ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಕೊಳ್ಳೆ ಹೊಡೆದಿದ್ದ 18,170 ಕೋಟಿ ರೂ. ವಾಪಾಸ್!

Enforcement Directorate: ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರಿಂದ ವಶಪಡಿಸಿಕೊಳ್ಳಲಾಗಿರುವ 18,170 ಕೋಟಿ ರೂ. ಮೌಲ್ಯದ ಆಸ್ತಿ ಮತ್ತು ಹಣದಲ್ಲಿ 9,371.17 ಕೋಟಿ ರೂ. ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ವರ್ಗಾಯಿಸಲಾಗಿದೆ.

ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿ

ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿ

 • Share this:
  ನವದೆಹಲಿ (ಜೂನ್ 23): ಬಹುಕೋಟಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಭಾರತದ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರಿಂದ ವಶಪಡಿಸಿಕೊಳ್ಳಲಾಗಿರುವ 18,170 ಕೋಟಿ ರೂ. ಮೌಲ್ಯದ ಆಸ್ತಿ ಮತ್ತು ಹಣದಲ್ಲಿ 9,371.17 ಕೋಟಿ ರೂ. ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ವರ್ಗಾಯಿಸಲಾಗಿದೆ. ಈ ಉದ್ಯಮಿಗಳಿಂದ ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದ್ದ ಬ್ಯಾಂಕ್ಗಳಿಗೆ ಜಾರಿ ನಿರ್ದೇಶನಾಲಯ (ಇಡಿ) ಹಣವನ್ನು ವರ್ಗಾಯಿಸಿದೆ.

  ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಸಾಲ ಪಡೆದು, ಭಾರತದಿಂದ ತಲೆ ಮರೆಸಿಕೊಂಡಿದ್ದರು. ಅವರಿಂದ ಜಾರಿ ನಿರ್ದೇಶನಾಲಯ ಒಟ್ಟು 18,170 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ. ಇದರಲ್ಲಿ 969 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಿದೇಶಗಳಲ್ಲಿ ಜಪ್ತಿ ಮಾಡಲಾಗಿತ್ತು.

  ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವ ಕುರಿತು ವಿಚಾರಣೆ ನಡೆಯುತ್ತಿದೆ. ತಮ್ಮ ಕಂಪನಿಗಳಿಗೆ ಸರ್ಕಾರಿ ವಲಯದ ಬ್ಯಾಂಕುಗಳಿಂದ ಈ ಮೂವರು ಉದ್ಯಮಿಗಳು ಸಾಲ ಪಡೆದಿದ್ದರು. ಆ ಸಾಲವನ್ನು ಮರುಪಾವತಿ ಮಾಡದ ಕಾರಣ ಬ್ಯಾಂಕುಗಳಿಗೆ 22,585.83 ಕೋಟಿ ರೂ. ನಷ್ಟ ಉಂಟಾಗಿತ್ತು. ಆ ನಷ್ಟವನ್ನು ತುಂಬಿಕೊಡುವಂತೆ ಬ್ಯಾಂಕ್ಗಳು ಸರ್ಕಾರದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐ, ಜಾರಿ ನಿರ್ದೇಶನಾಲಯಕ್ಕೆ ವಹಿಸಿತ್ತು. ಸದ್ಯಕ್ಕೆ ಈ ಮೂವರು ಉದ್ಯಮಿಗಳಿಂದ ಬ್ಯಾಂಕ್ಗೆ ಉಂಟಾಗಿರುವ ನಷ್ಟದ ಶೇ. 80.45ರಷ್ಟು ಭಾಗ (18,170 ಕೋಟಿ ರೂ.) ಮೌಲ್ಯದ ಆಸ್ತಿಯನ್ನು ಇಡಿ ವಶಕ್ಕೆ ಪಡೆದಿದೆ.

  ಇದನ್ನೂ ಓದಿ: Mehul Choksi: ಮೆಹುಲ್ ಚೋಕ್ಸಿ ಬಂಧನದಿಂದ ಮತ್ತೆ ಶುರುವಾಯ್ತು ಭಾರತ ಬಿಟ್ಟು ಪರಾರಿಯಾದ ಗಣ್ಯರ ಹಸ್ತಾಂತರದ ಚರ್ಚೆ

  ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಾರಿ ನಿರ್ದೇಶನಾಲಯ, ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ತಮ್ಮ ಕಂಪನಿಗಳ ಮೂಲಕ ಹಣವನ್ನು ಪಾವತಿಸದೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ವಂಚನೆ ಮಾಡಿದ್ದಾರೆ. ಇದರಿಂದಾಗಿ ಬ್ಯಾಂಕುಗಳಿಗೆ ಒಟ್ಟು 22,586 ಕೋಟಿ ರೂ. ನಷ್ಟವಾಗಿದೆ ಎಂದಿದೆ.  ಮುಂಬೈನ ಪಿಎಂಎಲ್ಎ (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ) ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ ಜಾರಿ ನಿರ್ದೇಶನಾಲಯ ಅದಕ್ಕೆ ಲಗತ್ತಿಸಲಾದ ಷೇರುಗಳನ್ನು (6,600 ಕೋಟಿ ರೂಪಾಯಿ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟಕ್ಕೆ ವರ್ಗಾಯಿಸಿದೆ ಎಂದು ಮುಂಬೈಯ ವಿಶೇಷ ನ್ಯಾಯಾಲಯ ಹೇಳಿದೆ.

  ಎಸ್ಬಿಐ ನೇತೃತ್ವದ ಒಕ್ಕೂಟದ ಪರವಾಗಿ ಸಾಲ ಮರುಪಡೆಯುವಿಕೆ ನ್ಯಾಯಮಂಡಳಿ ಯುನೈಟೆಡ್ ಬ್ರೀವರೀಸ್ ಲಿಮಿಟೆಡ್ನ ಷೇರುಗಳನ್ನು 6,600 ಕೋಟಿ ರೂ.ಗೆ ಮಾರಾಟ ಮಾಡಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಈಗಾಗಲೇ ಷೇರುಗಳನ್ನು ಮಾರಾಟ ಮಾಡುವ ಮೂಲಕ ಸಾವಿರದ 357 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿವೆ.

  ಇದನ್ನೂ ಓದಿ: Mehul Choksi | ಕೊಲೆಯಾಗುತ್ತೇನೆಂಬ ಭಯ ಚೋಕ್ಸಿಯನ್ನು ಕಾಡುತ್ತಿತ್ತು; ಮೆಹುಲ್ ಚೋಕ್ಸಿ ಬಗ್ಗೆ ಹೆಂಡತಿ ಪ್ರೀತಿ ಹೇಳಿದ್ದೇನು?

  ಮದ್ಯದ ದೊರೆ ಎಂದೇ ಕರೆಸಿಕೊಳ್ಳುತ್ತಿದ್ದ ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದ್ದು, ಅದನ್ನು ಇಂಗ್ಲೆಂಡಿನ ಹೈಕೋರ್ಟ್ ಅನುಮೋದಿಸಿದೆ. ವಿಜಯ್ ಮಲ್ಯ ಅವರಿಗೆ ಯುಕೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಿದ್ದರಿಂದ, ಅವರನ್ನು ಸದ್ಯದಲ್ಲೇ ಭಾರತಕ್ಕೆ ಹಸ್ತಾಂತರಿಸಲಾಗುವುದು.

  ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಮುಂಬೈನ ಪಿಎಂಎಲ್ಎ ನ್ಯಾಯಾಲಯವು ಪರಾರಿಯಾದ ಆರ್ಥಿಕ ಅಪರಾಧಿಗಳೆಂದು ಈಗಾಗಲೇ ಘೋಷಿಸಿದೆ. ಇನ್ನು, ಮೆಹುಲ್ ಚೋಕ್ಸಿ ಅವರನ್ನು ಡೊಮಿನಿಕಾದಿಂದ ಸದ್ಯದಲ್ಲೇ ಹಸ್ತಾಂತರ ಮಾಡಲಾಗುತ್ತದೆ
  Published by:Sushma Chakre
  First published: