• Home
  • »
  • News
  • »
  • national-international
  • »
  • Hemant Soren: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾರ್ಖಂಡ್ ಸಿಎಂ ಹೇಮಂತ್​ ಸೋರೆನ್​ಗೆ ಇಡಿ ಸಮನ್ಸ್ ಜಾರಿ!

Hemant Soren: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾರ್ಖಂಡ್ ಸಿಎಂ ಹೇಮಂತ್​ ಸೋರೆನ್​ಗೆ ಇಡಿ ಸಮನ್ಸ್ ಜಾರಿ!

ಹೇಮಂತ್ ಸೋರೆನ್

ಹೇಮಂತ್ ಸೋರೆನ್

Jharkhand Illegal Mining Case: ಈ ಪ್ರಕರಣದಲ್ಲಿ ಇಡಿ ಈ ಹಿಂದೆ ಮುಖ್ಯಮಂತ್ರಿಗಳ ಸಹಾಯಕ ಪಂಕಜ್ ಮಿಶ್ರಾ ಮತ್ತು ಇತರ ಇಬ್ಬರನ್ನು ಬಂಧಿಸಿತ್ತು. ಮಿಶ್ರಾ ಅವರ ಮನೆಯಿಂದ ಹೇಮಂತ್ ಸೋರೆನ್ ಅವರ ಪಾಸ್‌ಬುಕ್ ಮತ್ತು ಅವರು ಸಹಿ ಮಾಡಿದ ಕೆಲವು ಚೆಕ್‌ಗಳನ್ನು ಇಡಿ ವಶಪಡಿಸಿಕೊಂಡಿದೆ.

  • News18 Kannada
  • Last Updated :
  • Ranchi, India
  • Share this:

    ರಾಂಚಿ(ನ02): ಜಾರಿ ನಿರ್ದೇಶನಾಲಯ ಬುಧವಾರ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ (Jharkhand Chief Minister Hemant Soren) ಅವರಿಗೆ ಸಮನ್ಸ್ ನೀಡಿದ್ದು, ಅಕ್ರಮ ಗಣಿಗಾರಿಕೆಗೆ (Illegal Mining) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣದಲ್ಲಿ ವಿಚಾರಣೆಗೆ ಏಜೆನ್ಸಿಯ ಮುಂದೆ ಹಾಜರಾಗುವಂತೆ ಸೂಚಿಸಿದೆ. ಗುರುವಾರ (ನವೆಂಬರ್ 3) ರಾಜ್ಯ ರಾಜಧಾನಿ ರಾಂಚಿಯಲ್ಲಿರುವ ತನ್ನ ಪ್ರಾದೇಶಿಕ ಕಚೇರಿಯಲ್ಲಿ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಯ ಮುಂದೆ ಹಾಜರಾಗುವಂತೆ 47 ವರ್ಷದ ಸೋರೆನ್ ಅವರನ್ನು ಕೇಳಲಾಗಿದೆ. ಇಡಿ ಜಾರ್ಖಂಡ್ ಪೊಲೀಸ್ ಕಮಿಷನರ್‌ಗೆ ಪತ್ರವನ್ನೂ ಬರೆದಿದ್ದು, ವಿಚಾರಣೆಗೆ ಮುನ್ನ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡುವಂತೆ ಕೇಳಿದೆ.


    ಇಡಿ ಮೂಲಗಳ ಪ್ರಕಾರ, ಬಂಧಿತ ಆರೋಪಿ ಪಂಕಜ್ ಮಿಶ್ರಾ ಅವರ ನಿವಾಸದಿಂದ ವಶಪಡಿಸಿಕೊಂಡ ಬ್ಯಾಂಕಿಂಗ್ ದಾಖಲೆಗಳಿಗೆ ಸಂಬಂಧಿಸಿದಂತೆ ಸೋರೆನ್ ಅವರನ್ನು ವಿಚಾರಣೆ ನಡೆಸಲಾಗುವುದು ಮತ್ತು ಅವರ ಹೇಳಿಕೆಯನ್ನು ಪಿಎಂಎಲ್‌ಎ ಅಡಿಯಲ್ಲಿ ದಾಖಲಿಸಿಕೊಳ್ಳಲಾಗುವುದು.


    ಇದನ್ನೂ ಓದಿ: Jharkhand: ಭಗವಾನ್ ಶ್ರೀಕೃಷ್ಣನೇ ಕನಸ್ಸಿನಲ್ಲಿ ಬಂದಿದ್ದನಂತೆ.. ಮುಸ್ಲಿಂ ವ್ಯಕ್ತಿಯಿಂದ ಅದ್ಭುತವನ್ನೇ ಮಾಡಿಸಿದ್ದಾನಂತೆ!


    ಸಮನ್ಸ್ ಕಳುಹಿಸುವ ಹಿಂದಿನ ಪ್ರಮುಖ ಕಾರಣಗಳು ಇವು


    ಸಿಎಂ ಸೋರೆನ್‌ಗೆ ಸಮನ್ಸ್‌ ಜಾರಿ ಮಾಡಲು ಮುಖ್ಯ ಕಾರಣವೆಂದರೆ ಅವರ ವಿಶೇಷ ಪ್ರತಿನಿಧಿ ಪಂಕಜ್ ಮಿಶ್ರಾ ಅಕ್ರಮ ಗಣಿಗಾರಿಕೆ ಮತ್ತು ಇತರ ಪ್ರಕರಣಗಳಲ್ಲಿ 42 ಕೋಟಿ ರೂ.ಗೂ ಹೆಚ್ಚು ಆಸ್ತಿ ಸಂಪಾದಿಸಿರುವುದು. ಪ್ರೇಮ್ ಪ್ರಕಾಶ್ ಅವರ ಮನೆಯಿಂದ ಮುಖ್ಯಮಂತ್ರಿ ನಿವಾಸದ ಭದ್ರತೆಗೆ ನಿಯೋಜಿಸಲಾಗಿದ್ದ ಯೋಧರಿಗೆ ನೀಡಲಾಗಿದ್ದ ಎರಡು ಎಕೆ-47 ಮತ್ತು 60 ಬುಲೆಟ್‌ಗಳನ್ನು ವಶಪಡಿಸಿಕೊಂಡಿರುವುದು, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರನ್ನು ಗಣಿ ಇಲಾಖೆಗೆ ನಿಯೋಜಿಸಲು ಕಾರಣಗಳು ಸೇರಿವೆ.


    ಇದು ಸೇಡಿನ ರಾಜಕಾರಣ: ಮನೋಜ್ ಪಾಂಡೆ


    ಇಡಿ ಕಳುಹಿಸಿದ ಸಮನ್ಸ್‌ನಲ್ಲಿ, ಇಡಿ ತನ್ನ ಕೆಲಸವನ್ನು ಮಾಡುತ್ತದೆ ಎಂದು ಜೆಎಂಎಂನ ಮನೋಜ್ ಪಾಂಡೆ ಹೇಳಿದ್ದಾರೆ. ಅನ್ಯಾಯವಾದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ಇಡಿ ಸಿಎಂಗೆ ಸಮನ್ಸ್ ಮಾಡಬಹುದೇ ಎಂದು ತಿಳಿದಿಲ್ಲವೇ? ಒಂದು ವೇಳೆ ಕಾನೂನು ತಜ್ಞರ ಸಲಹೆ ಪಡೆದು ಸಿಎಂ ಪ್ರತಿಕ್ರಿಯೆ ನೀಡಲಿದ್ದಾರೆ. ಆ ಆರೋಪಗಳಿಗಾಗಿ ಅವರನ್ನು ಕರೆಸುವುದು ಕಾನೂನುಬದ್ಧವೇ? ಹೌದು ಎಂದಾದರೆ, ಹಲವು ಪ್ರಕರಣಗಳಲ್ಲಿ ಪ್ರಧಾನಿಯವರನ್ನೂ ಕರೆಸಬೇಕು. ಇದು ಸೇಡಿನ ರಾಜಕಾರಣ ಎಂದಿದ್ದಾರೆ.




    ಅಕ್ರಮ ಗಣಿಗಾರಿಕೆ ಪ್ರಕರಣ


    ಹೇಮಂತ್ ಸೋರೆನ್‌ಗೆ ನೋಟಿಸ್ ಜಾರಿಯಾದ ನಂತರ ರಾಜಕೀಯ ವಲಯದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿದಚೆ. ವಾಸ್ತವವಾಗಿ, ಪ್ರತಿಪಕ್ಷಗಳು ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸುತ್ತಿದೆ. ಈ ವಿಚಾರದಲ್ಲಿ ಇಡಿ ಈಗಾಗಲೇ ಕ್ರಮ ಕೈಗೊಂಡಿದೆ. ಈ ಹಿಂದೆ 47 ಕಡೆ ದಾಳಿ ನಡೆಸಲಾಗಿತ್ತು. ಈ ವೇಳೆ ಇಡಿ 5.34 ಕೋಟಿ ರೂಪಾಯಿ ವಶಪಡಿಸಿಕೊಂಡಿತ್ತು. 13.32 ಕೋಟಿ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್, 30 ಕೋಟಿ ಮೌಲ್ಯದ ಐದು ಸ್ಟೋನ್ ಕ್ರಷರ್‌ಗಳು, ಎರಡು ಟ್ರಕ್‌ಗಳು ಮತ್ತು ಎರಡು ಎಕೆ 47 ಅಸಾಲ್ಟ್ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.


    ಇದನ್ನೂ ಓದಿ: Biofuel- ಲೀಟರ್​ಗೆ 27 ರೂ, ಮೈಲೇಜು ಸೂಪರ್; ಇದು ಪಾಚಿ-ಆಧಾರಿತ ಜೈವಿಕ ಇಂಧನ


    5000 ಪುಟಗಳ ಚಾರ್ಜ್‌ಶೀಟ್


    ಮೇ 2022 ರಲ್ಲಿ, ಆಗಿನ IAS ಅಧಿಕಾರಿ (ಈಗ ಅಮಾನತುಗೊಳಿಸಲಾಗಿದೆ) ಮತ್ತು ಮಾಜಿ ಜಾರ್ಖಂಡ್ ಗಣಿಗಾರಿಕೆ ಕಾರ್ಯದರ್ಶಿ ಪೂಜಾ ಸಿಂಘಾಲ್ ಅವರನ್ನು MGNREGA ನಿಧಿಯ ದುರುಪಯೋಗಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಸಿಂಘಾಲ್ ಒಳಗೊಂಡ MGNREGA ನಿಧಿ ಹಗರಣಕ್ಕೆ ಸಂಬಂಧಿಸಿದಂತೆ ED 5000 ಪುಟಗಳ ಚಾರ್ಜ್‌ಶೀಟ್ ಅನ್ನು ಸಲ್ಲಿಸಿತ್ತು. ಗಮನಾರ್ಹ ಸಂಗತಿಯೆಂದರೆ, ಇದೇ ಪ್ರಕರಣದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮಾಜಿ ಖಜಾಂಚಿ ರವಿ ಕೇಜ್ರಿವಾಲ್ ಅವರನ್ನೂ ಇಡಿ ಪ್ರಶ್ನಿಸಿತ್ತು.

    Published by:Precilla Olivia Dias
    First published: