ಅಕ್ರಮ ಹಣ ವರ್ಗಾವಣೆ ಪ್ರಕರಣ; ಯೆಸ್​ ಬ್ಯಾಂಕ್​ ಸ್ಥಾಪಕ ರಾಣಾ ಕಪೂರ್​ ಬಂಧನ

ರಾಣಾ ಕಾರ್ಪೋರೇಟ್​ ಸಂಸ್ಥೆಗಳಿಗೆ ಲೋನ್​ ನೀಡಿ ಅದರಿಂದ ಕಿಕ್​ಬ್ಯಾಕ್​ ಪಡೆದಿದ್ದಾರೆ ಎನ್ನಲಾಗಿದೆ. ಈ ಕಿಕ್​ಬ್ಯಾಕ್​ ಹಣ ಅವರ ಪತ್ನಿ ಖಾತೆಗೆ ಜಮಾಗೊಂಡಿತ್ತು ಎನ್ನುವುದು ಮೂಲಗಳ ಮಾಹಿತಿ. ಈ ನಿಟ್ಟಿನಲ್ಲಿ ಇಡಿ ತನಿಖೆ ನಡೆಸಲಿದೆ.

news18-kannada
Updated:March 8, 2020, 7:44 AM IST
ಅಕ್ರಮ ಹಣ ವರ್ಗಾವಣೆ ಪ್ರಕರಣ; ಯೆಸ್​ ಬ್ಯಾಂಕ್​ ಸ್ಥಾಪಕ ರಾಣಾ ಕಪೂರ್​ ಬಂಧನ
ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್​​
  • Share this:
ಮುಂಬೈ (ಮಾ.8): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಯೆಸ್​ ಬ್ಯಾಂಕ್​ ಸ್ಥಾಪಕ ರಾಣಾ ಕಪೂರ್​ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಭಾನುವಾರ ಮುಂಜಾನೆ ಬಂಧಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆಕಾಯ್ದೆ ಅಡಿಯಲ್ಲಿ ರಾಣಾ ಅವರನ್ನು ಬಂಧಿಸಲಾಗಿದೆ. ಯೆಸ್​ ಬ್ಯಾಂಕ್​ ಬಿಕ್ಕಟ್ಟು ಉಂಟಾದ ಹಿನ್ನೆಲೆಯಲ್ಲಿ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬ್ಯಾಂಕ್​​ನಲ್ಲಿ ಅಕ್ರಮ ನಡೆದಿದೆ ಎನ್ನಲಾಗಿತ್ತು. ಈ ಕುರಿತ ತನಿಖೆಗೆ ಅವರು ಸರಿಯಾಗಿ ಸ್ಪಂದಿಸುತ್ತಿರಲಿಲ್ಲ ಎನ್ನಲಾಗಿದೆ.

ರಾಣಾ ಕಾರ್ಪೋರೇಟ್​ ಸಂಸ್ಥೆಗಳಿಗೆ ಲೋನ್​ ನೀಡಿ ಅದರಿಂದ ಕಿಕ್​ಬ್ಯಾಕ್​ ಪಡೆದಿದ್ದಾರೆ ಎನ್ನಲಾಗಿದೆ. ಈ ಕಿಕ್​ಬ್ಯಾಕ್​ ಹಣ ಅವರ ಪತ್ನಿ ಖಾತೆಗೆ ಜಮಾಗೊಂಡಿತ್ತು ಎನ್ನುವುದು ಮೂಲಗಳ ಮಾಹಿತಿ. ಈ ನಿಟ್ಟಿನಲ್ಲಿ ಇಡಿ ತನಿಖೆ ನಡೆಸಲಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮುಂಬೈನಲ್ಲಿರುವ ಕಪೂರ್ ಮನೆ ಮೇಲೆ ಇಡಿ ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದರು.

ಇದನ್ನೂ ಓದಿ: YES Bank Crisis: ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್ ನಿವಾಸದ ಮೇಲೆ ಇಡಿ ದಾಳಿ

ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ಯೆಸ್ ಬ್ಯಾಂಕ್​ನಿಂದ ಠೇವಣಿದಾರರು ಗರಿಷ್ಠ 50 ಸಾವಿರ ರೂ ಮಾತ್ರ ಹಿಂಪಡೆಯಬಹುದು ಎಂದು ಹೇಳಿತ್ತು. ಇದರ ಬೆನ್ನಲ್ಲೇ ಯೆಸ್ ಬ್ಯಾಂಕ್ ಗ್ರಾಹಕರು ಗಾಬರಿಗೊಂಡು ಹಣ ತೆಗೆಯಲು ಮುಂದೆ ಬಂದಿದ್ದರು. ಯೆಸ್ ಬ್ಯಾಂಕ್​ನ ಆನ್​ಲೈನ್ ಹಣ ವಹಿವಾಟು ವ್ಯವಸ್ಥೆ ಕೂಡ ಸ್ಥಗಿತಗೊಂಡಿದೆ. ಯೆಸ್ ಬ್ಯಾಂಕ್​ನ ಆನ್​ಲೈನ್ ವ್ಯವಸ್ಥೆಯೊಂದಿಗೆ ಜೋಡಿತಗೊಂಡಿರುವ ಫೋನ್ ಪೇನಲ್ಲೂ ವಹಿವಾಟು ಸ್ಥಗಿತಗೊಂಡಿದೆ. ಈ ಬೆಳವಣಿಗೆ ನಂತರ ರಾಣಾ ಅವರನ್ನು ಬಂಧಿಸಲಾಗಿದೆ.
First published:March 8, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading