ಅಕ್ರಮ ಲೇವಾದೇವಿ ಆರೋಪ; ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರ 78 ಕೋಟಿ ಆಸ್ತಿ ಜಪ್ತಿ ಮಾಡಿದ ಇಡಿ

ಧೂತ್ ಅವರು ತಮ್ಮ ಸುಪ್ರೀಂ ಎನಜಿ ಕಂಪನಿ ಮೂಲಕ ನುಪವರ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. 2009 ಮೇ 1ರಂದು ಚಂದಾ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇವರಿಗೆ ಅಕ್ರಮವಾಗಿ ಸಾಲ ಮಂಜೂರು ಮಾಡಿದ್ದರು ಎಂದು ಸಿಬಿಐ ಆರೋಪಿಸಿದೆ.

HR Ramesh | news18-kannada
Updated:January 10, 2020, 5:01 PM IST
ಅಕ್ರಮ ಲೇವಾದೇವಿ ಆರೋಪ; ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರ 78 ಕೋಟಿ ಆಸ್ತಿ ಜಪ್ತಿ ಮಾಡಿದ ಇಡಿ
ಚಂದಾ ಕೊಚ್ಚಾರ್​​
  • Share this:
ನವದೆಹಲಿ: ಅಕ್ರಮ ಲೇವಾದೇವಿ ಪ್ರಕರಣ ಸಂಬಂಧ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್ ಹಾಗೂ ಅವರ ಕುಟುಂಬದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಮುಂಬೈನಲ್ಲಿರುವ ಫ್ಲಾಟ್ ಮತ್ತು ಅವರ ಗಂಡ ದೀಪಕ್ ಕೊಚ್ಚಾರ್ ಕಂಪನಿಯ ಕೆಲ ಆಸ್ತಿ ಸೇರಿ ಒಟ್ಟು 78 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಚಂದಾ ಕೊಚ್ಚಾರ್, ದೀಪಕ್ ಕೊಚ್ಚಾರ್, ವಿಡಿಯೋಕಾಮ್ ಪ್ರಮೋಟರ್ ವೇಣುಗೋಪಾಲ್ ಧೂತ್ ಮತ್ತು ಇತರರು ಕಾರ್ಪೊರೆಟ್ ಕಂಪನಿಗಳಿಗೆ ಐಸಿಐಸಿಐ ಬ್ಯಾಂಕ್​ನಿಂದ 1875 ಕೋಟಿ ರೂ. ಸಾಲವನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪದ ಮೇಲೆ ಅಕ್ರಮ ಹಣ ತಡೆ ಕಾಯ್ದೆ (ಪಿಎಂಎಲ್​ಎ) ಅಡಿ ಕಳೆದ ವರ್ಷ ಜಾರಿ ನಿರ್ದೇಶನಾಲಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ತನಿಖೆ ಆರಂಭಿಸಿತ್ತು. ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ದಾಖಲಿಸಿದ್ದ ಎಫ್​ಐಆರ್ ಆಧಾರದ ಮೇಲೆ ಇ.ಡಿ. ಈ ಕ್ರಮ ತೆಗೆದುಕೊಂಡಿತು.

ಸಿಬಿಐ ಎಫ್​ಐಆರ್​ನಲ್ಲಿ ಈ ಎಲ್ಲ ಮೂವರು ಮತ್ತು ಧೂತ್ ಅವರ ವಿಡಿಯೋಕಾನ್ ಇಂಟರ್​ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ವಿಐಇಎಲ್​) ಹಾಗೂ ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ (ವಿಐಎಲ್​)ಅನ್ನು ಪ್ರಕರಣದಲ್ಲಿ ಹೆಸರಿಸಿದೆ. ಅಲ್ಲದೇ, ಧೂತ್ ಅವರು ಸಂಸ್ಥಾಪಕರಾಗಿರುವ ಸುಪ್ರೀಂ ಎನರ್ಜಿ ಮತ್ತು ದೀಪಕ್ ಕೊಚ್ಚಾರ್ ನಿಯಂತ್ರಣದಲ್ಲಿರುವ ನುಪವರ್ ರಿನ್ಯೂಯೆಬಲ್ಸ್ ಕಂಪನಿಯನ್ನು ಎಫ್​ಐಆರ್​ನಲ್ಲಿ ತನಿಳಾ ಸಂಸ್ಥೆ ಉಲ್ಲೇಖಿಸಿದೆ.

ಧೂತ್ ಅವರು ತಮ್ಮ ಸುಪ್ರೀಂ ಎನಜಿ ಕಂಪನಿ ಮೂಲಕ ನುಪವರ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. 2009 ಮೇ 1ರಂದು ಚಂದಾ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇವರಿಗೆ ಅಕ್ರಮವಾಗಿ ಸಾಲ ಮಂಜೂರು ಮಾಡಿದ್ದರು ಎಂದು ಸಿಬಿಐ ಆರೋಪಿಸಿದೆ.

ಇದನ್ನು ಓದಿ: ಅವಧಿಗೂ ಮುನ್ನವೇ ಚಂದಾ ಕೊಚ್ಚಾರ್ ರಾಜೀನಾಮೆ ; ಮುಂದಿನ ಸಿಇಒ ಆಗಿ ಸಂದೀಪ್ ಬಕ್ಷಿ ನೇಮಕ

First published:January 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading