ಈಕೆ ಪ್ರಪಂಚದ ಎಂಟನೇ ಅದ್ಭುತ: ಸರಳ ಪ್ರಶ್ನೆಗೆ ಉತ್ತರಿಸಲು 2 ಲೈಫ್​ಲೈನ್​ ಪಡೆದ ಟರ್ಕಿಯ ಬುದ್ಧಿವಂತೆ..!

news18
Updated:August 9, 2018, 6:09 PM IST
ಈಕೆ ಪ್ರಪಂಚದ ಎಂಟನೇ ಅದ್ಭುತ: ಸರಳ ಪ್ರಶ್ನೆಗೆ ಉತ್ತರಿಸಲು 2 ಲೈಫ್​ಲೈನ್​ ಪಡೆದ ಟರ್ಕಿಯ ಬುದ್ಧಿವಂತೆ..!
news18
Updated: August 9, 2018, 6:09 PM IST
-ನ್ಯೂಸ್​ 18 ಕನ್ನಡ

ಟರ್ಕಿ (ಆಗಸ್ಟ್​ 9): ಚೀನಾದ ಮಹಾಗೋಡೆ ಎಲ್ಲಿದೆ? ಎಂಬ ಪ್ರಶ್ನೆಯನ್ನು ಶಾಲೆಗೆ ಹೋಗುವ ಮಕ್ಕಳಿಗೆ ಕೇಳಿದರೆ ಚೀನಾದಲ್ಲಿದೆ ಎಂದು ಥಟ್​ ಅಂತ ಹೇಳಿಬಿಡುತ್ತಾರೆ. ಇದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು. ಅಲ್ಲದೇ ಪ್ರಶ್ನೆಯಲ್ಲೇ ಉತ್ತರವಿದೆ. ಹೀಗಾಗಿ ಯಾವುದೇ ಅನುಮಾನವಿಲ್ಲದೆ ಉತ್ತರಿಸಬಹುದು. ಆದರೆ ಇದೇ ಪ್ರಶ್ನೆಗೆ ಟರ್ಕಿಯ ಮಹಿಳೆಯೊಬ್ಬಳು ಉತ್ತರಿಸಲಾಗದೆ ನಗೆಪಾಟಲಿಗೀಡಾಗಿದ್ದಾರೆ. ಇಲ್ಲಿದೆ ಪ್ರಪಂಚದ ಎಂಟನೇ ಅದ್ಭುತ ಎಂದು ಕಾಲೆಳೆಸಿಕೊಳ್ಳುತ್ತಿರುವ ಮಹಿಳೆಯ ಕಥೆ.

ಟರ್ಕಿಯಲ್ಲಿ ನಡೆದ ಟರ್ಕಿಷ್​ ಆವೃತ್ತಿಯ 'ಕೋಟ್ಯಾಧಿಪತಿ ಯಾರಾಗ ಬಯಸುತ್ತೀರಿ?' ಎಂಬ ಗೇಮ್​ ಶೋನಲ್ಲಿ ಸ್ಪರ್ಧಿಸಿದ್ದ 26 ವರ್ಷದ ಸು ಅಯ್ಹಾನ್​ ಎಂಬಾಕೆ ಈ ಪ್ರಶ್ನೆಗೆ ಉತ್ತರಿಸಲು 2 ಸಹಾಯವಾಣಿ(ಲೈಫ್​ಲೈನ್​​) ಗಳನ್ನು ಬಳಸಿಕೊಂಡಿದ್ದಾರೆ.

ಭಾರತದಲ್ಲಿ ಹಿಂದಿ ಭಾಷೆಯಲ್ಲಿ ಪ್ರಸಾರವಾಗುವ 'ಕೌನ್ ಬನೇಗಾ ಕರೋಡ್​ಪತಿ' ಕಾರ್ಯಕ್ರಮದಂತೆ, ಟರ್ಕಿಯಲ್ಲಿ ಟರ್ಕಿಷ್​ ಭಾಷೆಯಲ್ಲಿ 'ಕೋಟ್ಯಾಧಿಪತಿ ಯಾರಾಗ ಬಯಸುತ್ತೀರಿ' ಎಂಬ ಗೇಮ್​ ಶೋ ಪ್ರಸಾರವಾಗುತ್ತದೆ.
Loading...

ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ಈಕೆಗೆ ಇಂತಹ ಸರಳ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದರೆ ಎಲ್ಲರೂ ಆಶ್ಚರ್ಯಚಕಿತಗೊಳ್ಳುತ್ತಾರೆ. ಹರಿಯಟ್​ ಡೇಲಿ ನ್ಯೂಸ್​​ ಪ್ರಕಾರ, ಈ ಗೇಮ್​ ಶೋನಲ್ಲಿ ಕೇಳಿದ ಚೀನಾದ ಮಹಾಗೋಡೆ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ಗೊತ್ತಾಗದೆ ಅಯ್ಹಾನ್​ ಲೈಫ್​ಲೈನ್ ಬಳಸಿಕೊಳ್ಳಲು ಮುಂದಾಗುತ್ತಾರೆ.

ಮೊದಲ ಲೈಫ್​ಲೈನ್​(ಆಡಿಯನ್ಸ್​​ ಪೋಲ್​) ಪ್ರೇಕ್ಷಕರ ಮೊರೆ ಹೋಗುತ್ತಾಳೆ. ಶೇ.51 ರಷ್ಟು ಪ್ರೇಕ್ಷಕರು ಚೀನಾ ಎಂಬ ಉತ್ತರವನ್ನು ಆಯ್ಕೆ ಮಾಡುತ್ತಾರೆ. ಆದರೆ ಅಯ್ಹಾನ್​ಗೆ ಗೊಂದಲವಾಗಿ ಸರಿಯಾದ ಉತ್ತರ ಪಡೆಯಲು ಎರಡನೇ ಲೈಫ್​ಲೈನ್​ ಆದ ಪೋನ್ ಅ​ ಫ್ರೆಂಡ್​ನ್ನು​ ಬಳಸಿಕೊಳ್ಳುತ್ತಾಳೆ. ಅಲ್ಲಿಂದ ಸರಿಯಾದ ಉತ್ತರ ಪಡೆದ ಆಕೆ ಮುಂದಿನ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟು ಆಟದಿಂದ ಹೊರಬರುತ್ತಾಳೆ. ಆದರೆ ಈ ಗೇಮ್​ ಶೋ ಪ್ರಸಾರವಾದಾಗ ಅಯ್ಹಾನ್​ ನಗೆಪಾಟಲಿಗೀಡಾಗಿದ್ದಾರೆ. ಇದೆಲ್ಲವನ್ನು ನೋಡಿದರೆ ಟರ್ಕಿಯಲ್ಲಿ ಯಾವ ರೀತಿಯ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿತ್ತು ಎಂಬ ಪ್ರಶ್ನೆಗಳು ಉದ್ಭವಿಸುವುದರಲ್ಲಿ ಅನುಮಾನವೇ ಇಲ್ಲ.

ಡೈಲಿ ನ್ಯೂಸ್​ನ ಅಂಕಣಕಾರ ಅಹ್ಮಟ್​ ಹಕನ್,  "ಶಾಂತಿಯ ಸಮುದ್ರ ಎಲ್ಲಿದೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ಚೀನಾದ ಮಹಾ ಗೋಡೆ ಎಲ್ಲಿದೆ ಎಂಬುದು ಎಷ್ಟೋ ಜನರಿಗೆ  ಗೊತ್ತೇ ಇಲ್ಲ. ಇದು ಅನೇಕ ಮಕ್ಕಳ ಪುಸ್ತಕಗಳಲ್ಲಿ, ಟಿವಿ ಕಾರ್ಯಕ್ರಮಗಳಲ್ಲಿ ಮತ್ತು ಶಾಲೆಗಳಲ್ಲಿ ಕಡ್ಡಾಯವಾಗಿ ಇರಬೇಕು . ಚೀನಾದ ಈ ಪ್ರಾಚೀನ ಮಹಾಗೋಡೆ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು". ಎಂದು ಹೇಳಿದ್ದಾರೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ