ಸುಶಾಂತ್‌ ಸಿಂಗ್ ರಜಪೂತ್‌ ಪ್ರಕರಣ; ಆಗಸ್ಟ್‌ 7ರಂದು ವಿಚಾರಣೆಗೆ ಹಾಜರಾಗಲು ರಿಯಾ ಚಕ್ರವರ್ತಿಗೆ ಇಡಿ ಸಮನ್ಸ್‌

ನಟ ಸುಶಾಂತ್ ಅವರ ಸಿಎ ಸಂದೀಪ್ ಶ್ರೀಧರ್ ಅವರನ್ನು ಇಡಿ ಕರೆಸಿದ ಕೆಲವೇ ಗಂಟೆಗಳಲ್ಲಿ ನಟಿ ರಿಯಾ ಸಮನ್ಸ್‌ ಜಾರಿ ಮಾಡಲಾಗಿದೆ. ದಿವಂಗತ ನಟನ ಹಣಕಾಸು ಮತ್ತು ಈ ಹಿಂದೆ ಅವರು ಸ್ಥಾಪಿಸಿದ ಕಂಪನಿಗಳ ಬಗ್ಗೆ ಅವರ ಚಾರ್ಟ್‌ರ್ಡ್‌ ಅಕೌಂಟೆಂಟ್‌ ಬಳಿ ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

MAshok Kumar | news18-kannada
Updated:August 5, 2020, 11:01 PM IST
ಸುಶಾಂತ್‌ ಸಿಂಗ್ ರಜಪೂತ್‌ ಪ್ರಕರಣ; ಆಗಸ್ಟ್‌ 7ರಂದು ವಿಚಾರಣೆಗೆ ಹಾಜರಾಗಲು ರಿಯಾ ಚಕ್ರವರ್ತಿಗೆ ಇಡಿ ಸಮನ್ಸ್‌
ಸುಶಾಂತ್‌ ಸಿಂಗ್, ರಿಯಾ ಚಕ್ರವರ್ತಿ.
  • Share this:
ದಿವಂಗತ ನಟ ಸುಶಾಂತ್‌ ಸಿಂಗ್ ಅವರ ಹಣವನ್ನು ವೈಯಕ್ತಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಅನುಮಾನದ ಮೇಲೆ ಮನಿ ಲಾಂಡರಿಂಗ್ ತಡೆ ಕಾಯ್ದೆ ಅನ್ವಯ ಆಗಸ್ಟ್‌ 07 ರ ಶುಕ್ರವಾರದಂದು ವಿಚಾರಣೆಗೆ ಹಾಜರಾಗುವಂತೆ ನಟಿ ರಿಯಾ ಚಕ್ರವರ್ತಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಸಮನ್ಸ್‌ ಜಾರಿ ಮಾಡಿದೆ.

ಸಿಎನ್‌ಎನ್ ನ್ಯೂಸ್ 18 ರೊಂದಿಗೆ ಮಾತನಾಡಿದ ಮೂಲಗಳ ಪ್ರಕಾರ, ರಿಯಾ ಮುಂಬೈನ ಎರಡು ಆಸ್ತಿಗಳ ಮೇಲೆ ಮಾಡಿದ ಹೂಡಿಕೆಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ. ಈ ಆಸ್ತಿಗಳಲ್ಲಿನ ಹಣದ ಹರಿವು ಸುಶಾಂತ್ ಸಿಂಗ್ ರಜಪೂತ್ ಅವರ ಖಾತೆಯಿಂದ ಬಂದಿದೆ ಎಂಬುದರ ಕುರಿತು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ವಿಚಾರಣೆಗೆ ನಟಿ ರಿಯಾ ಅವರ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ನನ್ನೂ ಕರೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಟ ಸುಶಾಂತ್ ಅವರ ಸಿಎ ಸಂದೀಪ್ ಶ್ರೀಧರ್ ಅವರನ್ನು ಇಡಿ ಕರೆಸಿದ ಕೆಲವೇ ಗಂಟೆಗಳಲ್ಲಿ ನಟಿ ರಿಯಾ ಸಮನ್ಸ್‌ ಜಾರಿ ಮಾಡಲಾಗಿದೆ. ದಿವಂಗತ ನಟನ ಹಣಕಾಸು ಮತ್ತು ಈ ಹಿಂದೆ ಅವರು ಸ್ಥಾಪಿಸಿದ ಕಂಪನಿಗಳ ಬಗ್ಗೆ ಅವರ ಚಾರ್ಟ್‌ರ್ಡ್‌ ಅಕೌಂಟೆಂಟ್‌ ಬಳಿ ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಸುಶಾಂತ್‌ ಸಾವಿನ ಕುರಿತು ಕಳೆದ ಜುಲೈ 28 ರಂದು ಅವರ ತಂದೆ ಕೆ.ಕೆ. ಸಿಂಗ್  ಪಾಟ್ನಾದಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ್ದರು. ಈ ದೂರಿನಲ್ಲಿ ನಟಿ ರಿಯಾ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ, ಕ್ರಿಮಿನಲ್ ಪಿತೂರಿ ಮತ್ತು ವಂಚನೆಗೆ ಸಂಬಂಧಿಸಿದಂತೆ ಆರೋಪಿಸಿದ್ದರು. ಅಲ್ಲದೆ, ಅಲ್ಪಾವಧಿಯಲ್ಲಿಯೇ ರಿಯಾ ಅವರು ಸುಶಾಂತ್ ಅವರ ಖಾತೆಯಿಂದ 15 ಕೋಟಿ ರೂಪಾಯಿಗಳನ್ನು ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ : ಸುಶಾಂತ್ ಸಾವು ಪ್ರಕರಣ: ಸಿಬಿಐ ತನಿಖೆಗೆ ಕೇಂದ್ರ ಒಪ್ಪಿಗೆ; ಮಹಾರಾಷ್ಟ್ರ ಪೊಲೀಸ್​ಗೆ ಸುಪ್ರೀಂ ತರಾಟೆ

ಈ ಪ್ರಕರಣದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹಸ್ತಕ್ಷೇಪದ ನಂತರ ಎಫ್ಐಆರ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 341, 342, 380, 406, 420, 306ರ ಅಡಿಯಲ್ಲಿ ಸುಶಾಂತ್ ಅವರ ತಂದೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಮುಂಬೈನಲ್ಲಿ ಬಿಹಾರ ಪೊಲೀಸರ ನಾಲ್ಕು ಸದಸ್ಯರ ತಂಡ ಈಗಾಗಲೇ ತನಿಖೆ ನಡೆಸುತ್ತಿದೆ.
ಎಂ.ಎಸ್‌. ಧೋನಿ, ಪಿಕೆ ಸೇರಿದಂತೆ ಸೂಪರ್‌ ಹಿಟ್‌ ಚಿತ್ರಗಳಲ್ಲಿ ಅಭಿನಯಿಸಿ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದ ಖ್ಯಾತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ರಜಪೂತ್ (34) 2020 ರ ಜೂನ್ 14 ರಂದು ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಳ್ಳುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದರು.
Published by: MAshok Kumar
First published: August 5, 2020, 10:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading