Eknath Shinde: ಸಿಎಂ ಏಕನಾಥ್ ಶಿಂಧೆಗೆ ಉದ್ಧವ್ ಠಾಕ್ರೆ ಶಾಕ್, ಶಿವಸೇನೆ ನಾಯಕನ ಸ್ಥಾನದಿಂದ ಔಟ್!

ಶಿವಸೇನೆಯಲ್ಲಿ ಸಿಎಂ ಬಿಟ್ಟರೆ ನಂತರದ ಸ್ಥಾನ ಶಿವಸೇನೆ ನಾಯಕನದ್ದು. ಇಷ್ಟು ದಿನ ಈ ಸ್ಥಾನವನ್ನು ಏಕನಾಥ್ ಶಿಂಧೆ ನಿರ್ವಹಿಸುತ್ತಿದ್ದರು. ಇದೀಗ ಶಿವಸೇನೆ ನಾಯಕನ ಸ್ಥಾನದಿಂದ ಅವರನ್ನು ಉಚ್ಛಾಟನೆ ಮಾಡಿ ಉದ್ಧವ್ ಠಾಕ್ರೆ ಆದೇಶಿಸಿದ್ದಾರೆ.

ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಸಂಗ್ರಹ ಚಿತ್ರ

ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಸಂಗ್ರಹ ಚಿತ್ರ

  • Share this:
ಮಹಾರಾಷ್ಟ್ರ: ಶಿವಸೇನೆ ಬಂಡಾಯ ಶಾಸಕರ ನಾಯಕ (Shiv Sena Rebel MLA’s Leader) ಏಕನಾಥ್ ಶಿಂಧೆ (Eknath Shinde) ಸಿಎಂ ಆಗುವ ಮೂಲಕ ಮಹಾರಾಷ್ಟ್ರ ರಾಜ್ಯ ರಾಜಕೀಯ (Maharashtra State Politics) ಪ್ರಹಸನ ಮತ್ತೊಂದು ತಿರುವು ಪಡೆದಿತ್ತು. ಇದೀಗ ಜುಲೈ 4 ಸೋಮವಾರ ನೂತನ ಸಿಎಂ ಏಕನಾಥ್ ಶಿಂಧೆಗೆ ಬಹುಮತ ಸಾಬೀತು (Majority Prove) ಮಾಡುವ ಅನಿವಾರ್ಯತೆ ಎದುರಾಗಿದೆ. ಇದೀಗ ಏಕನಾಥ್ ಶಿಂಧೆಗೆ ಶಿವಸೇನೆ ಮುಖ್ಯಸ್ಥ (Shiv Sena chief) ಹಾಗೂ ಮಾಜಿ ಸಿಎಂ (Ex CM) ಉದ್ಧವ್ ಠಾಕ್ರೆ (Uddhav Thackrey) ಶಾಕ್ ಕೊಟ್ಟಿದ್ದಾರೆ. ಶಿವಸೇನೆಯಲ್ಲಿ ಸಿಎಂ ಬಿಟ್ಟರೆ ನಂತರದ ಸ್ಥಾನ ಶಿವಸೇನೆ ನಾಯಕನದ್ದು. ಇಷ್ಟು ದಿನ ಈ ಸ್ಥಾನವನ್ನು ಏಕನಾಥ್ ಶಿಂಧೆ ನಿರ್ವಹಿಸುತ್ತಿದ್ದರು. ಇದೀಗ ಶಿವಸೇನೆ ನಾಯಕನ ಸ್ಥಾನದಿಂದ ಅವರನ್ನು ಉಚ್ಛಾಟನೆ ಮಾಡಿ ಉದ್ಧವ್ ಠಾಕ್ರೆ ಆದೇಶಿಸಿದ್ದಾರೆ. ಏಕನಾಥ್ ಶಿಂಧೆ ಅವರು ಸ್ವಯಂಪ್ರೇರಣೆಯಿಂದ ತಮ್ಮ ಸದಸ್ಯತ್ವವನ್ನು ತ್ಯಜಿಸಿದ್ದಾರೆ  ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಅಂತ ಆರೋಪಿಸಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಶಿವಸೇನೆ ನಾಯಕನ ಸ್ಥಾನದಿಂದ ಶಿಂಧೆ ಉಚ್ಛಾಟನೆ

ಶಿವಸೇನೆಯಲ್ಲಿ ಸಿಎಂ ಬಳಿಕ ಮುಖ್ಯ ಸ್ಥಾನವಾಗಿದ್ದ ಶಿವಸೇನೆ ನಾಯಕನ ಸ್ಥಾನದಿಂದ ಏಕನಾಥ್ ಶಿಂಧೆ ಅವರನ್ನು ಉಚ್ಛಾಟನೆ ಮಾಡಲಾಗಿದೆ. ನೀವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದೀರಿ ಮತ್ತು ಸ್ವಯಂಪ್ರೇರಣೆಯಿಂದ ಶಿವಸೇನೆಯ ಸದಸ್ಯತ್ವವನ್ನು ತ್ಯಜಿಸಿದ್ದೀರಿ. ಆದ್ದರಿಂದ, ಶಿವಸೇನಾ ಪಕ್ಷದ ಪ್ರಮುಖನಾಗಿ ನನಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ, ನಾನು ನಿಮ್ಮನ್ನು ಶಿವಸೇನೆ ಪಕ್ಷದ ನಾಯಕನ ಸ್ಥಾನದಿಂದ ತೆಗೆದುಹಾಕುತ್ತಿದ್ದೇನೆ’ ಎಂದು ಠಾಕ್ರೆ ಅವರು ಶಿಂಧೆಗೆ ನೀಡಿರುವ ನೋಟಿಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಶ್ವಾಸಮತ ಯಾಚನೆ

ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ ಜುಲೈ 4 ಅಂದರೆ ಇದೇ ಬರುವ ಸೋಮವಾರದಂದು ತಮ್ಮ ನೂತನ ಸರ್ಕಾರದ ಬಹುಮತ ಸಾಬೀತು ಮಾಡಬೇಕಿದೆ. ಏಕನಾಥ್ ಶಿಂಧೆ ತಮ್ಮ ಕಡೆ 39 ಶಾಸಕರ ಬೆಂಬಲವಿದ್ದು, ನಮ್ಮದೇ ನಿಜವಾದ ಶಿವಸೇನೆ ಅಂತ ಹೇಳಿಕೊಂಡಿದ್ದರು. ಇದೀಗ ಅವರ ಬಳಿ ಎಷ್ಟು ಶಾಸರರ ಬಲವಿದೆ ಎನ್ನುವುದು ಸೋಮವಾರ ಗೊತ್ತಾಗಲಿದೆ. ಸೋಮವಾರದ ಮತದಾನದಲ್ಲಿ ಅದು ದೃಢಪಟ್ಟರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಬಿಜೆಪಿ ಮೈತ್ರಿ ಸರ್ಕಾರ ಸುರಕ್ಷಿತವಾಗಿರಲಿದೆ.

ಇದನ್ನೂ ಓದಿ: Confidence Vote: ವಿಶ್ವಾಸಮತ ಎಂದರೇನು? ಸರ್ಕಾರದ ಅಳಿವು-ಉಳಿವಿನಲ್ಲಿ ಇದರ ಮಹತ್ವವೇನು?

ನಾಳೆ, ನಾಡಿದ್ದು ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನ

ಮೊದಲು ಇಂದು ಮತ್ತು ನಾಳೆ ಅಂದರೆ ಶನಿವಾರ ಮತ್ತು ಭಾನುವಾರ ಮಹಾರಾಷ್ಟ್ರ ವಿಶೇಷ ಅಧಿವೇಶನ ನಿಗದಿಯಾಗಿತ್ತು. ಕಾಂಗ್ರೆಸ್ ಪಕ್ಷದ ನಾನಾ ಪಟೋಲೆ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದಲೂ ಆ ಸ್ಥಾನ ತೆರವಾಗಿದೆ.

ಹೊಸ ಸ್ಪೀಕರ್ ಆಯ್ಕೆ ಬಳಿಕ ವಿಶ್ವಾಸಮತ ಯಾಚನೆ

ಹೀಗಾಗಿ  ಹೊಸದಾಗಿ ಸ್ಪೀಕರ್ ಆಯ್ಕೆ ನಡೆಯಬೇಕಿದ್ದು, ಬಿಜೆಪಿ ಶಾಸಕ ರಾಹುಲ್ ನರ್ವೇಕರ್ ವಿಧಾನಸಭಾ ಸ್ಪೀಕರ್ ಸ್ಥಾನಕ್ಕಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಒಂದು ವೇಳೆ ಈ ಸ್ಥಾನಕ್ಕೆ ಚುನಾವಣೆ ಅಗತ್ಯವಾದರೆ ಎರಡು ದಿನಗಳ ವಿಶೇಷ ಅಧಿವೇಶನ ಆರಂಭವಾಗುವ ಮೊದಲ ದಿನ, ಅಂದರೆ ಜುಲೈ 3 ರಂದು ಚುನಾವಣೆ ನಡೆಯಲಿದೆ. ಹೀಗಾಗಿ ಸ್ಪೀಕರ್ ಆಯ್ಕೆ ಬಳಿಕವೇ ಏಕನಾಥ್ ಶಿಂಧೆ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ಇದನ್ನೂ ಓದಿ: Eknath Shinde: ಜುಲೈ 4ರಂದು ಶಿಂಧೆ ಸರ್ಕಾರಕ್ಕೆ ಮಹಾ ಪರೀಕ್ಷೆ! 12ರಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ಶಿಂಧೆ ಬಣದ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ ಎಂದ ಸಂಸದರು

ನಿನ್ನೆ  ಮುಂಬೈನಲ್ಲಿ ಠಾಕ್ರೆ ಅವರು ಕರೆದಿದ್ದ ಶಿವಸೇನೆಯ ಸಂಸದರ
ಸಭೆಯಲ್ಲಿ ಪಕ್ಷದ ಹಿರಿಯರೊಬ್ಬರು ಸಹ ಪಕ್ಷದ ದೀರ್ಘಾವಧಿಯ ಹಿತಾಸಕ್ತಿಗಳಿಗಾಗಿ ಶಿಂಧೆ ನೇತೃತ್ವದ ಬಂಡಾಯ ಗುಂಪಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಲಹೆಗಳನ್ನು ನೀಡಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.
Published by:Annappa Achari
First published: