Delhi Politics: ದೆಹಲಿ ಸರ್ಕಾರದ ಅಬಕಾರಿ ನೀತಿ; ದೇಶದ 35 ಸ್ಥಳಗಳ ಮೇಲೆ ಇಡಿ ದಾಳಿ

ಪ್ರಸ್ತುತ ಎಎಪಿಯ ಯಾವುದೇ ನಾಯಕನನ್ನೇ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿಲ್ಲ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೊತೆಗೆ ದಾಳಿಗಳು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಒಳಗೊಂಡಿಲ್ಲ ಎಂದು ಖಚಿತಪಡಿಸಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

  • Share this:
    ದೆಹಲಿ: ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಸರ್ಕಾರದ ಭಾರೀ ವಿವಾದದ ನಂತರ ರದ್ದುಪಡಿಸಿದ ಮದ್ಯ ನೀತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ದೇಶಾದ್ಯಂತ 35 ಸ್ಥಳಗಳಲ್ಲಿ ಮನಿ ಲಾಂಡರಿಂಗ್​ಗೆ ಸಂಬಂಧಿಸಿದಂತೆ ಶೋಧ ನಡೆಸುತ್ತಿದೆ. ದೆಹಲಿ, ನೋಯ್ಡಾ, ಗುರ್ಗಾಂವ್, ಮುಂಬೈ, ಚೆನ್ನೈ, ಚಂಡೀಗಢ ಮತ್ತು ಜಲಂಧರ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಸರ್ಕಾರವು ಈಗ ರದ್ದುಗೊಳಿಸಿರುವ ಅಬಕಾರಿ ನೀತಿಯಡಿಯಲ್ಲಿ (Delhi Excise Policy Case) ತೊಡಗಿರುವ ವಿವಿಧ ಮಾರಾಟಗಾರರು, ವಿತರಕರು ಮತ್ತು ಮಧ್ಯವರ್ತಿಗಳ ಮೇಲೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.

    ಸಿಬಿಐ ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ನಮೂದಿಸಲಾದ ವ್ಯಕ್ತಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಪ್ರಸ್ತುತ ಎಎಪಿಯ ಯಾವುದೇ ನಾಯಕನನ್ನೇ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿಲ್ಲ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೊತೆಗೆ ದಾಳಿಗಳು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಒಳಗೊಂಡಿಲ್ಲ ಎಂದು ಖಚಿತಪಡಿಸಿದ್ದಾರೆ.

    ಸಿಬಿಐ ಎಫ್​ಐಆರ್ ಆಧರಿಸಿ ತನಿಖೆ
    ಇಡಿ ಪ್ರಕರಣವು ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್‌ಐಆರ್ ಆಧರಿಸಿದೆ. ಎಫ್‌ಐಆರ್‌ನಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ನಂಬರ್ ಒನ್ ಆರೋಪಿ ಎಂದು ಹೆಸರಿಸಲಾಗಿದೆ.

    ಸಿಬಿಐನ ಎಫ್‌ಐಆರ್ ಅನ್ನು ಐಪಿಸಿಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 477-ಎ (ಖಾತೆಗಳ ಸುಳ್ಳು) ಅಡಿಯಲ್ಲಿ ದಾಖಲಿಸಲಾಗಿದೆ. ಮದ್ಯದ ಉದ್ಯಮಿಗಳಿಗೆ 30 ಕೋಟಿ ವಿನಾಯಿತಿ ನೀಡಲಾಗಿದೆ ಎಂಬ ಆರೋಪ ಅವರ ಮೇಲಿದೆ. ಪರವಾನಗಿ ಹೊಂದಿರುವವರಿಗೆ ಅವರ ಸ್ವಂತ ಇಚ್ಛೆಯ ಪ್ರಕಾರ ವಿಸ್ತರಣೆಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ನೀತಿ ನಿಯಮಗಳನ್ನು ಮಾಡಲಾಗಿದೆ.

    ಸ್ವಂತ ಇಚ್ಛೆಯಂತೆ ವಿಸ್ತರಿಸಲು ಅನುಮತಿ ಆರೋಪ
    ಅಲ್ಲದೆ ಮದ್ಯದ ಉದ್ಯಮಿಗಳಿಗೆ 30 ಕೋಟಿ ರೂಪಾಯಿ ವಿನಾಯಿತಿ ನೀಡಲಾಗಿದ್ದು, ಪರವಾನಗಿ ಹೊಂದಿರುವವರಿಗೆ ಅವರ ಸ್ವಂತ ಇಚ್ಛೆಯಂತೆ ವಿಸ್ತರಣೆ ಮಾಡಲು ಅನುಮತಿ ನೀಡಲಾಗಿದೆ ಎಂದು ಆರೋಪ ಕೇಳಿಬಂದಿದೆ.

    ಇದನ್ನೂ ಓದಿ: Ant Attack: ಇರುವೆ ದಾಳಿಗೆ ಊರು ಬಿಟ್ಟ ಜನರು! ಹಿಂದೆಂದೂ ಆಗಿರದ ವಿಚಿತ್ರ ಸಮಸ್ಯೆಯಿಂದ ಕಂಗಾಲು

    ಜಾರಿ ನಿರ್ದೇಶನಾಲಯ ದಾಳಿ ನಡೆಸಿರುವ ಸ್ಥಳಗಳಲ್ಲಿ, ಪ್ರಕರಣದ ಆರೋಪಿಯಾಗಿರುವ ಇಂಡೋಸ್ಪಿರಿಟ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹೇಂದ್ರು ಅವರ ಜೋರ್ ಬಾಗ್ ನಿವಾಸವೂ ಸೇರಿದೆ ಎಂದು ಮೂಲಗಳು ತಿಳಿಸಿವೆ.

    ಬಿಜೆಪಿಯಿಂದ ಗಂಭೀರ ಆರೋಪ
    ಭಾರತೀಯ ಜನತಾ ಪಕ್ಷ  ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ 'ಹಗರಣ'ದ "ಕಿಂಗ್‌ಪಿನ್" ಎಂದು ಆರೋಪಿಸಿದೆ. ಅಲ್ಲದೇ ಭ್ರಷ್ಟಾಚಾರದ ಹುನ್ನಾರ ಬಹಿರಂಗಗೊಳ್ಳಲಾರಂಭಿಸಿದ್ದು ಶೀಘ್ರವೇ ಅವರ ಕೈಗೆ ಕೋಳ ಬೀಳಲಿದೆ ಎಂದಿದೆ. ಪತ್ರಿಕಾಗೋಷ್ಠಿಯಲ್ಲಿ ಕೇಜ್ರೀವಾಲ್ ವಿರುದ್ಧ ಕಿಡಿ ಕಾರಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಕೋವಿಡ್ -19 ಪೀಡಿತ ಜನರಿಗೆ ಸಹಾಯ ಬೇಕಾದಾಗ ಕೇಜ್ರಿವಾಲ್ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: Arshdeep Singh: ಅರ್ಶದೀಪ್ ಸಿಂಗ್ ಕ್ಯಾಚ್ ಬಿಟ್ಟಿದ್ದನ್ನೇ ಬಳಸಿ ಭಾರತವನ್ನು ಒಡೆಯಲು ಯತ್ನಿಸಿದ ಪಾಕ್

    "ಅಬಕಾರಿ ನೀತಿ 'ಹಗರಣ'ದ ಬೇರುಗಳು ಭ್ರಷ್ಟ ಕೇಜ್ರಿವಾಲ್ ಅವರ ಮನೆ ಬಾಗಿಲಿನವರೆಗೆ ಹೋಗಿವೆ. ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ಯಾವುದೇ ಭ್ರಷ್ಟರನ್ನು ಬಿಡಲಾಗುವುದಿಲ್ಲ" ಎಂದು ಭಾಟಿಯಾ ಹೇಳಿದರು, "ಇದು ಕೇವಲ 1 ಕೋಟಿ ರೂಪಾಯಿಗಳ ಸಣ್ಣ ಹಗರಣ" ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿದ್ದಾರೆ.
    Published by:guruganesh bhat
    First published: