Maharashtra Politics: ರೆಸಾರ್ಟ್‌ನಿಂದ ಮುಂಬೈಗೆ ಬರ್ತಾರಾ ರೆಬೆಲ್ ಶಾಸಕರು? ನನ್ನ ಜೊತೆ 50 ಮಂದಿ ಇದ್ದಾರೆ ಎಂದ ಶಿಂಧೆ!

ಮಹತ್ವದ ಬೆಳವಣಿದೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ಗುಂಪು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಾವೆಲ್ಲರೂ ಶೀಘ್ರವೇ ಗುವಾಹಟಿಯ ರೆಸಾರ್ಟ್‌ನಿಂದ ಮುಂಬೈಗೆ ಹೋಗುತ್ತಿದ್ದೇವೆ ಅಂತ ಹೇಳಿದ್ದಾರೆ.

ರೆಸಾರ್ಟ್‌ನಲ್ಲಿರುವ ಬಂಡಾಯ ಶಾಸಕರು

ರೆಸಾರ್ಟ್‌ನಲ್ಲಿರುವ ಬಂಡಾಯ ಶಾಸಕರು

  • Share this:
ಮುಂಬೈ, ಮಹಾರಾಷ್ಟ್ರ: ನೆರೆಯ ಮಹಾರಾಷ್ಟ್ರ (Maharashtra) ರಾಜ್ಯ ರಾಜಕೀಯ (State Politics) ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ನಿನ್ನೆಯಷ್ಟೇ ಶಾಸಕರ (MLA) ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ (Supreme Court) ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತ್ತು. ಇತ್ತ ರೆಬೆಲ್ ಶಾಸಕರನ್ನು (Rebel MLA’s) ಸಂಪರ್ಕಿಸಲು ಸಿಎಂ ಉದ್ಧವ್ ಠಾಕ್ರೆ ಬಣ (Uddhav Thackeray Team) ಶತ ಪ್ರಯತ್ನ ನಡೆಲುತ್ತಿದೆ. ಈ ನಡುವೆ ನಮ್ಮ ಬಳಿ 50 ಶಾಸಕರ ಬಲವಿದೆ ಅಂತ ಏಕನಾಥ್ ಶಿಂಧೆ ಬಣ (Eknath Shindhe Team) ಹೇಳಿದೆ. ನಾವು ಶೀಘ್ರದಲ್ಲೇ ಅಸ್ಸಾಂ (Assam) ರಾಜ್ಯದ ಗುವಾಹಟಿಯ (Gauhati) ಖಾಸಗಿ ರೆಸಾರ್ಟ್‌ನಿಂದ (Privet Resort) ಮುಂಬೈಗೆ (Mumbai) ವಾಪಸ್ಸಾಗುತ್ತೇವೆ ಅಂತ ಏಕನಾಥ್ ಶಿಂಧೆ ಹೇಳಿದ್ದಾರೆ.

ರಾಜ್ಯಪಾಲರ ಭೇಟಿಗೆ ಏಕನಾಥ್ ಶಿಂಧೆ ಪ್ರಯತ್ನ

ಮಹತ್ವದ ಬೆಳವಣಿದೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ಗುಂಪು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಾವೆಲ್ಲರೂ ಶೀಘ್ರವೇ ಗುವಾಹಟಿಯ ರೆಸಾರ್ಟ್‌ನಿಂದ ಮುಂಬೈಗೆ ಹೋಗುತ್ತಿದ್ದೇವೆ ಅಂತ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿವಿಶ್ವಾಸ ಮತಕ್ಕಾಗಿ ಒತ್ತಾಯಿಸಲು ಏಕನಾಥ್ ಶಿಂಧೆ ಮತ್ತು ರೆಬೆಲ್ ಶಾಸಕರ ಬಣ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡುತ್ತಾರೆ ಎಂಬ ಊಹಾಪೋಹಗಳಿವೆ.

ಶೀಘ್ರವೇ ಮುಂಬೈಗೆ ಹೋಗುತ್ತೇವೆ

ನಾವು ಶಿವಸೇನೆಯಲ್ಲಿ ಇದ್ದೇವೆ, ಶಿವಸೇನೆಯನ್ನು ನಾವೇ ಮುನ್ನಡೆಸುತ್ತೇವೆ. ಈ ವಿಚಾರದಲ್ಲಿ ಯಾರಿಗೂ ಸಂಶಯ ಬೇಡ ಅಂತ ಏಕನಾಥ್ ಶಿಂಧೆ ಹೇಳಿದ್ದಾರೆ. ನಾವು ಮುಂದೆ ಏನು ಮಾಡಲಿದ್ದೇವೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ. ಕೆಲವೇ ದಿನಗಳಲ್ಲಿ ನಾವು ಮುಂಬೈಗೆ ಹೋಗುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Maharashtra Politics: ಜುಲೈ 11ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಶಿಂಧೆ ಟೀಂ!

ನಮ್ಮ ಬಳಿ 50 ಶಾಸಕರ ಬಲವಿದೆ ಎಂದ ಏಕನಾಥ್ ಶಿಂಧೆ

ಇನ್ನು ನಮ್ಮ ಬಳಿ 50 ಶಾಸಕರು ಇದ್ದಾರೆ ಅಂತ ಏಕನಾಥ್ ಶಿಂಧೆ ಹೇಳಿದ್ದಾರೆ. ಇಲ್ಲಿರುವ ಯಾವುದೇ ಶಾಸಕರನ್ನು ನಿಮಗೆ ಹತ್ತಿಕ್ಕಲು ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ, 50 ಶಾಸಕರು ನಮ್ಮೊಂದಿಗಿದ್ದಾರೆ ಅಂತ ಉದ್ಧವ್ ಠಾಕ್ರೆ ಬಣಕ್ಕೆ ತಿರುಗೇಟು ನೀಡಿದ್ದಾರೆ.

ನಾವು ಯಾರನ್ನೂ ಬಲವಂತವಾಗಿ ಕರೆತಂದಿಲ್ಲ

ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಕೆಲ ದಿನಗಳ ಹಿಂದೆ ಏಕನಾಥ್ ಶಿಂಧೆ ವಿರುದ್ಧ ಆರೋಪ ಮಾಡಿದ್ದರು. 15 ರಿಂದ 20 ಶಾಸಕರನ್ನು ಹೆದರಿಸಿ ಅಪಹರಣ ಮಾಡಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ ಎಂದು ಏಕನಾಥ್ ಶಿಂಧೆ ವಿರುದ್ಧ ಆದಿತ್ಯ ಠಾಕ್ರೆ ಹರಿಹಾಯ್ದಿದ್ದರು. ಇದಕ್ಕೆ ತಿರುಗೇಟು ನೀಡಿರುವ ಶಿಂಧೆ, ನಾವು ಯಾರನ್ನೂ ಒತ್ತಾಯ ಪೂರ್ವಕವಾಗಿ ಕರೆತಂದಿಲ್ಲ. ಎಲ್ಲರೂ ತಮ್ಮ ಸ್ವಇಚ್ಛೆಯಿಂದಲೇ ನಮ್ಮ ಜೊತೆ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಆದಿತ್ಯ ಠಾಕ್ರೆಗೆ ಏಕನಾಥ್ ಶಿಂಧೆ ಸವಾಲು

ಎಲ್ಲ ಶಾಸಕರೂ ಇಲ್ಲಿ ಸಂತೋಷದಿಂದ ಇದ್ದಾರೆ. ಎಲ್ಲರೂ ನಮ್ಮ ಜೊತೆ ಇದ್ದಾರೆ. ಯಾರಿಗೂ ಬಲವಂತ ಮಾಡಿಲ್ಲ ಅಂತ ಏಕನಾಥ್ ಶಿಂಧೆ ಸ್ಪಷ್ಟಪಡಿಸಿದ್ದಾರೆ. ಆದಿತ್ಯ ಠಾಕ್ರೆ ಹೇಳಿದ ರೀತಿಯಲ್ಲಿ ಯಾರಾದರೂ ಶಾಸಕರು ಅವರ ಜೊತೆ ಸಂಪರ್ಕದಲ್ಲಿ ಇದ್ದಾರೆ ಅನ್ನೋದಾದ್ರೆ ಅವರ ಹೆಸರನ್ನು ಬಹಿರಂಗಪಡಿಸಲಿ ಎಂದು ಶಿಂಧೆ ಸವಾಲೆ ಹಾಕಿದ್ದಾರೆ.

ಇದನ್ನೂ ಓದಿ: Maharashtra Politics: 'ಮಹಾ' ರಾಜಕೀಯ ಬಿಕ್ಕಟ್ಟಿಗೆ ಕಾರಣಗಳೇನು? ಮುಂದೆ 'ಲಗಾಟಿ' ಹೊಡೆಯುತ್ತಾ ಅಘಾಡಿ ಸರ್ಕಾರ?

ಶೀಘ್ರವೇ ವಿಶ್ವಾಸಮತ ಯಾಚನೆ ಸಾಧ್ಯತೆ

ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿರುವ ಕಾರಣ, ಕೋರ್ಟ್‌ನ ಮುಂದಿನ ವಿಚಾರಣೆ ನಿಗದಿ ಆಗಿರುವ ಜುಲೈ 11ರೊಳಗೆ ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರು, ಉದ್ಧವ್‌ ಠಾಕ್ರೆ ಸರ್ಕಾರಕ್ಕೆ ಸೂಚಿಸಬಹುದು ಎಂದು ಮೂಲಗಳು ಹೇಳಿವೆ. ಹೀಗಾಗಿ ಶೀಘ್ರವೇ ವಿಶ್ವಾಸ ಮತ ಸಾಬೀತುಪಡಿಸಬೇಕಾದ ಅನಿವಾರ್ಯತೆ ಠಾಕ್ರೆ ಬಣಕ್ಕೆ ಎದುರಾಗುವ ಸಾಧ್ಯತೆಗಳಿವೆ.
Published by:Annappa Achari
First published: