YES Bank Crisis: ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್ ನಿವಾಸದ ಮೇಲೆ ಇಡಿ ದಾಳಿ

ನಷ್ಟದಲ್ಲಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್​ (ಡಿಎಚ್​​ಎಫ್​​ಎಲ್​​) ಜೊತೆ ಯೆಸ್​​ ಬ್ಯಾಂಕ್​ ವ್ಯವಹಾರ ನಡೆಸಿದೆ ಎಂಬ ಆರೋಪದ ಮೇಲೆ ರಾಣಾ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಯೆಸ್​ ಬ್ಯಾಂಕ್ ಡಿಎಚ್​​ಎಫ್​ಎಲ್​​ಗೆ ನೀಡಿದ ಸಾಲಗಳು ಕೆಟ್ಟ ಸಾಲಗಳಾಗಿ (NPA - ನಾನ್​ ಪರ್ಫಾರ್ಮಿಂಗ್​​ ಅಸೆಟ್ಸ್​​) ಆಗಿ ಮಾರ್ಪಟ್ಟಿವೆ ಎನ್ನಲಾಗಿದೆ.

Latha CG | news18-kannada
Updated:March 7, 2020, 8:04 AM IST
YES Bank Crisis: ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್ ನಿವಾಸದ ಮೇಲೆ ಇಡಿ ದಾಳಿ
ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್​​
  • Share this:
ನವದೆಹಲಿ(ಮಾ.07): ಕೆಟ್ಟ ಸಾಲಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಯೆಸ್​​ ಬ್ಯಾಂಕ್​​ನ್ನು ಆರ್​ಬಿಐ ತನ್ನ ಸುಪರ್ದಿಗೆ ಪಡೆದ ಬೆನ್ನಲ್ಲೇ, ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್​ ನಿವಾಸದ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದೆ.

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮುಂಬೈನಲ್ಲಿರುವ ಕಪೂರ್ ಮನೆ ಮೇಲೆ ಇಡಿ ಅಧಿಕಾರಿಗಳು ನಿನ್ನೆ ರಾತ್ರಿ ದಾಳಿ ನಡೆಸಿದ್ದಾರೆ. ಮುಂಬೈನ ಸಮುದ್ರ ಮಹಲ್​ ಪ್ರದೇಶದಲ್ಲಿರುವ ಕಪೂರ್​ ಮನೆ ಮೇಲೆ ದಾಳಿ ನಡೆಸಿದ ಬಳಿಕ ಕೇಂದ್ರ ತನಿಖಾ ಸಂಸ್ಥೆಯು ರಾಣಾ ಕಪೂರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

YES Bank Crisis: ಯೆಸ್ ಬ್ಯಾಂಕ್ ಬಿಕ್ಕಟ್ಟು; ಫೋನ್ ಪೇಗೆ ಸಂಕಷ್ಟ; ಸ್ವಿಗ್ಗಿ, ಫ್ಲಿಪ್​ಕಾರ್ಟ್ ವಹಿವಾಟಿಗೂ ತೊಂದರೆ; ಗೂಗಲ್ ಪೇ, ಪೇಟಿಎಂ ಅಬಾಧಿತ

ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಕಪೂರ್​ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಕಾರ್ಪೋರೇಟ್​ ಸಂಸ್ಥೆಯೊಂದಕ್ಕೆ ಸಾಲ ನೀಡಿರುವ ಸಂಬಂಧ ಮತ್ತು ಅವರ ಪತ್ನಿಯ ಖಾತೆಗಳಲ್ಲಿ ಲಂಚ ಆರೋಪ(ಕಿಕ್​ ಬ್ಯಾಕ್​) ಕೇಳಿ ಬಂದ ಹಿನ್ನೆಲೆ ಇಡಿ ಅಧಿಕಾರಿಗಳು ಕಪೂರ್​ ಮನೆ ಮೇಲೆ ದಾಳಿ ನಡೆಸಿ ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ, ಇನ್ನೂ ಹಲವು ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಷ್ಟದಲ್ಲಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್​ (ಡಿಎಚ್​​ಎಫ್​​ಎಲ್​​) ಜೊತೆ ಯೆಸ್​​ ಬ್ಯಾಂಕ್​ ವ್ಯವಹಾರ ನಡೆಸಿದೆ ಎಂಬ ಆರೋಪದ ಮೇಲೆ ರಾಣಾ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಯೆಸ್​ ಬ್ಯಾಂಕ್ ಡಿಎಚ್​​ಎಫ್​ಎಲ್​​ಗೆ ನೀಡಿದ ಸಾಲಗಳು ಕೆಟ್ಟ ಸಾಲಗಳಾಗಿ (NPA - ನಾನ್​ ಪರ್ಫಾರ್ಮಿಂಗ್​​ ಅಸೆಟ್ಸ್​​) ಆಗಿ ಮಾರ್ಪಟ್ಟಿವೆ ಎನ್ನಲಾಗಿದೆ.

ಅಧಿಕಾರಿಗಳು, ಸಿಬ್ಬಂದಿ ಯಥಾಪ್ರಕಾರ ಕಾರ್ಯನಿರ್ವಹಿಸಲಿದ್ದಾರೆ; ಯೆಸ್ ಬ್ಯಾಂಕ್ ಪುನಶ್ಚೇತನ ಕರಡಿನಲ್ಲಿ ಆರ್​ಬಿಐ ಸ್ಪಷ್ಟನೆ
First published:March 7, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading