ಏರ್​ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಚಿದಂಬರಂ ಮತ್ತು ಅವರ ಮಗನಿಗೆ ನೀಡಿರುವ ಜಾಮೀನು ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಇ.ಡಿ

ಏರ್​ಸೆಲ್​-ಮ್ಯಾಕ್ಸಿಸ್​ ಡೀಲ್​ಗೆ ಅಂದಿನ ಹಣಕಾಸು ಮಂತ್ರಿ ಪಿ. ಚಿದಂಬರಂ ಸಂಪುಟ ಸಭೆಯ ಅನುಮತಿ ಪಡೆಯದೆ ಗ್ರೀನ್​ ಸಿಗ್ನಲ್​ ನೀಡಿದ್ದರು. ಇದು ಸುಮಾರು 3500 ಕೋಟಿ ಒಪ್ಪಂದವಾಗಿದೆ ಎಂದು ಜಾರಿ ನಿರ್ದೇಶನಾಲಯದ ಆರೋಪ ಮಾಡಿದೆ. ಈ ಆರೋಪದ ಮೇಲೆ ಕಾರ್ತಿ ಚಿದಂಬರಂ ಮತ್ತು ಚಿದಂಬರಂ ವಿರುದ್ಧ ಸಿಬಿಐ ಮತ್ತು ಇ.ಡಿ. ತನಿಖೆ ನಡೆಸುತ್ತಿದೆ.

HR Ramesh | news18-kannada
Updated:October 10, 2019, 4:19 PM IST
ಏರ್​ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಚಿದಂಬರಂ ಮತ್ತು ಅವರ ಮಗನಿಗೆ ನೀಡಿರುವ ಜಾಮೀನು ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಇ.ಡಿ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ: ಏರ್​ಸೆಲ್​ ಮ್ಯಾಕ್ಸಿಸ್​ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಅವರ ಮಗ ಕಾರ್ತಿ ಚಿದಂಬರಂ ಅವರಿಗೆ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನನ್ನು ರದ್ದು ಮಾಡುವಂತೆ ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್​ಗೆ ಮನವಿ ಮಾಡಿದೆ.

ಏರ್​ಸೆಲ್ ಮ್ಯಾಕ್ಸಿಸ್​ ಪ್ರಕರಣದಲ್ಲಿ ಪಿ.ಚಿದಂಬರಂ ಮತ್ತು ಅವರ ಮಗ ಕಾರ್ತಿ ಚಿದಂಬರಂ ಅವರಿಗೆ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 5ರಂದು ಜಾಮೀನು ನೀಡಿತ್ತು. ಇದೀಗ ಈ ಆದೇಶ ಪ್ರಶ್ನೆ ಮಾಡಿ, ಜಾರಿ ನಿರ್ದೇಶನಾಲಯ ಹೈಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿ ವಿಚಾರಣೆ ಬಹುಶಃ ಶುಕ್ರವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಏನಿದು ಪ್ರಕರಣ?

ಯುಪಿಎ ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಚಿದಂಬರಂ ತಮ್ಮ ವ್ಯಾಪ್ತಿಯನ್ನು ಮೀರಿ ಏರ್​ಸೆಲ್​ ಮ್ಯಾಕ್ಸಿಸ್​ಗೆ ಪರವಾನಗಿ ನೀಡಿದ್ದರು. ಈ ಮೂಲಕ ಹಲವು ಖಾಸಗಿ ವ್ಯಕ್ತಿಗಳಿಗೆ ಸಹಾಯ ಮಾಡಿದ್ದರು, ನಂತರ ಕಿಕ್​ ಬ್ಯಾಕ್​ ಪಡೆದಿದ್ದರು ಎನ್ನಲಾಗಿತ್ತು. ಏರ್​ಸೆಲ್​-ಮ್ಯಾಕ್ಸಿಸ್​ ಡೀಲ್​ಗೆ ಅಂದಿನ ಹಣಕಾಸು ಮಂತ್ರಿ ಪಿ. ಚಿದಂಬರಂ ಸಂಪುಟ ಸಭೆಯ ಅನುಮತಿ ಪಡೆಯದೆ ಗ್ರೀನ್​ ಸಿಗ್ನಲ್​ ನೀಡಿದ್ದರು. ಇದು ಸುಮಾರು 3500 ಕೋಟಿ ಒಪ್ಪಂದವಾಗಿದೆ ಎಂದು ಜಾರಿ ನಿರ್ದೇಶನಾಲಯದ ಆರೋಪ ಮಾಡಿದೆ. ಈ ಆರೋಪದ ಮೇಲೆ ಕಾರ್ತಿ ಚಿದಂಬರಂ ಮತ್ತು ಚಿದಂಬರಂ ವಿರುದ್ಧ ಸಿಬಿಐ ಮತ್ತು ಇ.ಡಿ. ತನಿಖೆ ನಡೆಸುತ್ತಿದೆ.

ಇದನ್ನು ಓದಿ: ಚಿದಂಬರಂ- ಕಾರ್ತಿ ವಿರುದ್ಧ ಚಾರ್ಜ್​ಶೀಟ್​: ಸಿಬಿಐ ಮೇಲೆ ಒತ್ತಡ ಹೇರಿದ್ದಾರೆಂದ ಮಾಜಿ ಸಚಿವ


First published: October 10, 2019, 4:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading