• Home
 • »
 • News
 • »
 • national-international
 • »
 • Cooking Oil Prices: ಅಡುಗೆ ಎಣ್ಣೆ ಬೆಲೆ ಇಳಿಸುವಂತೆ ಕಂಪನಿಗಳಿಗೆ ಸರ್ಕಾರದ ತಾಕೀತು

Cooking Oil Prices: ಅಡುಗೆ ಎಣ್ಣೆ ಬೆಲೆ ಇಳಿಸುವಂತೆ ಕಂಪನಿಗಳಿಗೆ ಸರ್ಕಾರದ ತಾಕೀತು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಖಾದ್ಯ ತೈಲ ಬೆಲೆಯನ್ನು ಲೀಟರ್ಗೆ 10 ರೂಪಾಯಿಯಷ್ಟು ಕಡಿಮೆ ಮಾಡುವಂತೆ ತಯಾರಕ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಅಲ್ಲದೇ ಒಂದೇ ಬ್ರಾಂಡಿನ ಎಣ್ಣೆಗೆ ದೇಶಾದ್ಯಂತ ಒಂದೇ ರೀತಿಯ ಮಾರಾಟ ದರ ವಿಧಿಸುವಂತೆ ಸೂಚಿಸಿದೆ.

 • Share this:

  ಇಂಧನ ಬೆಲೆ (Fuel Prices) , ಅಡುಗೆ ಎಣ್ಣೆ ಬೆಲೆ (Cooking Oil Prices) , ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯಲ್ಲಾ ಗಗನಕ್ಕೇರಿ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿತ್ತು. ಇದಕ್ಕೆ ಪರಿಹಾರ ಎನ್ನುವಂತೆ ಕೇಂದ್ರ ಸರ್ಕಾರ (Central Government) ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೆಲ ತಿಂಗಳ ಹಿಂದೆ ಕಡಿಮೆ ಮಾಡಿತ್ತು. ಇದು ಕೊಂಚ ಮಟ್ಟಿಗೆ ಜನರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಈಗ ಮತ್ತೊಂದು ಪರಿಹಾರವಾಗಿ ಕೇಂದ್ರ ಸರ್ಕಾರ ಖಾದ್ಯ ತೈಲ ತಯಾರಿಕ ಕಂಪನಿಗಳಿಗೆ ಎಣ್ಣೆ ಬೆಲೆಯನ್ನು ಕಡಿಮೆ ಮಾಡುವಂತೆ ಸೂಚಿಸಿದೆ.


  ಒಂದು ವಾರದೊಳಗೆ 10 ರೂ. ಕಡಿಮೆ ಮಾಡಿ
  ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಾದ್ಯ ತೈಲ ಬೆಲೆ ಕಡಿಮೆಯಾಗಿರುವುದರಿಂದ ಮುಂದಿನ ಒಂದು ವಾರದೊಳಗೆ ಆಮದು ಮಾಡಿಕೊಳ್ಳುವ ಖಾದ್ಯ ತೈಲ ಬೆಲೆಯನ್ನು ಲೀಟರ್ಗೆ 10 ರೂಪಾಯಿಯಷ್ಟು ಕಡಿಮೆ ಮಾಡುವಂತೆ ತಯಾರಕ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಅಲ್ಲದೇ ಒಂದೇ ಬ್ರಾಂಡಿನ ಎಣ್ಣೆಗೆ ದೇಶಾದ್ಯಂತ ಒಂದೇ ರೀತಿಯ ಮಾರಾಟ ದರ ವಿಧಿಸುವಂತೆ ಸೂಚಿಸಿದೆ. ಒಂದು ವಾರದೊಳಗೆ ಬೆಲೆ ಬದಲಾವಣೆಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಕಂಪನಿಗಳಿಗೆ ತಾಕೀತು ಮಾಡಿದ್ದು, ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಗಣನೀಯವಾಗಿ ಕಡಿಮೆಯಾದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ.


  ಪ್ರಸ್ತುತ ಭಾರತವು ದೇಶಕ್ಕೆ ಬೇಕಿರುವ 60% ನಷ್ಟು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹಾಗಾಗಿ ಈಗ ಅಂತಾರಾಷ್ಟ್ರೀಯವಾಗಿ ಬೆಲೆ ಕಡಿಮೆಯಾಗಿರುವುದರಿಂದ ದೇಶದಲ್ಲೂ ಬೆಲೆ ಕಡಿಮೆ ಮಾಡುವಂತೆ ಸರ್ಕಾರ ಸೂಚಿಸಿದೆ.


  ಜಾಗತಿಕ ಬೆಲೆಗಳು ಶೇಕಡಾ 10 ರಷ್ಟು ಕುಸಿದಿದೆ


  ಜಾಗತಿಕ ಬೆಲೆಯಲ್ಲಿ ಮತ್ತಷ್ಟು ಕುಸಿತವನ್ನು ಗಮನಿಸಿದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಎಲ್ಲಾ ಖಾದ್ಯ ತೈಲ ಉತ್ಪಾದನಾ ಕಂಪನಿಗೊಂದಿಗೆ ಸಭೆ ನಡೆಸಿದ್ದಾರೆ. ಇಲ್ಲಿ ಮಾತನಾಡಿದ ಅವರು "ನಾವು ವಿವರವಾದ ಪ್ರಸ್ತುತಿಯನ್ನು ನೀಡಿದ್ದೇವೆ ಮತ್ತು ಕಳೆದ ಒಂದು ವಾರದಲ್ಲಿ ಜಾಗತಿಕ ಬೆಲೆಗಳು ಶೇಕಡಾ 10 ರಷ್ಟು ಕುಸಿದಿದೆ ಎಂದು ಕಂಪನಿಗಳಿಗೆ ತಿಳಿಸಿದ್ದೇವೆ. ಇದನ್ನು ಗ್ರಾಹಕರಿಗೆ ತಲುಪಿಸಬೇಕು. ನಾವು ಎಂಆರ್‌ಪಿಯನ್ನು ಕಡಿಮೆ ಮಾಡಲು ಕೇಳಿದ್ದೇವೆ" ಎಂದು ಸಭೆಯ ನಂತರ ಪಾಂಡೆ ತಿಳಿಸಿದರು.


  ಇದನ್ನೂ ಓದಿ: LPG Price Hike: ಜನಸಾಮಾನ್ಯರಿಗೆ ಮತ್ತೆ ಬಿಗ್​ ಶಾಕ್! ಒಂದೇ ಬಾರಿಗೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಷ್ಟೊಂದು ಹೆಚ್ಚಳ


  "ಪ್ರಸ್ತುತ, ವಿವಿಧ ವಲಯಗಳಲ್ಲಿ ಮಾರಾಟವಾಗುವ ಅದೇ ಬ್ರಾಂಡ್‌ಗಳ ಎಂಆರ್‌ಪಿಯಲ್ಲಿ ಲೀಟರ್‌ಗೆ 3-5 ರೂ ವ್ಯತ್ಯಾಸವಿದೆ. ಎಂಆರ್‌ಪಿಯಲ್ಲಿ ಈ ರೀತಿಯ ವ್ಯತ್ಯಾಸವಾಗಬಾರದು" ಎಂದು ಅವರು ಹೇಳಿದರು.


  ಗ್ರಾಹಕರ ದೂರಿನ ಬಗ್ಗೆಯೂ ಚರ್ಚೆ
  ಸಭೆಯಲ್ಲಿ ಗ್ರಾಹಕರು ನೀಡಿದ ದೂರಿನ ಬಗ್ಗೆಯೂ ಚರ್ಚೆ ನಡೆಯಿತು. ಅನ್ಯಾಯದ ವ್ಯಾಪಾರ ಪದ್ಧತಿಗಳ ಬಗ್ಗೆ ಖಾದ್ಯ ತೈಲ ಬ್ರಾಂಡ್‌ಗಳ ವಿರುದ್ಧ ಗ್ರಾಹಕರು ಹಲವಾರು ದೂರುಗಳನ್ನು ನೀಡುತ್ತಿದ್ದಾರೆ ಎಂದು ಸುಧಾಂಶು ಅವರು ಈ ಬಗ್ಗೆ ಕಂಪನಿಗಳೊಂದಿಗೆ ಚರ್ಚಿಸಿದರು. ಖಾದ್ಯ ತೈಲವನ್ನು 15 ಡಿಗ್ರಿ ಸೆಲ್ಸಿಯಸ್‌ನಲ್ಲಿ ಪ್ಯಾಕ್ ಮಾಡಲಾಗಿದೆ ಎಂದು ಕೆಲವು ಕಂಪನಿಗಳು ಪ್ಯಾಕೇಜ್‌ನಲ್ಲಿ ಬರೆಯುತ್ತಿವೆ ಎಂದು ಕಾರ್ಯದರ್ಶಿ ಹೇಳಿದರು.


  ತಾತ್ವಿಕವಾಗಿ, ಕಂಪನಿಗಳು 30 ಡಿಗ್ರಿ ಸೆಲ್ಸಿಯಸ್ನಲ್ಲಿ ಪ್ಯಾಕ್ ಮಾಡಬೇಕು. 15 ಡಿಗ್ರಿ ಸೆಲ್ಸಿಯಸ್‌ನಲ್ಲಿ ಪ್ಯಾಕ್ ಮಾಡುವುದರಿಂದ ತೈಲವು ಹಿಗ್ಗುತ್ತದೆ ಮತ್ತು ತೂಕ ಕಡಿಮೆಯಾಗುತ್ತದೆ. ಆದರೆ ಕಡಿಮೆ ತೂಕವನ್ನು ಪ್ಯಾಕೇಜ್‌ನಲ್ಲಿ ಮುದ್ರಿಸುವುದಿಲ್ಲ. ಇದು ಅನ್ಯಾಯದ ವ್ಯಾಪಾರ ಕ್ರಮವಾಗಿದೆ. ಈ ಮೂಲಕ ಗ್ರಾಹಕರು ಮೋಸಕ್ಕೆ ಒಳಗಾಗುತ್ತಾರೆ. ಇದು ಮೊದಲು ಸರಿಯಾಗಬೇಕು ಎಂದಿದ್ದಾರೆ.


  ಇದೇ ರೀತಿಯ ಮತ್ತೊಂದು ಉದಾಹರಣೆಯೆಂದರೆ 910 ಗ್ರಾಂನ ಖಾದ್ಯ ತೈಲವನ್ನು 15 ಡಿಗ್ರಿ ಸೆಲ್ಸಿಯಸ್‌ನಲ್ಲಿ ಪ್ಯಾಕ್ ಮಾಡಲಾಗಿದೆ ಎಂದು ಕಂಪನಿಗಳು ಮುದ್ರಿಸುತ್ತಿವೆ, ಆದರೆ ನಿಜವಾದ ತೂಕವು 900 ಗ್ರಾಂಗಿಂತ ಕಡಿಮೆ ಇರುತ್ತದೆ ಎಂದು ಪಾಂಡೆ ವಿವರಿಸಿದರು. ಗ್ರಾಹಕ ವ್ಯವಹಾರಗಳ ಸಚಿವಾಲಯವು ಈ ದೂರಿನ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಜುಲೈ 6 ರಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಅಖಿಲ ಭಾರತ ಸರಾಸರಿ ಚಿಲ್ಲರೆ ದರದಲ್ಲಿ ತಾಳೆ ಎಣ್ಣೆ ಕೆಜಿಗೆ 144.16 ರೂ., ಸೂರ್ಯಕಾಂತಿ ಎಣ್ಣೆ ಕೆಜಿಗೆ 185.77 ರೂ., ಸೋಯಾಬೀನ್ ಎಣ್ಣೆ ಕೆಜಿಗೆ 185.77 ರೂ., ಸಾಸಿವೆ ಎಣ್ಣೆ ಕೆಜಿಗೆ 177.37 ರೂ. ಮತ್ತು ಕಡಲೆ ಎಣ್ಣೆ ಕೆಜಿಗೆ 187.93 ಇದೆ.

  Published by:Kavya V
  First published: