Maharashtra: ಮಾಜಿ ರಾಜ್ಯ ಸಚಿವ ಅನಿಲ್ ದೇಶ್ ಮುಖ್ (Anil Deshmukh) ಮತ್ತು ಇತರರ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (The Enforcement Directorate (ED) ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್ ಅವರನ್ನು ತನ್ನ ಕಚೇರಿಗೆ ಕರೆಸಿಕೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಡಿ (MVA) ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪರಬ್ ಅವರನ್ನು ಮಂಗಳವಾರ ದಕ್ಷಿಣ ಮುಂಬೈನ ಏಜೆನ್ಸಿಯ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿಯ ಮುಂದೆ ಈ ಪ್ರಕರಣದ ಕುರಿತು ಒಂದಷ್ಟು ಮಾಹಿತಿಗಳನ್ನು ಶಿವಸೇನಾ ಸಚಿವರಿಂದ ಪಡೆಯಲಾಯಿತು ಎಂದು ಇಡಿ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶಿವಸೇನಾ ನಾಯಕ ಸಂಜಯ್ ರಾವುತ್ ತನ್ನ ಸಹೋದ್ಯೋಗಿ ಪರಬ್ ಅವರಿಗೆ "ನಿರೀಕ್ಷೆಯಂತೆ" ನೋಟಿಸ್ ನೀಡಲಾಗೆದೆ ಮತ್ತು ಈ ಅನ್ಯಾಯ ಹಾಗೂ ಅಕ್ರಮದ ವಿರುದ್ದ ಪಕ್ಷವು ಕಾನೂನುಬದ್ಧವಾಗಿ ಹೋರಾಡುತ್ತದೆ. ಟ್ವೀಟ್ ನಲ್ಲಿ ಹೀಗೆ ಬರೆದುಕೊಂಡಿರುವ ನಾಯಕ ರಾವತ್, "ಒಳ್ಳೆಯದು, ಜನ ಆಶೀರ್ವಾದ ಯಾತ್ರೆ ಮುಕ್ತಾಯವಾದ ತಕ್ಷಣ, ಅನಿಲ್ ಪರಬ್ ನಿರೀಕ್ಷೆಯಂತೆ ಇಡಿ ನೋಟಿಸ್ ನೀಡಲಾಗಿದೆ.
ಕೇಂದ್ರ ಸರ್ಕಾರ ತನ್ನ ಕೆಲಸವನ್ನು ಆರಂಭಿಸಿದೆ. ರತ್ನಗಿರಿ ಜಿಲ್ಲೆಯಿಂದ ಇವರ ಕಳ್ಳ ಬೇಟೆ ಶುರುವಾಗಿದೆ, ಪರಬ್ ಈ ಜಿಲ್ಲೆಯ ರಕ್ಷಕ ಮಂತ್ರಿ. ಈ ಕ್ರೋನೊಲಜಿಯನ್ನು ಅರ್ಥಮಾಡಿಕೊಳ್ಳಿ. ಕಾನೂನಾತ್ಮಕವಾಗಿ ನಾವು ಹೋರಾಟ ನಡೆಸುತ್ತೇನೆ. ಜೈ ಮಹಾರಾಷ್ಟ್ರ. " ಎಂದು ಬರೆದುಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಇಡಿ ಅವರಿಗೆ ನೀಡಿದ ಕನಿಷ್ಠ ಐದು ಸಮನ್ಸ್ಗಳನ್ನು ದೇಶಮುಖ್ ತಪ್ಪಿಕೊಂಡಿದ್ದರು, ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯಿದೆ (PMLA) ಅಡಿಯ ಪ್ರಕರಣದಲ್ಲಿ ಈಗ ವಿಚಾರಣೆಗೆ ಕರೆಯಲಾಗಿದೆ ಎಂದು ಹೇಳಲಾಗಿದೆ.
ಏಪ್ರಿಲ್ನಲ್ಲಿ ದೇಶಮುಖ್ ರಾಜೀನಾಮೆಗೆ ಕಾರಣವಾದ ಮಹಾರಾಷ್ಟ್ರ ಪೊಲೀಸ್ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ 100 ಕೋಟಿ ಲಂಚ ಮತ್ತು ಸುಲಿಗೆ ದಂಧೆಯ ಕುರಿತು ಇಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ದೇಶ್ಮುಖ್ ಅವರು ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ಸಿಂಗ್ ಅವರನ್ನು ತೆಗೆದುಹಾಕಲ್ಪಟ್ಟ ನಂತರ ಅವರ ವಿರುದ್ಧ ಈ ರೀತಿಯ ಆರೋಪ ಮಾಡಿದ್ದಾರೆ ಎಂದು ಹೇಳಲಾಗಿದೆ.
ಆದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ಜಟಾಪಟಿ ಸಾಕಷ್ಟು ತಾರಕಕ್ಕೆ ತಲುಪಿದ್ದು, ಎರಡೂ ಪಕ್ಷಗಳು ಸಾಕಷ್ಟು ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿವೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ