HOME » NEWS » National-international » ED BEGINS PROBE AGAINST AMAZON FOR ALLEGED FEMA VIOLATIONS SNVS

ED Probe - ವಿದೇಶೀ ವಿನಿಯಮ ನಿಯಮಗಳ ಉಲ್ಲಂಘನೆ ಆರೋಪ: ಅಮೇಜಾನ್ ವಿರುದ್ಧ ಇಡಿ ತನಿಖೆ

ಫ್ಯೂಚರ್ ಗ್ರೂಪ್ ಮತ್ತು ರಿಲಾಯನ್ಸ್ ಸಂಸ್ಥೆ ನಡುವಿನ ಒಪ್ಪಂದವನ್ನು ಆಕ್ಷೇಪಿಸುತ್ತಿರುವ ಅಮೇಜಾನ್ ಸಂಸ್ಥೆಯಿಂದ ಫೆಮಾ ಉಲ್ಲಂಘನೆಯಾಗಿದೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಇಡಿ ತನಿಖೆ ನಡೆಸುತ್ತಿದೆ.

news18
Updated:February 18, 2021, 1:21 PM IST
ED Probe - ವಿದೇಶೀ ವಿನಿಯಮ ನಿಯಮಗಳ ಉಲ್ಲಂಘನೆ ಆರೋಪ: ಅಮೇಜಾನ್ ವಿರುದ್ಧ ಇಡಿ ತನಿಖೆ
ಸಾಂದರ್ಭಿಕ ಚಿತ್ರ
  • News18
  • Last Updated: February 18, 2021, 1:21 PM IST
  • Share this:
ನವದೆಹಲಿ(ಫೆ. 18): ವಿದೇಶೀ ವಿನಿಯಮ ಕಾನೂನು ಮತ್ತು ನಿಯಮಗಳ ಉಲ್ಲಂಘನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇ-ಕಾಮರ್ಸ್ ದೈತ್ಯ ಅಮೇಜಾನ್ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ ಎಂದು ಮೂಲಗಳನ್ನ ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವಿದೇಶೀ ವಿನಿಮಯ ನಿಯಂತ್ರಣ ಕಾಯ್ದೆಯ (FEMA) ವಿವಿಧ ಸೆಕ್ಷನ್ ಅಡಿ ಈ ತನಿಖೆ ನಡೆಯುತ್ತಿರುವುದು ತಿಳಿದುಬಂದಿದೆ.

ಒಪ್ಪಂದಗಳನ್ನ ದುರ್ಬಳಕೆ ಮಾಡಿಕೊಂಡು ಫ್ಯೂಚರ್ ರೀಟೇಲ್ ಸಂಸ್ಥೆಯನ್ನು ಅಮೇಜಾನ್ ಸಂಸ್ಥೆ ನಿಯಂತ್ರಣದಲ್ಲಿಟ್ಟುಕೊಳ್ಳಲು ಯತ್ನಿಸಿರುವುದು ವಿದೇಶೀ ನೇರ ಹೂಡಿಕೆ ಮತ್ತು ಫೆಮಾದ ನಿಯಮಾವಳಿಯ ಉಲ್ಲಂಘನೆಯಾಗಿದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿತ್ತು. ಹಾಗೂ ಅಮೇಜಾನ್ ಮತ್ತು ಫ್ಲಿಪ್​ಕಾರ್ಟ್​ನಂತ ಇಕಾಮರ್ಸ್ ಕಂಪನಿಗಳಿಂದ ನಿಯಮಗಳ ಉಲ್ಲಂಘನೆಯಾಗಿರುವುದು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ವಾಣಿಜ್ಯ ಇಲಾಖೆಯು ಈ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಡಿಗೆ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಹೇಳಿದೆ.

ಆದರೆ, ಅಮೇಜಾನ್ ಸಂಸ್ಥೆ ಈ ತನಿಖೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದೆಯಾದರೂ ಮೂಲಗಳ ಪ್ರಕಾರ ಇಡೀ ಪ್ರಕರಣವನ್ನು ಇಡಿ ತನಿಖೆ ನಡೆಸಲಿದ್ದು, ಅಮೇಜಾನ್ ಹಾಗೂ ಸಂಬಂಧಿತ ಇತರ ಸಂಸ್ಥೆಗಳಿಂದ ಮಾಹಿತಿ ಕಲೆಹಾಕಲಿದೆ ಎಂದು ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ಗಡಿಯಲ್ಲಿ ಚೀನಾವನ್ನು ಹತಾಶೆಗೆ ನೂಕಿತ್ತು ಆ ಒಂದು ಬೆಳವಣಿಗೆ; ಸೇನಾಧಿಕಾರಿ ಲೆ. ಜ. ಜೋಶಿ ಬಿಚ್ಚಿಟ್ಟಿದ್ಧಾರೆ ಸತ್ಯ

ಫ್ಲಿಪ್​ಕಾರ್ಟ್ ಮತ್ತು ಅಮೇಜಾನ್​ನಂತಹ ಪ್ರಮುಖ ಇ-ಕಾಮರ್ಸ್ ಕಂಪನಿಗಳು ಅಕ್ರಮ ನಡೆಗಳ ಮೂಲಕ ಫೆಮಾ ಹಾಗೂ ಎಫ್​ಡಿಐ ನಿಯಮಗಳನ್ನ ಉಲ್ಲಂಘಿಸಿವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಸಂಘಟನೆಯು ಡಿಪಿಐಐಟಿ ಬಳಿ ಆರೋಪ ಮಾಡಿತ್ತು.

ಇನ್ನು, ಫ್ಯೂಚರ್ ಗ್ರೂಪ್ ಮತ್ತು ರಿಲಾಯನ್ಸ್ ರೀಟೇಲ್ ಮಧ್ಯೆ ಕಳೆದ ವರ್ಷ ನಡೆದ 24,713 ಕೋಟಿ ರೂ ಮೊತ್ತದ ಒಪ್ಪಂದಕ್ಕೆ ಅಮೇಜಾನ್ ಸಂಸ್ಥೆ ವಿರೋಧ ವ್ಯಕ್ತಪಡಿಸಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಅಮೇಜಾನ್​ನಿಂದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
Published by: Vijayasarthy SN
First published: February 18, 2021, 1:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories