ಪಿಎನ್​​ಬಿ ಹಗರಣ: ನೀರವ್​​ ಮೋದಿಗೆ ಸೇರಿದ 637 ಕೋಟಿ ರೂ ಆಸ್ತಿ ‘ಇಡಿ’ಯಿಂದ ವಶ..!

ಭಾರತ, ಬ್ರಿಟನ್​​, ನ್ಯೂಯಾರ್ಕ್ ಸೇರಿದಂತೆ ಸುಮಾರು ನಾಲ್ಕು ದೇಶಗಳಲ್ಲಿ ನೀರವ್​​ ಮೋದಿಗೆ ಸೇರಿದ ಐಷಾರಾಮಿ ಅಪಾರ್ಟ್​​ಮೆಂಟ್ಸ್, ದುಬಾರಿ ಬೆಲೆಯ ಚಿನ್ನಾಭರಣ ಹಾಗೂ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


Updated:October 1, 2018, 4:02 PM IST
ಪಿಎನ್​​ಬಿ ಹಗರಣ: ನೀರವ್​​ ಮೋದಿಗೆ ಸೇರಿದ 637 ಕೋಟಿ ರೂ ಆಸ್ತಿ ‘ಇಡಿ’ಯಿಂದ ವಶ..!
ನೀರವ್ ಮೋದಿ

Updated: October 1, 2018, 4:02 PM IST
ನ್ಯೂಸ್​-18 ಕನ್ನಡ

ನವದೆಹಲಿ(ಅ.01): ಪಂಜಾಬ್​​​ ನ್ಯಾಷನಲ್​​ ಬ್ಯಾಂಕ್​ಗೆ ಸಾವಿರಾರೂ ಕೋಟಿ ರೂಪಾಯಿಗಳು ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಉದ್ಯಮಿ ನೀರವ್​​ ಮೋದಿಗೆ ಸೇರಿದ ಒಟ್ಟು 637 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ದೇಶ-ವಿದೇಶಗಳಲ್ಲಿನ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಭಾರತ, ಬ್ರಿಟನ್​​, ನ್ಯೂಯಾರ್ಕ್ ಸೇರಿದಂತೆ ಸುಮಾರು ನಾಲ್ಕು ದೇಶಗಳಲ್ಲಿ ನೀರವ್​​ ಮೋದಿಗೆ ಸೇರಿದ ಐಷಾರಾಮಿ ಅಪಾರ್ಟ್​​ಮೆಂಟ್ಸ್, ದುಬಾರಿ ಬೆಲೆಯ ಚಿನ್ನಾಭರಣ ಹಾಗೂ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ಧಾರೆ. ಅಲ್ಲದೇ ಮತ್ತಷ್ಟು ದೇಶಗಳಲ್ಲಿ ತನಗೆ ಸೇರಿದ ಆಸ್ತಿ ಎಷ್ಟಿದೆ? ಎಂದು ಶೋಧಕಾರ್ಯ ಮುಂದುವರೆಸಿದ್ದಾರೆ.

ನೀರವ್​​ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ ಬೃಹತ್ ಮೊತ್ತದ ಅವ್ಯವಹಾರ ನಡೆಸಿದ್ದ. ಸುಮಾರು 1.77 ಬಿಲಿಯನ್ ಡಾಲರ್ (ಸುಮಾರು 11,360 ಕೋಟಿ ರೂ) ಮೊತ್ತದಷ್ಟು ವಂಚನೆ ಎಸಗಿದ್ಧ. ನೀರವ್ ಮೋದಿ ಕಂಪನಿಗಳಿಗೆ ನೀಡಲಾಗಿದ್ದ ಮುಚ್ಚಳಿಕೆ ಪತ್ರಗಳು ಪರಿಶೀಲಿಸಿದಾಗ ಈ ಹಗರಣ ಬೆಳಕಿಗೆ ಬಂದಿದೆ.

ಒಮ್ಮೆ ನೀರವ್​​ ಮೋದಿಗೆ ಸೇರಿದ ಕಂಪನಿಗಳು ಈ ಅಕ್ರಮ ಪತ್ರ ಇಟ್ಟುಕೊಂಡು ಪಿಎನ್​ಬಿ ಬ್ಯಾಂಕಿಗೆ ಹೋಗಿ ಮತ್ತೆ ಸಾಲ ಪಡೆಯಲು ಯತ್ನಿಸುತ್ತಾರೆ. ಆದರೆ, ಇದಕ್ಕೆ ಒಪ್ಪದ ಬ್ಯಾಂಕ್ ಅಧಿಕಾರಿಗಳು ಶೇ.100ರಷ್ಟು ಕ್ಯಾಷ್ ಮಾರ್ಜಿನ್ ಸಲ್ಲಿಸುವಂತೆ ಹೇಳುತ್ತಾರೆ. ನೀರವ್​​ಗೆ ಮೊದಲೇ ಈ ರೀತಿ ಸಾಲಪಡೆದು ವಂಚಿಸಿದ ಅನುಭವ ಇರುತ್ತದೆ.

ಬ್ಯಾಂಕಿನಲ್ಲಿ ಸಾವಿರಾರೂ ಕೋಟಿ ಅಕ್ರಮವಾಗಿ ಸಾಲ ಪಡೆದಿದ್ದಲ್ಲದೇ, ಮತ್ತೆ ಆಮದು ಪತ್ರ ಬಳಸುವ ಮೂಲಕ ಸಾಲ ಕೇಳಲು ಮುಂದಾಗುತ್ತಾರೆ. ಈ ವೇಳೆ ಹಗರಣದ ಮೊದಲ ಎಳೆಯು ಪಿಎನ್​ಬಿ ಕಣ್ಣಿಗೆ ಬೀಳುತ್ತದೆ. ಇಂಥ ಸಾಲಗಳನ್ನು ನೀಡುವಾಗ ಯಾವ ದಾಖಲೆಗಳನ್ನು ಪಡೆಯಲಾಗಿದೆ ಎಂದು ಹುಡುಕಾಡಿದಾಗ ಪಿಎನ್​ಬಿಗೆ ಯಾವ ದಾಖಲೆಯೂ ಸಿಗುವುದಿಲ್ಲ.
Loading...

ಇನ್ನಷ್ಟು ತನಿಖೆ ಮುಂದುವರೆಸಿದಾಗ 2017ರ ಮೇ ತಿಂಗಳಲ್ಲಿ ನಿವೃತ್ತರಾದ ಗೋಕುಲನಾಥ್ ಶೆಟ್ಟಿ ಅವರ ಕೈವಾಡ ನೀರವ್​​ ಮೋದಿಗೆ ಸಾಲ ನೀಡಿರುವುದರಲ್ಲಿದೆ ಎಂದು ಬ್ಯಾಂಕ್​​ ಅಧಿಕಾರಿಗಳಿಗೆ ಗೊತ್ತಾಗುತ್ತದೆ. ಸೇವೆಯಲ್ಲಿದ್ದಾಗ ಬ್ಯಾಂಕಿನ ವಿದೇಶೀ ವಿನಿಮಯ ಇಲಾಖೆಯ ಆಮದು ಸೆಕ್ಷನ್​ನಲ್ಲಿ ಶೆಟ್ಟಿ ಕೆಲಸ ಮಾಡುತ್ತಿದ್ದರು. ಆಗ ಅವರು ಯಾವುದೇ ದಾಖಲೆ ಪಡೆಯದೇ ಬ್ಯಾಂಕ್​ನಿಂದ ಸಾಲ ನೀಡಿರುತ್ತಾರೆ.

ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಭಾರತ ಸರ್ಕಾರದ ಆದೇಶದ ಮೇರೆಗೆ ಅಂತರಾಷ್ಟ್ರೀಯ ಪೊಲೀಸ್ ಸಂಸ್ಥೆ ಇಂಟರ್​ ಪೋಲ್ ನೀರವ್ ಮೋದಿ ಸಹೋದರಿ ಪುರ್ವಿ ಮೋದಿ ವಿರುದ್ದ ರೆಡ್ ಕಾರ್ನರ್ ನೋಟಿಸ್ ಹೊರಡಿಸುತ್ತದೆ. ಬಳಿಕ ನೀರವ್ ಮೋದಿಗೆ ಸೇರಿದ ಆಸ್ತಿಯನ್ನು ಸುಪ್ರೀಂಕೋರ್ಟ್​ ಆದೇಶದಂತೆ ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಂದಾಗುತ್ತಾರೆ.
First published:October 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626