Egypt History: ಪ್ರಾಚೀನ ರೊಸೆಟ್ಟಾ ಸ್ಟೋನ್ ಹಿಂದಿರುಗಿಸಬೇಕು: ಈಜಿಪ್ಟ್ ಇತಿಹಾಸಕಾರನ ಬೇಡಿಕೆ

ರೊಸೆಟ್ಟಾ ಸ್ಟೋನ್

ರೊಸೆಟ್ಟಾ ಸ್ಟೋನ್

Egypt History: ಬ್ರಿಟಿಷ್ ಮ್ಯೂಸಿಯಂನಲ್ಲಿ ಅತಿ ಹೆಚ್ಚು ಭೇಟಿಯನ್ನು ಪಡೆಯುತ್ತಿರುವ ಈ ಪ್ರಾಚೀನ ಕಲ್ಲನ್ನು ನಮಗೆ ಹಿಂದಿರುಗಿಸಿ ಎಂಬುದು ಈಜಿಪ್ಟ್‌ ಇತಿಹಾಸಕಾರರ ಬೇಡಿಕೆ ಆಗಿದೆ.

  • Trending Desk
  • 5-MIN READ
  • Last Updated :
  • Share this:

ಈಜಿಪ್ಟ್‌ನ ಇತಿಹಾಸಕಾರರು 2,000 ವರ್ಷಗಳಷ್ಟು ಹಳೆಯದಾದ ರೊಸೆಟ್ಟಾ ಸ್ಟೋನ್ ಅನ್ನು ಯುನೈಟೈಡ್‌ ಕಿಂಗ್‌ಡಮ್‌ (United Kingdom) ದೇಶವು ನಮ್ಮ ದೇಶಕ್ಕೆ ಆ ಪ್ರಾಚೀನ ಕಲ್ಲನ್ನು ಹಿಂದಿರುಗಿಸಬೇಕೆಂದು ಆಗಾಗ ಹೇಳುತ್ತಲೇ ಇರುತ್ತಾರೆ. ಏಕೆಂದರೆ ಬ್ರಿಟಿಷ್ ಮ್ಯೂಸಿಯಂನಲ್ಲಿರುವ (Museum) ರೊಸೆಟ್ಟಾ ಸ್ಟೋನ್ ಅನ್ನು ಅತಿ ಹೆಚ್ಚು ಪ್ರವಾಸಿಗರು (Tourist) ಭೇಟಿ ನೀಡುವ ಪ್ರಾಚೀನ ವಸ್ತು ಎಂದರೂ ಅತಿಶೋಕ್ತಿಯಲ್ಲ. ಈ ರೊಸೆಟ್ಟಾ ಸ್ಟೋನ್‌ ಪ್ರಾಚೀನ ಈಜಿಪ್ಟ್‌ ನಾಗರೀಕತೆಯ ಒಂದು ವಿಶೇಷ ವಸ್ತು (Special Thing) ಆಗಿದೆ. ಇದು ಆಧುನಿಕ ಜ್ಞಾನವನ್ನು ವಿಶ್ಲೇಷಿಸುವ ಅಗತ್ಯವಿದೆ ಎಂದು ಹೇಳುತ್ತಿದೆ ಎಂದು ನೋಡುಗರಿಗೆ ಭಾಸವಾಗುತ್ತದೆ. ಅದು ಏಕೆ ಎಂಬುದಕ್ಕೆ ಇಲ್ಲಿದೆ ಉತ್ತರ.


ಇತಿಹಾಸದ ಹೊಸ ರೂಪವನ್ನು ರಚಿಸಲು ಸಹಾಯ ಮಾಡಿದ ಈ ವಸ್ತುವನ್ನು ಆಪಲ್ ತನ್ನ ಟ್ರಾನ್ಸಲೇಟ್‌ ಸಾಫ್ಟ್‌ವೇರ್ ಹೆಸರಿನಲ್ಲಿ ಉಲ್ಲೇಖಿಸಿರುವುದು ಮತ್ತಷ್ಟು ವಿಶೇಷತೆ ಎನಿಸುತ್ತದೆ.


ಈಜಿಪ್ಟ್‌ ಇತಿಹಾಸಕಾರರ ಬೇಡಿಕೆ ಏನು?


ಬ್ರಿಟಿಷ್ ಮ್ಯೂಸಿಯಂನಲ್ಲಿ ಅತಿ ಹೆಚ್ಚು ಭೇಟಿಯನ್ನು ಪಡೆಯುತ್ತಿರುವ ಈ ಪ್ರಾಚೀನ ಕಲ್ಲನ್ನು ನಮಗೆ ಹಿಂದಿರುಗಿಸಿ ಎಂಬುದು ಈಜಿಪ್ಟ್‌ ಇತಿಹಾಸಕಾರರ ಬೇಡಿಕೆ ಆಗಿದೆ.


ರಾಯಿಟರ್ಸ್ ಸುದ್ದಿ ಮಾಧ್ಯಮದ ವರದಿಯ ಪ್ರಕಾರ, “ ಈಜಿಪ್ಟ್‌ ದೇಶವು ರೊಸೆಟ್ಟಾ ಸ್ಟೋನ್ ಅನ್ನು ಹಿಂದಿರುಗಿಸಬೇಕೆಂದು ಬ್ರಿಟಿಷ್‌ ಸರ್ಕಾರವನ್ನು ಕೇಳುತ್ತಿದೆ. ಈ ರೊಸೆಟ್ಟಾ ಸ್ಟೋನ್‌ ಸುಮಾರು ಎರಡು ಶತಮಾನಗಳ ಹಿಂದೆ ಆವಿಷ್ಕಾರವಾಗಿದೆ. ಆಗಿನಿಂದಲೂ ಈ ಪ್ರಾಚೀನ ಕಲ್ಲು ಜಗತ್ತನ್ನು ಆಕರ್ಷಿಸಿದ ದೊಡ್ಡ ಚಪ್ಪಟೆ ಕಲ್ಲಾಗಿದೆ” ಎಂದು ಹೇಳಿದೆ.


ಈಜಿಪ್ಟ್ ನಗರವಾದ ಅಸ್ವಾನ್‌ನಲ್ಲಿರುವ ಕಾಲೇಜ್ ಆಫ್ ಆರ್ಕಿಯಾಲಜಿಯ ಆಕ್ಟಿಂಗ್ ಡೀನ್ ಆದ ಮೋನಿಕಾ ಹನ್ನಾ ಅವರು ಸುದ್ದಿ ಮಾಧ್ಯಮ ರಾಯಿಟರ್ಸ್‌ಗೆ "ಈ ಎಲ್ಲಾ ವಸ್ತುಗಳನ್ನು ಯುಕೆ ದೇಶವು ಹಿಂದಿರುಗಿಸಿದ ಮೇಲೆ ಕೊನೆಗೆ ಅವುಗಳನ್ನು ಮರುಸ್ಥಾಪಿಸಲಾಗುವುದು ಏಕೆಂದರೆ ವಸ್ತುಸಂಗ್ರಹಾಲಯಗಳ ನೈತಿಕ ಸಂಹಿತೆ ದೇಶದಿಂದ ದೇಶಕ್ಕೆ ಬದಲಾಗುತ್ತಿರುತ್ತವೆ. ಈ ಕಲ್ಲು ಸಾಂಸ್ಕೃತಿಕ ಹಿಂಸೆಯ ಸಂಕೇತ ಮತ್ತು ಸಾಮ್ರಾಜ್ಯಶಾಹಿಯ ಸಂಕೇತವಾಗಿದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.


ರೊಸೆಟ್ಟಾ ಕಲ್ಲಿನ ಮಹತ್ವವೇನು?


ರೊಸೆಟ್ಟಾ ಕಲ್ಲು ಒಂದು ದೊಡ್ಡ ಕಲ್ಲಿನ ಚಪ್ಪಡಿಯಾಗಿದ್ದು ಅದರ ಮೇಲೆಲ್ಲ ಕೆತ್ತಿದ ಶಾಸನಗಳಿವೆ ಮತ್ತು ಇದು ದೊಡ್ಡ ಬಂಡೆಯ ಒಂದು ತುಂಡು ಎಂದು ನಂಬಲಾಗಿದೆ.


ಈ ಶಾಸನಗಳಲ್ಲಿ ಮೂರು ಲಿಪಿಗಳಲ್ಲಿ ಬರೆಯಲಾಗಿದೆ. ಆ ಲಿಪಿಯಲ್ಲಿ ಒಬ್ಬ ರಾಜನು ನಾಗರೀಕರಿಗೆ ನೀಡಿದ ತೀರ್ಪು ಅಥವಾ ಸಾರ್ವಜನಿಕ ಸಂದೇಶವನ್ನು ತಿಳಿಸುತ್ತದೆ ಎಂಬುದನ್ನು ಲಿಪಿಕಾರರು ಬಹಿರಂಗಪಡಿಸಿದ್ದಾರೆ.


ಇದನ್ನೂ ಓದಿ: 24 ತಾಸಿನಲ್ಲಿ ರಷ್ಯಾದ 75 ಕ್ಷಿಪಣಿ ದಾಳಿಗೆ ನಲುಗಿದ ಕೀವ್: 8 ಸಾವು, 24 ಮಂದಿಗೆ ಗಾಯ!


ಪ್ರಾಚೀನ ಭಾರತದಲ್ಲಿ, ರಾಜ ಅಶೋಕನು ಬುದ್ಧನ ಬೋಧನೆಗಳ ಸಂದೇಶಗಳನ್ನು ಮತ್ತು ಯುದ್ಧದಲ್ಲಿ ಗೆದ್ದ ವಿಜಯಗಳ ಬಗ್ಗೆ ಶಾಸನಗಳಲ್ಲಿ ಆ ಸುದ್ದಿಗಳನ್ನು ಕೆತ್ತಿಸಿರುವ ಸ್ತಂಭಗಳು ಅಥವಾ ಶಾಸನಗಳನ್ನೆ ಈ ರೊಸೆಟ್ಟಾ ಸ್ಟೋನ್‌ ಕೂಡ ಹೋಲುತ್ತದೆ. ಅದರ ತರುವಾಯ ಇವುಗಳನ್ನು ಸಾರ್ವಜನಿಕರ ವೀಕ್ಷಣೆಗಾಗಿ ಸಾರ್ವಜನಿಕ ವಸ್ತುಸಂಗ್ರಹಾಲಯದಲ್ಲಿ ಅವುಗಳನ್ನು ಇರಿಸಲಾಯಿತು.


ಈಜಿಪ್ಟ್‌ ದೇಶವು ಬ್ರಿಟೀಷ್ ವಸ್ತುಸಂಗ್ರಹಾಲಯದ ಪ್ರತಿನಿಧಿಗಳನ್ನು ಪ್ರಾಚೀನ ಕಲ್ಲನ್ನು ಹಿಂದಿರುಗಿಸುವ ಬಗ್ಗೆ ಕೇಳಿದಾಗ, ಅದು ಹೀಗೆ ಉತ್ತರ ನೀಡಿತು. ಅದೇನೆಂದರೆ ಒಟ್ಟಾರೆ 28 ಶಿಲಾಶಾಸನಗಳು ಮತ್ತು ನಂತರ ಪತ್ತೆಯಾದ ಶಾಸನಗಳೊಂದಿಗೆ ಇನ್ನು 21 ಶಿಲಾಶಾಸನಗಳು ಈಜಿಪ್ಟ್‌ನಲ್ಲಿ ಉಳಿದಿವೆ ಎಂದು ಪ್ರತಿನಿಧಿಗಳು ಉತ್ತರಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಉಲ್ಲೇಖಿಸಿದೆ.


"ಬ್ರಿಟಿಷ್ ಮ್ಯೂಸಿಯಂ ಈಜಿಪ್ಟ್‌ನ ಸಹೋದ್ಯೋಗಿಗಳೊಂದಿಗೆ ಸಕಾರಾತ್ಮಕ ಸಹಯೋಗವನ್ನು ಹೆಚ್ಚು ಗೌರವಿಸುತ್ತದೆ" ಎಂದು ವಕ್ತಾರರ ಹೇಳಿಕೆ ತಿಳಿಸಿದೆ.


ಆದರೆ ಮ್ಯೂಸಿಯಂನ ವೆಬ್‌ಸೈಟ್ ಹೇಳುವ ಪ್ರಕಾರ “ಶಾಸನಗಳು ಮುಖ್ಯವಲ್ಲ. ರೊಸೆಟ್ಟಾ ಸ್ಟೋನ್ ಈ ಶಾಸನಗಳಲ್ಲಿ ಒಂದು ಎಂದು ಹೇಳಿದೆ. ಆದ್ದರಿಂದ ಅದರ ಸ್ವಂತ ಹಕ್ಕನ್ನು ಯಾವ ದೇಶ ಹೊಂದಿದೆ ಎಂಬುದು ನಿಜಕ್ಕೂ ವಿಶೇಷವಲ್ಲ. ನಮಗೆ ಮುಖ್ಯವಾದ ವಿಷಯವೆಂದರೆ, ಈ ಪ್ರಾಚೀನ ಶಾಸನವನ್ನು ಮೂರು ಬಾರಿ ಕೆತ್ತಲಾಗಿದೆ. ಮೊದಲನೆಯ ಬಾರಿ ಚಿತ್ರಲಿಪಿಗಳನ್ನು ಚಿತ್ರಿಸಲಾಗಿದೆ. ಇವು ಪಾದ್ರಿಗಳ ಆದೇಶಕ್ಕೆ ಸೂಕ್ತವಾಗಿರುವ ಚಿತ್ರಲಿಪಿ ಆಗಿವೆ. ನಂತರ ಡೆಮೋಟಿಕ್ ಅಂದರೆ ದೈನಂದಿನ ಉದ್ದೇಶಗಳಿಗಾಗಿ ಬಳಸಲಾಗುವ ಈಜಿಪ್ಟ್‌ನ ಕರ್ಸಿವ್ ಲಿಪಿ, ಇನ್ನೊಂದು ಅರ್ಥದಲ್ಲಿ ಇದನ್ನು 'ಜನರ ಭಾಷೆ' ಎಂದು ಸಹ ಕರೆಲಾಗುತ್ತದೆ.ಅದರ ನಂತರ ಪ್ರಾಚೀನ ಗ್ರೀಕ್ ಭಾಷೆಯನ್ನು ಕೆತ್ತಲಾಗಿದೆ. ಇದನ್ನು ಆಡಳಿತದ ಸಮಯದಲ್ಲಿ ಈಜಿಪ್ಟ್‌ನ ಆಡಳಿತಗಾರರು ಬಳಸುತ್ತಿದ್ದರು.


ಆದ್ದರಿಂದ, ರೊಸೆಟ್ಟಾ ಕಲ್ಲು ಪ್ರಾಚೀನ ಈಜಿಪ್ಟ್ ಅಧ್ಯಯನಗಳ ನಿರ್ದಿಷ್ಟ ಕ್ಷೇತ್ರವಾದ ಈಜಿಪ್ಟಾಲಜಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ ವಿಶೇಷ ಆವಿಷ್ಕಾರ ಎಂದು ಇತಿಹಾಸಕಾರರ ಅಭಿಪ್ರಾಯವಾಗಿದೆ. ಇದು ಕಂಡುಬರುವ ಮೊದಲು, ಈಜಿಪ್ಟಿನ ಚಿತ್ರಲಿಪಿಗಳ ಅರ್ಥವೇನು ಮತ್ತು ಅವುಗಳನ್ನು ಹೇಗೆ ಅನುವಾದಿಸಲಾಗಿದೆ ಎಂಬುದರ ಕುರಿತು ಈಜಿಪ್ಟ್‌ ನಾಗರೀಕರಿಗೆ ಯಾವುದೇ ಜ್ಞಾನವಿರಲಿಲ್ಲ.


ಆದರೆ ಇದರ ನಂತರ ಅನೇಕ ವಿದ್ವಾಂಸರಿಗೆ ಅರ್ಥವಾಗುತ್ತಿದ್ದ ಪ್ರಾಚೀನ ಗ್ರೀಕ್ ಮತ್ತು ಇತರ ಮೂರು ಭಾಷೆಗಳ ಮಾಹಿತಿಯನ್ನು ಆ ರೊಸೆಟ್ಟಾ ಪ್ರಾಚೀನ ಕಲ್ಲು ತಿಳಿಸಿದ್ದರಿಂದ ಚಿತ್ರಲಿಪಿಗಳ ಮಾಹಿತಿಯ ಬಗ್ಗೆ ಆಧುನಿಕ ಇತಿಹಾಸಕಾರರಿಗೆ ತಿಳಿದಿದೆ ಎಂದರೆ ತಪ್ಪಾಗಲಾರದು.


ರೊಸೆಟ್ಟಾ ಕಲ್ಲು ಬ್ರಿಟನ್‌ಗೆ ಹೇಗೆ ಸ್ಥಳಾಂತರಗೊಂಡಿದೆ? ಅದಕ್ಕೆ ಇಲ್ಲಿದೆ ಉತ್ತರ


ಬ್ರಿಟಿಷ್ ವಸ್ತುಸಂಗ್ರಹಾಲಯದ ಪ್ರಕಾರ, “ಈ ರೊಸೆಟ್ಟಾ ಸ್ಟೋನ್‌ನ ಕೆತ್ತನೆಯನ್ನು 204-181 BC ವರೆಗೆ ಆಳಿದ ರಾಜ ಟಾಲೆಮಿ V ರ ಆಳ್ವಿಕೆಯಲ್ಲಿ ಮಾಡಲಾಯಿತು ಎಂದು ಇತಿಹಾಸದ ಪುರಾವೆಗಳು ಹೇಳುತ್ತಿವೆ. ಇದರಿಂದ ಈ ಪ್ರಾಚೀನ ಕಲ್ಲು ಅಂದಾಜು 2,000 ವರ್ಷಗಳಿಗಿಂತ ಹಳೆಯದು ಎಂಬುದು ತಿಳಿದು ಬರುತ್ತದೆ.


ಇದನ್ನೂ ಓದಿ; ಇನ್ಮುಂದೆ ಎಲ್ಲಾ ಕಾರುಗಳಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯ, ಕೇಂದ್ರ ಸರ್ಕಾರ ಸ್ಪಷ್ಟನೆ


ಇದರಲ್ಲಿ ರಾಜನ ಬೆಂಬಲಕ್ಕಾಗಿ ಕೆಲವು ಪುರೋಹಿತರ ವಿಶೇಷ ಸಂದೇಶಗಳು ಇವೆ ಎಂಬುದನ್ನು ನಂಬಲಾಗುತ್ತದೆ. ಕಾಲ ಕಳೆದಂತೆ ಇತರ ಶಾಸನಗಳ ಜೊತೆ ಈ ಪ್ರಾಚೀನ ಕಲ್ಲು ಸಹ ಬ್ರಿಟನ್‌ಗೆ ಸ್ಥಳಾಂತರಗೊಂಡಿತು.


ಮ್ಯೂಸಿಯಂ ವೆಬ್‌ಸೈಟ್‌ನ ಪ್ರಕಾರ, "ಪೂರ್ವ ಮೆಡಿಟರೇನಿಯನ್‌ನಲ್ಲಿ ಪ್ರಾಬಲ್ಯ ಸಾಧಿಸುವ ಮತ್ತು ಭಾರತದ ಮೇಲೆ ಬ್ರಿಟಿಷರ ಹಿಡಿತವನ್ನು ಸಡಿಲಗೊಳಿಸುವ ಉದ್ದೇಶದಿಂದ, 1798 ರಿಂದ 1801 ರವರೆಗೆ ಈಜಿಪ್ಟ್‌ನಲ್ಲಿ ಅಭಿಯಾನವನ್ನು ಪ್ರಾರಂಭಿಸಿದ ಫ್ರೆಂಚ್ ರಾಜ ನೆಪೋಲಿಯನ್ ಬೊನಾಪಾರ್ಟೆ ಅವರ ಕಾಲದಲ್ಲಿ ಈ ಪ್ರಾಚೀನ ಕಲ್ಲನ್ನು 'ಮರುಶೋಧಿಸಲಾಗಿದೆ'. “ ಎಂದು ಹೇಳಿಕೆ ನೀಡಿದೆ.


ಆವಿಷ್ಕಾರದ ವಿವರಗಳು


ಇದರ ಆವಿಷ್ಕಾರದ ವಿವರಗಳು ಅಸ್ಪಷ್ಟವಾಗಿದ್ದರೂ, ನೆಪೋಲಿಯನ್ ನ ಸೈನಿಕರು ಆಕಸ್ಮಿಕವಾಗಿ 1799 ರಲ್ಲಿ ನೈಲ್ ಡೆಲ್ಟಾದ ರಶೀದ್ ನಗರದಲ್ಲಿ ಈ ಪ್ರಾಚೀನ ಕಲ್ಲನ್ನು ಕಂಡುಹಿಡಿದಿದ್ದಾರೆ ಎಂದು ಹೇಳಲಾಗುತ್ತದೆ. ಅದನ್ನು ರೊಸೆಟ್ಟಾ ಎಂದು ಕರೆದಿದ್ದಾರೆ. ಅಂದಿನಿಂದ ರೊಸೆಟ್ಟಾ ಸ್ಟೋನ್‌ ಎಂಬ ಹೆಸರು ಬಂದಿದೆ. ರೊಸೆಟ್ಟಾ ಎಂಬ ಹೆಸರು ಪ್ರೆಂಚ್‌ ಭಾಷೆಯಿಂದ ಬಂದಿದೆ.


ಇದರ ನಂತರ ಬ್ರಿಟಿಷರ ವಿರುದ್ಧ ನೆಪೋಲಿಯನ್ ಸೋತಾಗ, ಅಲೆಕ್ಸಾಂಡ್ರಿಯಾ ಒಪ್ಪಂದ (1801)ದ ಆಧಾರದ ಮೇಲೆ ಈ ಪ್ರಾಚೀನ ಕಲ್ಲು ಬ್ರಿಟನ್‌ ದೇಶಕ್ಕೆ ವರ್ಗಾವಣೆ ಆಯಿತು. ಅಂದಿನಿಂದಲೂ ಈ ವಿಶೇಷ ಪ್ರಾಚೀನ ರೊಸೆಟ್ಟಾ ಸ್ಟೋನ್‌ ಬ್ರಿಟಿಷ್ ಮ್ಯೂಸಿಯಂನಲ್ಲಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.


ಈಜಿಪ್ಟ್‌ ದೇಶಕ್ಕೆ ಈ ಪ್ರಾಚೀನ ಕಲ್ಲು ಮತ್ತೆ ಮರಳುವ ಸಾಧ್ಯತೆ ಇದೆಯೇ?


ಈಜಿಪ್ಟ್‌ನ ಇತಿಹಾಸಕಾರರು ಮಾಡುತ್ತಿರುವ ಪ್ರಸ್ತುತ ವಿನಂತಿಯನ್ನು ಸರ್ಕಾರವು ಅಧಿಕೃತವಾಗಿ ಬೆಂಬಲಿಸದಿದ್ದರೂ, ಅಂತಹ ವಿನಂತಿಗಳನ್ನು ಈ ಮುಂಚೆ ಸ್ವೀಕರಿಸುತ್ತಿತ್ತು.


ಈಜಿಪ್ಟ್‌ನ ಶಾಸ್ತ್ರಜ್ಞರು ಏನ್‌ ಹೇಳ್ತಿದಾರೆ..


ಈಜಿಪ್ಟ್‌ಶಾಸ್ತ್ರಜ್ಞ ಮತ್ತು ಈಜಿಪ್ಟ್‌ನ ಪ್ರಾಚ್ಯವಸ್ತುಗಳ ವ್ಯವಹಾರಗಳ ಮಾಜಿ ರಾಜ್ಯ ಸಚಿವ ಡಾ. ಜಹಿ ಹವಾಸ್ ಅವರು ರೊಸೆಟ್ಟಾ ಕಲ್ಲನ್ನು ಈಜಿಪ್ಟ್ ವಸ್ತುಸಂಗ್ರಹಾಲಯಗಳಿಗೆ ಹಿಂತಿರುಗಿಸಲು ಪದೇ ಪದೇ ಒತ್ತಾಯಿಸಿದ್ದಾರೆ.


ಅವರು ಸ್ವಲ್ಪ ದಿನಗಳ ನಂತರ ಈ ಬೇಡಿಕೆಯನ್ನು ಮಾರ್ಪಡಿಸಿ, ಕೆಲವು ತಿಂಗಳುಗಳವರೆಗೆ ಬ್ರಿಟನ್ ದೇಶವು ಪ್ರಾಚೀನ ಕಲ್ಲನ್ನು ಈಜಿಪ್ಟ್‌ಗೆ ಸಾಲ ನೀಡುವಂತೆ ಸೂಚಿಸಿದರು. ಆದರೆ ಅವರ ಮಾತಿಗೆ ಬ್ರಿಟನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದ್ದರಿಂದ ಈ ಯೋಜನೆಯು ಜಾರಿಯಾಗಲಿಲ್ಲ.


ಆದರೆ, ಈ ರೀತಿಯ ಕೆಲವು ವಿನಂತಿಗಳು ವಸ್ತುಸಂಗ್ರಹಾಲಯಗಳಿಂದ ತಡವಾಗಿ ಅಂಗೀಕರಿಸಲ್ಪಟ್ಟಿವೆ ಎಂಬ ಮಾಹಿತಿಯು ಕೂಡ ಇದೆ. ರಾಯಿಟರ್ಸ್ ವರದಿಯ ಪ್ರಕಾರ, “ಇದೇ ಆಗಸ್ಟ್‌ನಲ್ಲಿ ಲಂಡನ್‌ನ ಹಾರ್ನಿಮನ್ ಮ್ಯೂಸಿಯಂ ತನ್ನ ಸುರ್ಪದಿಯಲ್ಲಿ ಇರುವ 1897 ರಲ್ಲಿ ಬ್ರಿಟಿಷ್ ಸೈನಿಕರು ಬೆನಿನ್ ಸಿಟಿಯಿಂದ ಲೂಟಿ ಮಾಡಿದ ಬೆನಿನ್ ಕಂಚುಗಳು ಸೇರಿದಂತೆ 72 ಕ್ಕೂ ಅಧಿಕ ಕಲಾಕೃತಿಗಳನ್ನು ನೈಜೀರಿಯಾ ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಹೇಳಿದೆ” ಎಂದು ಹೇಳಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು