ಪಿ. ಚಿದಂಬರಂ ಜಾಮೀನು ತೀರ್ಪಿನ ವೇಳೆ ದೆಹಲಿ ಹೈಕೋರ್ಟ್​ ಯಡವಟ್ಟು: ಆಕಸ್ಮಿಕ ತಪ್ಪು ಸರಿಪಡಿಸಿ ಎಂದು ಇಡಿ ಮನವಿ

ದೆಹಲಿ ಮೂಲದ ವಕೀಲ ರೋಹಿತ್ ಟಂಡನ್​​ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ನಿರಾಕರಿಸಿ ಸುಪ್ರೀಂಕೋರ್ಟ್​ ನೀಡಿದ್ದ ಆದೇಶದ ಪ್ಯಾರಗಳನ್ನೇ ಚಿದಂಬರಂ ಪ್ರಕರಣದಲ್ಲೂ ನ್ಯಾಯಮೂರ್ತಿಗಳು ಬಳಸಿದ್ದರು.

news18-kannada
Updated:November 18, 2019, 6:28 PM IST
ಪಿ. ಚಿದಂಬರಂ ಜಾಮೀನು ತೀರ್ಪಿನ ವೇಳೆ ದೆಹಲಿ ಹೈಕೋರ್ಟ್​ ಯಡವಟ್ಟು: ಆಕಸ್ಮಿಕ ತಪ್ಪು ಸರಿಪಡಿಸಿ ಎಂದು ಇಡಿ ಮನವಿ
ದೆಹಲಿ ಮೂಲದ ವಕೀಲ ರೋಹಿತ್ ಟಂಡನ್​​ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ನಿರಾಕರಿಸಿ ಸುಪ್ರೀಂಕೋರ್ಟ್​ ನೀಡಿದ್ದ ಆದೇಶದ ಪ್ಯಾರಗಳನ್ನೇ ಚಿದಂಬರಂ ಪ್ರಕರಣದಲ್ಲೂ ನ್ಯಾಯಮೂರ್ತಿಗಳು ಬಳಸಿದ್ದರು.
  • Share this:
ನವದೆಹಲಿ(ನ.18): ಐಎನ್​ಎಕ್ಸ್​ ಮೀಡಿಯಾ ಪ್ರಕರಣ ಸಂಬಂಧ ಮತ್ತೆ ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದೆ. ನ.15ನೇ ತಾರೀಕಿನಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂಗೆ ಜಾಮೀನು ನಿರಾಕರಿಸಿ ಹೊರಡಿಸಿರುವ ಆದೇಶದಲ್ಲಾದ ದೋಷ ಸರಿಪಡಿಸುವಂತೆ ಇಡಿ ನ್ಯಾಯಲಯಕ್ಕೆ ಮನವಿ ಸಲ್ಲಿಸಿದೆ.

ಮೂರು ದಿನಗಳ ಹಿಂದೆ ಐಎನ್​ಎಕ್ಸ್​ ಮೀಡಿಯಾ ಖಾಸಗಿ ಲೇವಾದೇವಿ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಜಾಮೀನು ಅರ್ಜಿ ದೆಹಲಿ ಹೈಕೋರ್ಟ್​​ ತಿರಸ್ಕರಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ಚಿದಂಬರಂಗೆ ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಲಯ ಅಭಿಪ್ರಾಯಪಟ್ಟಿತ್ತು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಸುರೇಶ್ ಕೈಟ್ ನೇತೃತ್ವದ ನ್ಯಾಯಪೀಠ ಹೊರಡಿಸಿದ ಆದೇಶದಲ್ಲಿ ಆಕಸ್ಮಿಕ ತಪ್ಪೊಂದಾಗಿದೆ. ಈ ತಪ್ಪು ಸರಿಪಡಿಸಿ ಎಂದು ನ್ಯಾಯಲಯದ ಗಮನಕ್ಕೆ ಜಾರಿ ನಿರ್ದೇಶನಾಲಯ ತಂದಿದೆ.

ನ್ಯಾಯಮೂರ್ತಿ ಸುರೇಶ್ ಅವರು ತಮ್ಮ ಆದೇಶದಲ್ಲಿ ಬೇರೆ ಪ್ರಕರಣದ ಅಂಶಗಳನ್ನು ಉಲ್ಲೇಖಿಸಿದ್ದರು. ದೆಹಲಿ ಮೂಲದ ವಕೀಲ ರೋಹಿತ್ ಟಂಡನ್​​ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ನಿರಾಕರಿಸಿ ಸುಪ್ರೀಂಕೋರ್ಟ್​ ನೀಡಿದ್ದ ಆದೇಶದ ಪ್ಯಾರಗಳನ್ನೇ ಚಿದಂಬರಂ ಪ್ರಕರಣದಲ್ಲೂ ನ್ಯಾಯಮೂರ್ತಿಗಳು ಬಳಸಿದ್ದರು. ಇದೀಗ ಇಡಿ ಟಂಡನ್ ಪ್ರಕರಣಕ್ಕೂ ಚಿದಂಬರಂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಹೀಗಾಗಿ ನ್ಯಾಯಲಯ ಚಿದಂಬರಂ ಜಾಮೀನು ವಿಚಾರದಲ್ಲಿ ನೀಡಿದ ತೀರ್ಪಿನ ಪ್ರಮಾದ ಸರಿಪಡಿಸುವಂತೆ ಇಡಿ ಹೇಳಿದೆ.

ಇದನ್ನೂ ಓದಿ: ನಮ್ಮ ಹಾದಿ ನಮ್ಮದು: ‘ಹಾಗಾಗಿ ಶಿವಸೇನೆ-ಬಿಜೆಪಿ ತಮ್ಮ ತಮ್ಮ ದಾರಿ ನೋಡಿಕೊಳ್ಳಲಿ‘ ಎಂದ ಶರದ್​​​ ಪವಾರ್​​​

ಏನಿದು ಪ್ರಕರಣ?: 2017ರ ಮೇ 15ರಂದು ಐಎನ್​ಎಕ್ಸ್​ ಮಿಡಿಯಾ ಖಾಸಗಿ ಲೇವಾದೇವಿ ಪ್ರಕರಣ ಚಿದಂಬರಂ ವಿರುದ್ಧ ದಾಖಲಾಗಿತ್ತು. ಐಎನ್​ಎಕ್ಸ್​ ಮೀಡಿಯಾ ಸಂಸ್ಥೆ ವಿದೇಶಿ ಮೂಲಗಳಿಂದ ರೂ. 305 ಕೋಟಿಯನ್ನು 2007ರಲ್ಲಿ ಸ್ವೀಕರಿಸಿತ್ತು. ಈ ವೇಳೆ ಚಿದಂಬರಂ ಕೇಂದ್ರದ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಪ್ರಭಾವವನ್ನು ಬಳಸಿಕೊಂಡು ಅವ್ಯವಹಾರ ನಡೆಸಲಾಗಿದೆ ಎಂಬ ಗಂಭೀರ ಆರೋಪ ಅವರ ಮೇಲಿದೆ.
---------
First published: November 18, 2019, 5:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading