ಮಹಾರಾಷ್ಟ್ರದ ಪಲ್ಗಾರ್​ನಲ್ಲಿ ಕಾರ್ಖಾನೆ ಸ್ಪೋಟ; ಎಂಟು ಸಾವು, ಹಲವು ಮಂದಿಗೆ ಗಾಯ

news18-kannada
Updated:January 11, 2020, 9:01 PM IST
ಮಹಾರಾಷ್ಟ್ರದ ಪಲ್ಗಾರ್​ನಲ್ಲಿ ಕಾರ್ಖಾನೆ ಸ್ಪೋಟ; ಎಂಟು ಸಾವು, ಹಲವು ಮಂದಿಗೆ ಗಾಯ
ಸ್ಫೋಟ ಸಂಭವಿಸಿರುವ ಸ್ಥಳ.
  • Share this:
ಪಲ್ಗಾರ್ (ಮಹಾರಾಷ್ಟ್ರ): ರಾಸಾಯನಿಕ ಕಾರ್ಖಾನೆ ಸ್ಪೋಟಗೊಂಡ ಪರಿಣಾಮ  ಎಂಟು ಮಂದಿ ಪ್ರಾಣ ಕಳೆದುಕೊಂಡು, ಹಲವು ಮಂದಿ ಗಾಯಗೊಂಡ ಘಟನೆ ಮುಂಬೈನಿಂದ 100 ಕಿ.ಮೀ. ದೂರದಲ್ಲಿರುವ ಪಲ್ಗಾರ್ ಜಿಲ್ಲೆಯ ಬೋಯ್ಸಾರ್​ನಲ್ಲಿ ಶನಿವಾರ ಸಂಜೆ ನಡೆದಿದೆ. 

ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕೊಲ್ವಾಡೆ ಗ್ರಾಮದಲ್ಲಿರುವ ರಾಸಾಯನಿಕ ಕಾರ್ಖಾನೆ ಸಂಜೆ 7.20ರ ಸಮಯದಲ್ಲಿ ಸ್ಫೋಟಗೊಂಡಿದೆ. ಸ್ಫೋಟದ ಶಬ್ಧ ಸುಮಾರು 15 ಕಿ.ಮೀ. ದೂರದವರೆಗೂ ಕೇಳಿಸಿದೆ ಎಂದು ಪೊಲೀಸ್ ವಕ್ತಾರ ಹೇಮಂತ್ ಕಟ್ಕರ್ ತಿಳಿಸಿದ್ದಾರೆ.

ಇದನ್ನು ಓದಿ: ಗುಜರಾತ್​ನ ಗ್ಯಾಸ್ ಕಂಪನಿಯಲ್ಲಿ ಸ್ಪೋಟ; ಐವರ ಸಾವು
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ