ರಾಬರ್ಟ್ ವಾದ್ರಾ ಆಪ್ತರ ಮೂರು ಸ್ಥಳಗಳ ಮೇಲೆ ಇ.ಡಿ. ರೇಡ್

4 ವರ್ಷಗಳಿಂದ ಇವರಿಗೆ ಯಾವ ಸಾಕ್ಷಿಯೂ ಸಿಕ್ಕಿಲ್ಲ. ಈಗ ಸುಳ್ಳು ಸಾಕ್ಷ್ಯ ಸೃಷ್ಟಿಸಲು ರೇಡ್ ಮಾಡಿದ್ಧಾರೆ ಎಂದು ರಾಬರ್ಟ್ ವಾದ್ರಾ ಅವರ ವಕೀಲರು ಆರೋಪ ಮಾಡಿದ್ದಾರೆ.

Vijayasarthy SN | news18india
Updated:December 7, 2018, 7:29 PM IST
ರಾಬರ್ಟ್ ವಾದ್ರಾ ಆಪ್ತರ ಮೂರು ಸ್ಥಳಗಳ ಮೇಲೆ ಇ.ಡಿ. ರೇಡ್
ರಾಬರ್ಟ್ ವಾದ್ರಾ
Vijayasarthy SN | news18india
Updated: December 7, 2018, 7:29 PM IST
ನವದೆಹಲಿ(ಡಿ. 07): ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ಆಪ್ತರಿಗೆ ಸೇರಿದ ಮೂರು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ತಂಡಗಳು ಶುಕ್ರವಾರ ದಾಳಿ ನಡೆಸಿವೆ. ಬಿಕಾನೆರ್ ಲ್ಯಾಂಡ್ ಡೀಲ್ ಅವ್ಯವಹಾರದ ತನಿಖೆ ನಡೆಸುತ್ತಿರುವ ಅಧಿಕಾರಿಯ ಮುಂದೆ ಹಾಜರಾಗುವಂತೆ ವಾದ್ರಾ ಅವರಿಗೆ ಇ.ಡಿ. ಮೂರನೇ ಬಾರಿ ಸಮನ್ಸ್ ಕಳುಹಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ವಾದ್ರಾ ಒಡೆತನಕ್ಕೆ ಸೇರಿದ ಸ್ಕೈ ಲೈಟ್ ಹಾಸ್ಪಿಟಾಲಿಟಿ ಸಂಸ್ಥೆಯು ರಾಜಸ್ಥಾನದ ಬಿಕನೇರ್​ನಲ್ಲಿ ಗ್ರಾಮಸ್ಥರ ಪುನರ್ವಸತಿಗೆಂದು ಇದ್ದ ಜಮೀನನ್ನು ಮೋಸದಿಂದ ದಕ್ಕಿಸಿಕೊಂಡ ಆರೋಪ ಇದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕಳುಹಿಸಿದ ಮೂರೂ ಸಮನ್ಸ್​ಗಳಿಗೂ ವಾದ್ರಾ ಸ್ಪಂದಿಸಿಲ್ಲವೆನ್ನಲಾಗಿದೆ.

ದಿಲ್ಲಿಯಲ್ಲಿ ಇ.ಡಿ. ರೇಡ್ ಮಾಡಿದ ರಾಬರ್ಟ್ ವಾದ್ರಾ ಅವರ ಆ ಮೂವರು ಆಪ್ತರು ಯಾರೆಂದು ಇನ್ನೂ ಗೊತ್ತಾಗಿಲ್ಲ. ಆದರೆ, ಡಿಫೆನ್ಸ್ ಡೀಲ್​ನಲ್ಲಿ ಕಮಿಷನ್ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಈ ಮೂವರ ಸ್ಥಳಗಳ ಮೇಲೆ ದಾಳಿ ನಡೆದಿರುವುದು ತಿಳಿದುಬಂದಿದೆ.

ಇವತ್ತು ಮೂರು ಸ್ಥಳಗಳ ಮೇಲೆ ನಡೆದ ಇ.ಡಿ. ರೇಡ್ ಬಗ್ಗೆ ವಾದ್ರಾ ವಕೀಲರು ಸಂಶಯ ವ್ಯಕ್ತಪಡಿಸಿದ್ದಾರೆ. ನಾಲ್ಕು ವರ್ಷಗಳಿಂದ ತನಿಖೆ ನಡೆಸಿ ಏನೂ ಸಾಕ್ಷ್ಯಗಳು ಸಿಕ್ಕಿಲ್ಲ. ಈಗ ರೇಡ್ ನಾಟಕವಾಡಿ ಸುಳ್ಳು ಸಾಕ್ಷಿಗಳನ್ನ ಹುಟ್ಟುಹಾಕಲಾಗುತ್ತಿದೆ. ಕಟ್ಟಡದಿಂದ ಎಲ್ಲರನ್ನೂ ಹೊರಗೆ ಕಳುಹಿಸಿ ಲಾಕ್ ಮಾಡಿಕೊಂಡು ಒಳಸೇರಿದ್ದಾರೆ. ಇದರಲ್ಲೇನೋ ಸಂಚಿದೆ ಎಂದು ವಾದ್ರಾ ಪರ ವಕೀಲರು ಆರೋಪಿಸಿದ್ದಾರೆ.

ಐದು ರಾಜ್ಯಗಳಲ್ಲಿ ಸೋಲಿನ ಮುಖಭಂಗವಾಗುವ ಸೂಚನೆ ಸಿಕ್ಕುತ್ತಿದ್ದಂತೆಯೇ ಬಿಜೆಪಿಯು ಸೇಡು ತೀರಿಸಿಕೊಳ್ಳಲು ಇಂತಹ ಕೆಟ್ಟ ಆಟ ಆಡುತ್ತಿದೆ. ಇಂತಹ ಬೆದರಿಕೆಗಳಿಗೆ ಕಾಂಗ್ರೆಸ್ ಪಕ್ಷ ಜಗ್ಗುವುದಿಲ್ಲ. ಜನರ ಅಭಿಪ್ರಾಯವನ್ನೂ ಬದಲಿಸಲು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷವು ಹೇಳಿದೆ.
First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...