾ ಅಧಿಕೃತ ದಾಖಲೆಗಳನ್ನು ತನ್ನ ವಶ ಮಾಡಲು ಯೋಜನೆ ರೂಪಿಸಿತ್ತು, ಅದರನ್ವಯ ಪಕ್ಷದ ಚಿಹ್ನೆಗಾಗಿ ಹೋರಾಟ ರೂಪಿಸಿತ್ತು. ಅಂತಿಮವಾಗಿ ಅಂತೂ ಚುನಾವಣಾ ಆಯೋಗ ಪಕ್ಷದ ಚಿಹ್ನೆಯ ಹೋರಾಟಕ್ಕೆ ಅಂತ್ಯ ಹಾಡಿ, ಮುಖ್ಯಮಂತ್ರಿ ಆಗಿರುವ ಏಕನಾಥ್ ಶಿಂಧೆ ಬಣವೇ ನಿಜವಾದ​ ಶಿವಸೇನೆ ಎಂದು ಘೋಷಣೆ ಮಾಡಿ ಬಿಲ್ಲು ಬಾಣದ ಗುರುತಿನ ಪಕ್ಷದ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿತ್ತು.

top videos


  ಇದರಲ್ಲಿ 2019ರ ಮಹಾರಾಷ್ಟ್ರ ವಿಧಾನಸೌಭೆ ಚುನಾವಣೆಯಲ್ಲಿ ಗೆದ್ದಿದ್ದ ಶಿವಸೇನೆಯ 55 ಅಭ್ಯರ್ಥಿಗಳ ಪೈಕಿ ಶೇ 70 ರಷ್ಟು ಮಂದಿ ಏಕನಾಥ್​ ಶಿಂಧೆಯವರನ್ನು ಬೆಂಬಲಿಸಿದ್ದರು.

  First published: