Yogi Adityanath: ಈದ್, ಅಕ್ಷಯ ತೃತೀಯ ಒಂದೇ ದಿನ ಸಾಧ್ಯತೆ: ಖಡಕ್ ಆದೇಶ ಹೊರಡಿಸಿದ ಸಿಎಂ ಯೋಗಿ

ಮುಂದಿನ ದಿನಗಳಲ್ಲಿ ಹಲವು ಪ್ರಮುಖ ಧಾರ್ಮಿಕ ಹಬ್ಬಗಳು ನಡೆಯಲಿವೆ. ರಂಜಾನ್ ಮಾಸ ನಡೆಯುತ್ತಿದೆ. ಈದ್ ಹಬ್ಬ ಮತ್ತು ಅಕ್ಷಯ ತೃತೀಯ ಒಂದೇ ದಿನ ನಡೆಯುವ ಸಾಧ್ಯತೆ ಇದೆ.ಇಂತಹ ಪರಿಸ್ಥಿತಿಯಲ್ಲಿ ಸದ್ಯದ ವಾತಾವರಣವನ್ನು ಪರಿಗಣಿಸಿ ಪೊಲೀಸರು ಹೆಚ್ಚುವರಿ ಪರಿಶೀಲನೆ ನಡೆಸಬೇಕು ಎಂದರು.

ಸಿಎಂ ಯೋಗಿ ಆದಿತ್ಯನಾಥ್

ಸಿಎಂ ಯೋಗಿ ಆದಿತ್ಯನಾಥ್

  • Share this:
ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh Chief Minister Yogi Adityanath) ಅವರು ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲನಾ ಸಭೆ ನಡೆಸಿದರು. ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಇತ್ತೀಚಿನ (Clashes in Delhi's Jahangirpuri area) ಘರ್ಷಣೆಗಳನ್ನು ಪರಿಗಣಿಸಿ ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ. ಈದ್ ಮತ್ತು ಅಕ್ಷಯ ತೃತೀಯ (Eid and Akshay Tritiy) ಹಬ್ಬಗಳು ಮುಂದಿನ ತಿಂಗಳ ಆರಂಭದಲ್ಲಿ ಒಂದೇ ದಿನಾಂಕದಂದು ಬೀಳುವ ಸಾಧ್ಯತೆಯಿರುವುದರಿಂದ ಈ ನಿರ್ದೇಶನಗಳನ್ನು ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.  ಸರಿಯಾದ ಅನುಮತಿಯಿಲ್ಲದೆ ಯಾವುದೇ ಧಾರ್ಮಿಕ ಮೆರವಣಿಗೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಅನುಮತಿ ನೀಡುವ ಮೊದಲು ಎಲ್ಲಾ ಸಂಘಟಕರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಭರವಸೆ ನೀಡುವ ಅಫಿಡವಿಟ್ ಅನ್ನು ಸಲ್ಲಿಸಬೇಕಾಗುತ್ತದೆ. ಧಾರ್ಮಿಕ ಸಾಂಪ್ರದಾಯಿಕ ಹಬ್ಬಗಳಿಗೆ ಮಾತ್ರ ಅನುಮತಿ ನೀಡಲಾಗುವುದು ಮತ್ತು ಹೊಸ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಅವರ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.

ಹೊಸ ಸ್ಥಳಗಳಲ್ಲಿ ಮೈಕ್​​​​ಗಳಿಗೆ ಅನುಮತಿ ಇಲ್ಲ

ಯಾವುದೇ ಹೊಸ ಸ್ಥಳಗಳಲ್ಲಿ ಮೈಕ್​​​​ಗಳಿಗೆ ಅನುಮತಿ ನೀಡಲಾಗುವುದಿಲ್ಲ, ಈಗಾಗಲೇ ಧ್ವನಿವರ್ಧಕಗಳನ್ನು ಬಳಸುತ್ತಿರುವವರು ಶಬ್ಧ ಯಾರಿಗೂ ತೊಂದರೆಯಾಗದಂತೆ ಖಚಿತಪಡಿಸಿಕೊಂಡ ನಂತರವೇ ಅದನ್ನು ಬಳಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ಗೊತ್ತುಪಡಿಸಿದ ಸ್ಥಳಗಳು ಮತ್ತು ರಸ್ತೆ ಮಾರ್ಗಗಳಲ್ಲಿ ಮಾತ್ರ ನಡೆಯಬಹುದು. ಇದಕ್ಕಾಗಿ ಸಂಚಾರವನ್ನು ನಿರ್ಬಂಧಿಸಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Narendra Modi: ಕೆಂಪುಕೋಟೆಯಿಂದ ಮೋದಿ ಭಾಷಣ, ಡೀಟೆಲ್ಸ್ ಇಲ್ಲಿದೆ

ಪೊಲೀಸರಿಗೆ ರಜೆಗಳು ರದ್ದು

ರಾಜ್ಯ ಸರ್ಕಾರವು ಸೋಮವಾರ ರಾಜ್ಯದ ಎಲ್ಲಾ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳ ರಜೆಯನ್ನು ಮೇ 4 ರವರೆಗೆ ರದ್ದುಗೊಳಿಸಿದೆ. ರಜೆಯಲ್ಲಿರುವ ಎಲ್ಲರಿಗೂ 24 ಗಂಟೆಗಳ ಒಳಗೆ ವರದಿ ಮಾಡಲು ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮುಂಬರುವ ಹಬ್ಬಗಳಲ್ಲಿ ಶಾಂತಿ ಕಾಪಾಡಲು ಮುಂದಿನ 24 ಗಂಟೆಗಳಲ್ಲಿ ಧಾರ್ಮಿಕ ಮುಖಂಡರು ಮತ್ತು ಗಣ್ಯ ವ್ಯಕ್ತಿಗಳೊಂದಿಗೆ ಸಂವಾದ ನಡೆಸುವಂತೆ ಪೊಲೀಸ್ ಠಾಣೆಯಿಂದ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಮಟ್ಟದ ಅಧಿಕಾರಿಗಳಿಗೆ ಯೋಗಿ ಆದಿತ್ಯನಾಥ್ ಸೂಚಿಸಿದರು. ಧಾರ್ಮಿಕ ಸ್ಥಳಗಳಲ್ಲಿ ಮೈಕ್‌ಗಳನ್ನು ಬಳಸಬಹುದು ಆದರೆ ಹೊಸ ಅನುಮತಿ ನೀಡಬೇಡಿ ಎಂದಿದ್ದಾರೆ.

24 ಗಂಟೆಗಳಲ್ಲಿ ಪೋಸ್ಟಿಂಗ್

ಎಸ್‌ಎಚ್‌ಒ, ಸಿಒ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಂದ ಜಿಲ್ಲಾ ಮ್ಯಾಜಿಸ್ಟ್ರೇಟ್, ವಿಭಾಗೀಯ ಆಯುಕ್ತರವರೆಗಿನ ಎಲ್ಲಾ ಆಡಳಿತ/ಪೊಲೀಸ್ ಅಧಿಕಾರಿಗಳ ರಜೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಮೇ 4 ರವರೆಗೆ ರದ್ದುಗೊಳಿಸಲಾಗಿದೆ. ಪ್ರಸ್ತುತ ರಜೆಯಲ್ಲಿರುವವರು ಮುಂದಿನ 24 ಗಂಟೆಗಳಲ್ಲಿ ಪೋಸ್ಟಿಂಗ್ ಸ್ಥಳಕ್ಕೆ ಹಿಂತಿರುಗಬೇಕು.ಈ ವ್ಯವಸ್ಥೆಯನ್ನು ಮುಖ್ಯಮಂತ್ರಿ ಕಚೇರಿ ಖಚಿತಪಡಿಸಿಕೊಳ್ಳಬೇಕು ಎಂದು ಯೋಗಿ ಆದಿತ್ಯನಾಥ್ ಹೇಳಿದರು.

  • ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಬೇಕು.

  • ಪರಿಸ್ಥಿತಿಯ ಮೇಲೆ ನಿಗಾ ಇಡಲು ಡ್ರೋನ್‌ಗಳನ್ನು ಬಳಸಬೇಕು.

  • ಪ್ರತಿದಿನ ಸಂಜೆ, ಪೊಲೀಸ್ ಪಡೆಗಳು ಫುಟ್ ಪೆಟ್ರೋಲಿಂಗ್ ಮಾಡಬೇಕು

  • ಪೊಲೀಸ್ ಪ್ರತಿಕ್ರಿಯೆ ವಾಹನಗಳು (ಪಿಆರ್‌ವಿಗಳು) ಸಕ್ರಿಯವಾಗಿರಬೇಕು


ಮೇಲಿನ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸಿಎಂ ಪರಿಶೀಲನಾ ಸಭೆಯಲ್ಲಿ ಆದೇಶಿಸಿದರು.  ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ಸಿದ್ಧಾಂತದ ಪ್ರಕಾರ ಪೂಜೆ ಮಾಡುವ ಸ್ವಾತಂತ್ರ್ಯವಿದೆ ಎಂದ ಮುಖ್ಯಮಂತ್ರಿ, ಮೈಕ್‌ಗಳನ್ನು ಬಳಸಬಹುದಾದರೂ ಆವರಣದಿಂದ ಶಬ್ದ ಬರದಂತೆ ನೋಡಿಕೊಳ್ಳಿ, ಇತರರಿಗೆ ಯಾವುದೇ ತೊಂದರೆಯಾಗಬಾರದು. ಹೊಸ ಸ್ಥಳಗಳಲ್ಲಿ ಮೈಕ್‌ಗಳನ್ನು ಅಳವಡಿಸಲು ಯಾವುದೇ ಅನುಮತಿ ನೀಡಬಾರದು. ಮುಂದಿನ ದಿನಗಳಲ್ಲಿ ಹಲವು ಪ್ರಮುಖ ಧಾರ್ಮಿಕ ಹಬ್ಬಗಳು ನಡೆಯಲಿವೆ. ರಂಜಾನ್ ಮಾಸ ನಡೆಯುತ್ತಿದೆ.ಈದ್ ಹಬ್ಬ ಮತ್ತು ಅಕ್ಷಯ ತೃತೀಯ ಒಂದೇ ದಿನ ನಡೆಯುವ ಸಾಧ್ಯತೆ ಇದೆ.ಇಂತಹ ಪರಿಸ್ಥಿತಿಯಲ್ಲಿ ಸದ್ಯದ ವಾತಾವರಣವನ್ನು ಪರಿಗಣಿಸಿ ಪೊಲೀಸರು ಹೆಚ್ಚುವರಿ ಪರಿಶೀಲನೆ ನಡೆಸಬೇಕು ಎಂದರು.
Published by:Kavya V
First published: