ಜೆಟ್ ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯೆಲ್ ಮನೆ ಮೇಲೆ ಇಡಿ ರೇಡ್

ನರೇಶ್ ಗೋಯಲ್ ಮತ್ತಿತರರು ಮುಂಬೈನ ಟ್ರಾವೆಲ್ ಏಜೆನ್ಸಿಯನ್ನು ವಂಚಿಸಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಸಂಬಂಧವೇ ಇವತ್ತು ನರೇಶ್ ಗೋಯಲ್ ಮತ್ತಿತರರ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ರೇಡ್ ಮಾಡಿದ್ದು.

news18
Updated:March 5, 2020, 1:48 PM IST
ಜೆಟ್ ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯೆಲ್ ಮನೆ ಮೇಲೆ ಇಡಿ ರೇಡ್
ನರೇಶ್ ಗೋಯಲ್
  • News18
  • Last Updated: March 5, 2020, 1:48 PM IST
  • Share this:
ಮುಂಬೈ(ಮಾ. 05): ಅನುಮಾನಾಸ್ಪದ ಹಣ ವಹಿವಾಟು ನಡೆಸಿದ ಆರೋಪದ ಮೇಲೆ ಜೆಟ್ ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯೆಲ್ ಹಾಗೂ ಇತರ ಕೆಲವರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ಮುಂಬೈ ಪೊಲೀಸರು ಇತ್ತೀಚೆಗಷ್ಟೇ ನರೇಶ್ ಗೋಯಲ್ ವಿರುದ್ಧ ಎಫ್​ಐಆರ್ ದಾಖಲಿಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಇಡಿ ತನಿಖಾ ಸಂಸ್ಥೆಯು ಅಕ್ರಮ ಹಣ ವಹಿವಾಟು ನಿಯಂತ್ರಣ ಕಾಯ್ದೆ ಅಡಿ ನರೇಶ್ ಗೋಯಲ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದೆ. ಹಾಗೆಯೇ, ಮುಂಬೈನಲ್ಲಿರುವ ಗೋಯಲ್ ಮನೆಯಲ್ಲಿ ಇಡಿ ರೇಡ್ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ನರೇಶ್ ಗೋಯಲ್ ಮೇಲೆ ಇಡಿ ರೇಡ್ ಆಗಿದ್ದು ಇದೇ ಮೊದಲಲ್ಲ. ಕಳೆದ ವರ್ಷದಲ್ಲಿ ವಿದೇಶ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ) ಅಡಿ ದಾಖಲಿಸಲಾಗಿದ್ದ ಪ್ರಕರಣದಲ್ಲಿ ಗೋಯಲ್ ಮತ್ತವರ ಕುಟುಂಬ ಸದಸ್ಯರ ವಿವಿಧ ಸ್ಥಳಗಳ ಮೇಲೆ ಇಡಿ ದಾಳಿಗಳಾಗಿದ್ದವು.

ನರೇಶ್ ಗೋಯಲ್ ಅವರ ಒಡೆತನದಲ್ಲಿ 19 ಕಂಪನಿಗಳಿದ್ದವು. ಇವುಗಳಿಂದ ಅನುಮಾನಾಸ್ಪದ ವಹಿವಾಟು ನಡೆದಿರುವ ಶಂಕೆ ಹೊಂದಿದ ಜಾರಿ ನಿರ್ದೇಶನಾಲಯವು ಈ ನಿಟ್ಟಿನಲ್ಲಿ ತನಿಖೆ ನಡಸುತ್ತಿದೆ. ಅಸ್ತಿತ್ವದಲ್ಲೇ ಇಲ್ಲದ ವಿದೇಶೀ ಸಂಸ್ಥೆಗಳೊಂದಿಗೆ ಜೆಟ್ ಏರ್​ವೇಸ್ ವಿಮಾನದ ಗುತ್ತಿಗೆ ವಹಿವಾಟು ನಡೆದಿದೆ. ಈ ಮೂಲಕ ಗೋಯಲ್ ಒಡೆತನದ ಕಂಪನಿಗಳಿಂದ ಗಳಿಸಲಾದ ಅಕ್ರಮ ಹಣವನ್ನು ಸಕ್ರಮ ಮಾಡಲಾಗಿದೆ ಎಂಬುದು ಇಡಿ ಅನುಮಾನ.

ಇದನ್ನೂ ಓದಿ: ಸೆಕ್ಸ್ ಮಾಡಿದರೆ ಸೋಂಕು ತಗುಲುತ್ತಾ? ಸೋಂಕಿತರ ಬಳಿ ಇದ್ದರೆ ಹರಡುತ್ತಾ? ಇಲ್ಲಿವೆ ಕೊರೊನಾ ವೈರಸ್ ಬಗ್ಗೆ ಸಾಮಾನ್ಯ ಅನುಮಾನಗಳು

ಗೋಯಲ್ ಒಡೆತನದ ಜೆಟ್ ಏರ್​ವೇಸ್ ಸಂಸ್ಥೆ ನಷ್ಟದ ಕಾರಣವೊಡ್ಡಿ ಕಳೆದ ವರ್ಷದ ಏಪ್ರಿಲ್​ನಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

ಇನ್ನು, ಮುಂಬೈ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವು ಟ್ರಾವೆಲ್ ಸಂಸ್ಥೆಗೆ ಮಾಡಿದ ವಂಚನೆಗೆ ಸಂಬಂಧಿಸಿದ್ದಾಗಿದೆ. ನರೇಶ್ ಗೋಯಲ್ ಮತ್ತಿತರರು ಮುಂಬೈನ ಟ್ರಾವೆಲ್ ಏಜೆನ್ಸಿಯನ್ನು ವಂಚಿಸಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಸಂಬಂಧವೇ ಇವತ್ತು ನರೇಶ್ ಗೋಯಲ್ ಮತ್ತಿತರರ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ರೇಡ್ ಮಾಡಿದ್ದು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:March 5, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading