Corona Virus: RT-PCR ವರದಿಯ ಸಮಯ ಮೀರಿದ್ದಕ್ಕೆ ಬೆಂಗಳೂರಿನಿಂದ 8 ಮಂದಿಯ ದುಬೈ ಪ್ರಯಾಣ ರದ್ದು!

Corona Virus: 72 ಗಂಟೆಗಳ ವರದಿಯು ಅಮಾನ್ಯ ಎಂಬುದಾಗಿ ಪರಿಗಣಿಸಿ ಅವರನ್ನು ನಿಲ್ದಾಣದಿಂದ ಹಿಂತಿರುಗಲು ಹೇಳಿರುವ ಘಟನೆ ಇದೀಗ ವರದಿಯಾಗಿದ್ದು, ಕೃಷ್ಣ ಸಿಬ್ಬಂದಿ ವರ್ತನೆಗೆ ಕೋಪಗೊಂಡಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಬೆಂಗಳೂರಿ(Bengaluru)ನ ಎಚ್‌ಎಸ್‌ಆರ್ ಲೇಔಟ್(HSR Layout) ನಿವಾಸಿಯಾಗಿರುವ ಕೃಷ್ಣ(Krishna) ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್(Mechanical Engineer) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಫ್ಲೈ ದುಬೈ(Fly Dubai) ವಿಮಾನ(Flight)ದಲ್ಲಿ ಭಾನುವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport)ದಿಂದ ದುಬೈಗೆ ತೆರಳಲು ಕೃಷ್ಣ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ, ವಿಮಾನಯಾನ ಸಿಬ್ಬಂದಿ ಅವರನ್ನು ವಿಮಾನ ಪ್ರಯಾಣ ಮಾಡದಂತೆ ತಡೆದಿದ್ದು ನಿರ್ಗಮನಕ್ಕೂ ಮುಂಚೆ 48 ಗಂಟೆಗಳೊಳಗೆ ನಡೆಸಿದ RTPCR ಪರೀಕ್ಷಾ ವರದಿ(Report) ಸಲ್ಲಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಕೃಷ್ಣ 72 ಗಂಟೆಗಳೊಳಗಿನ ರ‍್ಯಾಪಿಡ್(Rapid) PCR ಪರೀಕ್ಷೆಯನ್ನು 3,000 ರೂ.ಗಳನ್ನು ನೀಡಿ ಮಾಡಿಸಿಕೊಂಡಿದ್ದು ನೆಗೆಟಿವ್​(Negative) ವರದಿಯನ್ನು ತನ್ನೊಂದಿಗೆ ಕೊಂಡೊಯ್ದಿದ್ದಾರೆ. 72 ಗಂಟೆಗಳ ವರದಿಯು ಅಮಾನ್ಯ ಎಂಬುದಾಗಿ ಪರಿಗಣಿಸಿ ಅವರನ್ನು ನಿಲ್ದಾಣದಿಂದ ಹಿಂತಿರುಗಲು ಹೇಳಿರುವ ಘಟನೆ ಇದೀಗ ವರದಿಯಾಗಿದ್ದು, ಕೃಷ್ಣ ಸಿಬ್ಬಂದಿ ವರ್ತನೆಗೆ ಕೋಪಗೊಂಡಿದ್ದಾರೆ. 


ಪರೀಕ್ಷಾ ವಿಧಾನಗಳಲ್ಲಿ ಬದಲಾವಣೆ


ಪರೀಕ್ಷಾ ವಿಧಾನಗಳಲ್ಲಿ ಬದಲಾವಣೆಯಾಗಿರುವುದರ ಕುರಿತು ವಿಮಾನಯಾನ ಸಂಸ್ಥೆಯಾಗಲೀ ಸಂಬಂಧಿತ ಅಧಿಕಾರಿಗಳಾಗಲಿ ಯಾವುದೇ ಪೂರ್ವ ಸೂಚಿತ ಎಸ್‌ಎಂಎಸ್ ಅಥವಾ ಸೂಚನೆಗಳನ್ನು ನೀಡಿಲ್ಲ ಎಂಬುದಾಗಿ 52ರ ಹರೆಯದ ಕೃಷ್ಣ ಆರೋಪಿಸಿದ್ದಾರೆ. ಇನ್ನು ಫ್ಲೈಟ್ ಸಂಖ್ಯೆ FZ 406ನಲ್ಲಿ ವಿಮಾನ ಪ್ರಯಾಣ ಮಾಡಬೇಕಿದ್ದ, ಇತರ 7 ಜನರೂ ಇದೇ ರೀತಿಯ ಸಮಸ್ಯೆ ಅನುಭವಿಸಿದ್ದು ಮೂಲಗಳಿಂದ ತಿಳಿದು ಬಂದಿದೆ.


ಟಿಕೆಟ್​  ಕ್ಯಾನ್ಸಲ್​ ಮಾಡುವಂತೆ ಒತ್ತಡ

30,000 ರೂ. ಗಳ ಬೆಂಗಳೂರು-ದುಬೈ ಟಿಕೆಟ್‌ಗಳನ್ನು ರದ್ದುಗೊಳಿಸುವಂತೆ ಅವರೆಲ್ಲರ ಮೇಲೆ ಒತ್ತಡ ಹೇರಲಾಯಿತು ಎಂಬುದಾಗಿ ತಿಳಿದುಬಂದಿದೆ. ವಿಮಾನ ಪ್ರಯಾಣಿಕರಿಗೆ RT-PCR ಟೆಸ್ಟ್ ಮಾನ್ಯತೆಯನ್ನು 48 ಗಂಟೆಗಳಿಗೆ ಕಡಿಮೆ ಮಾಡಲಾಗಿರುವುದರ ಕುರಿತು ಯಾವುದೇ ಎಸ್‌ಎಂಎಸ್ ಸೂಚನೆ ಪಡೆದುಕೊಂಡಿಲ್ಲ. ‘ನಾನು ದುಬೈನಿಂದ ಬೆಂಗಳೂರಿಗೆ ಬರುವಾಗ ಪ್ರಯಾಣದ ಮೊದಲು 72 ಗಂಟೆಗಳೊಳಗಿನ ಪರೀಕ್ಷಾ ವರದಿ ತೆಗೆದುಕೊಂಡೇ ಬಂದಿದ್ದೆ. ಆದರೆ ಭಾನುವಾರ ಬೆಳಗ್ಗೆ ಫ್ಲೈದುಬೈ ಗ್ರೌಂಡ್ ಸಿಬ್ಬಂದಿ ನನ್ನ 72 ಗಂಟೆಗಳ ಕೋವಿಡ್ ನೆಗೆಟಿವ್ ವರದಿ ತಿರಸ್ಕರಿಸಿದ್ದು ನೋಡಿ ಶಾಕ್‌ಗೆ ಒಳಗಾದೆ’ ಎಂಬುದಾಗಿ ಕೃಷ್ಣ ತಿಳಿಸಿದ್ದು, ತಮ್ಮ ಕೆಲಸದ ನಿಮಿತ್ತ ದುಬೈಗೆ ಮರಳಿ ಪ್ರಯಾಣಿಸುವ ಟಿಕೆಟ್ ಅನ್ನು ನಿಗದಿಪಡಿಸಿದ್ದರು ಸಂಸ್ಥೆಯ ಹೊಸ ನಿಯಮದಿಂದಾಗಿ ಒನ್-ವೇ ಟಿಕೆಟ್ ರದ್ದುಗೊಳಿಸಿ ತಮ್ಮ ಪ್ರಯಾಣವನ್ನು ಮರುನಿಗದಿಗೊಳಿಸಿದ್ದಾರೆ.


ಇದನ್ನು ಓದಿ : 99 ದೇಶಗಳ ಪ್ರಯಾಣಿಕರಿಗೆ ಕ್ವಾರಂಟೈನ್‌ನಿಂದ ವಿನಾಯಿತಿ: 2 ಡೋಸ್​ ವ್ಯಾಕ್ಸಿನ್ ಕಡ್ಡಾಯ!

ಫ್ಲೈದುಬೈ ಹೇಳಿಕೆ ಏನು?


ದುಬೈ ಮೂಲದ ವಿಮಾನಯಾನ ಸಂಸ್ಥೆ ಹೇಳುವಂತೆ ನಿರ್ಗಮನದ 48 ಗಂಟೆಗಳೊಳಗೆ ನಡೆಸಿದ ಕೋವಿಡ್ ಟೆಸ್ಟ್ ನೆಗೆಟಿವ್ ವರದಿಗಳನ್ನು ಪ್ರಯಾಣಿಕರು ಹಾಜರುಪಡಿಸಬೇಕು ಎಂಬುದಾಗಿ ತನ್ನ ಅಧಿಕೃತ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಿರುವುದಾಗಿ ತಿಳಿಸಿದೆ. ಈ ಮೊದಲು ಫ್ಲೈದುಬೈ ಪೋರ್ಟಲ್ 72 ಗಂಟೆಗಳೊಳಗೆ ನಡೆಸಿದ ಪರೀಕ್ಷಾ ವರದಿಗಳನ್ನು ಹಾಜರುಪಡಿಸಲು ತಿಳಿಸಿತ್ತು. ಆದರೆ ನವೆಂಬರ್ 11, 2021ರಂದು ಇದನ್ನು 48 ಗಂಟೆಗಳಿಗೆ ಬದಲಾಯಿಸಲಾಗಿದೆ ಹಾಗೂ ಪ್ರಯಾಣಿಕರಿಗೆ ಸೂಚನೆ ನೀಡಿಲ್ಲ. ಫೋನ್ ಕರೆಗಳು ಹಾಗೂ ಎಸ್‌ಎಂಎಸ್ ಮೂಲಕ ಮಾಹಿತಿ ರವಾನಿಸಿಲ್ಲ ಎಂದು ಫ್ಲೈದುಬೈನ ಇನ್ನೊಬ್ಬ ಪ್ರಯಾಣಿಕ ಹೇಳಿದ್ದಾರೆ. ಇದು ಒಂದು ರೀತಿಯ ಕಿರುಕುಳ ಎಂಬುದಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನು ಓದಿ : ಕೋವಿಡ್ ಲಸಿಕೆ ಹಾಕುತ್ತಾರೆಂದು ಜಮೀನಿಂದ ಓಡಿ ಹೋದ ರೈತ ಕಾರ್ಮಿಕ ಮಹಿಳೆ, ಮತ್ತೋರ್ವ ಮಹಿಳೆಯಿಂದ ಹಲ್ಲೆಗೆ ಯತ್ನ!

ಫ್ಲೈದುಬೈ ಮೂಲಗಳು ಹೇಳುವಂತೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆಯಾ ದೇಶಗಳಿಗೆ ಕೋವಿಡ್ ಪರೀಕ್ಷೆ ಫಲಿತಾಂಶ ಅಗತ್ಯತೆಗಳ ಕುರಿತು ಮಾಹಿತಿ ನೀಡಲಾಗಿದೆ. ಯುಎಇನಲ್ಲಿ ಮಾಡಿರುವ ಬದಲಾವಣೆಗಳ ಕುರಿತು ಪ್ರಯಾಣಿಕರಿಗೆ ಸೂಚನೆ ಕೂಡ ನೀಡಲಾಗಿದೆ. ಅದರೆ ಕೆಲವೊಬ್ಬರು ಪ್ರಯಾಣಿಕರು ಈ ಸೂಚನೆ ಗಮನಿಸಲಿಲ್ಲ ಎಂದು ತಿಳಿಸಿದೆ. ರ‍್ಯಾಪಿಡ್ ಕೋವಿಡ್ ಟೆಸ್ಟ್ ಪ್ರಮಾಣಿತ ಕೋವಿಡ್ ಮಾರ್ಗಸೂಚಿಗಳ ಭಾಗವಾಗಿದೆ ಎಂದು ಸಂಸ್ಥೆ ತಿಳಿಸಿದೆ.


Published by:Vasudeva M
First published: