ಚಿದಂಬರಂಗೆ ಭಾರೀ ಹಿನ್ನಡೆ: ಇ.ಡಿ. ವಿಚಾರಣೆ ಮತ್ತು ಅಗತ್ಯ ಬಿದ್ದರೆ ಬಂಧನಕ್ಕೂ ಅವಕಾಶ ನೀಡಿದ ಕೋರ್ಟ್​

ಬುಧವಾರ ಜಾರಿ ನಿರ್ದೇಶನಾಲಯದ ಅರ್ಜಿ ಆಲಿಸಿದ ವಿಶೇಷ ನ್ಯಾಯಾಲಯ ತಿಹಾರ್​ ಜೈಲಿನಲ್ಲಿಯೇ ಚಿದಂಬರಂರನ್ನು ವಿಚಾರಣೆಗೆ ಒಳಪಡಿಸಲು ಮತ್ತು ಅಗತ್ಯವಿದ್ದಲ್ಲಿ ಬಂಧಿಸಲು ಅನುಮತಿ ನೀಡಿದೆ

Sharath Sharma Kalagaru | news18-kannada
Updated:October 15, 2019, 4:55 PM IST
  • Share this:
ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಖಾಸಗಿ ಲೇವಾದೇವಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂಗೆ ಮತ್ತೆ ಸಂಕಷ್ಟ ಎದುರಾಗಿದೆ. ಕಳೆದೆರಡು ತಿಂಗಳುಗಳಿಂದ ಜೈಲಿನಲ್ಲೇ ಇರುವ ಚಿದಂಬರಂಗೆ ಜಾಮೀನು ಸಿಗುವ ಸಾಧ್ಯತೆ ಬದಿಗಿರಲಿ ಮತ್ತೆ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ. ಬುಧವಾರ ಸಿಬಿಐ ವಿಶೇಷ ನ್ಯಾಯಾಲಯ ಚಿದಂಬರಂರನ್ನು ವಿಚಾರಣೆಗೆ ಒಳಪಡಿಸಲು ಮತ್ತು ಅಗತ್ಯ ಬಿದ್ದರೆ ಬಂಧಿಸಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ಕೊಟ್ಟಿದೆ. ಈ ಮೂಲಕ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗುವ ಸಾಧ್ಯತೆ ಸೃಷ್ಟಿಯಾಗಿದೆ. 

ಬುಧವಾರ ಜಾರಿ ನಿರ್ದೇಶನಾಲಯದ ಅರ್ಜಿ ಆಲಿಸಿದ ವಿಶೇಷ ನ್ಯಾಯಾಲಯ ತಿಹಾರ್​ ಜೈಲಿನಲ್ಲಿಯೇ ಚಿದಂಬರಂರನ್ನು ವಿಚಾರಣೆಗೆ ಒಳಪಡಿಸಲು ಮತ್ತು ಅಗತ್ಯವಿದ್ದಲ್ಲಿ ಬಂಧಿಸಲು ಅನುಮತಿ ನೀಡಿದೆ.

ಜಾರಿ ನಿರ್ದೇಶನಾಲಯದ ಪರ ಸಾಲಿಸಿಟರ್​ ಜನರಲ್​ ತುಶಾರ್​ ಮೆಹ್ತಾ ವಾದ ಮಂಡಿಸಿ ಚಿಂದಬರಂರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿದ್ದರು. ಸುಪ್ರೀಂ ಕೋರ್ಟ್​ ಕೂಡ ಚಿದಂಬರಂ ಮೇಲಿರುವ ಪ್ರಕರಣ ತನಿಖೆಗೆ ಯೋಗ್ಯ ಎಂದು ಹೇಳಿದೆ, ಈ ಹಿನ್ನೆಲೆಯಲ್ಲಿ ಬಂಧಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಧೀಶ ಅಜಯ್​ ಕುಮಾರ್​ ಕುಹರ್​ಗೆ ತುಶಾರ್​ ಮೆಹ್ತಾ ಮನವಿ ಮಾಡಿದ್ದಾರೆ. ಇದಕ್ಕೆ ಕೋರ್ಟ್​ ಸಮ್ಮತಿಸಿದೆ.

ಐಎನ್​ಎಕ್ಸ್​ ಮೀಡಿಯಾ ಪ್ರಕರಣವೇ ಬೇರೆ ಮತ್ತು ಲೇವಾದೇವಿ ಪ್ರಕರಣವೇ ಬೇರೆ, ಹೀಗಾಗಿ ಚಿದಂಬರಂರನ್ನು ಬಂಧಿಸಿ ತನಿಖೆ ನಡೆಸುವ ಅವಶ್ಯಕತೆ ಇದೆ ಎಂದು ಮೆಹ್ತಾ ವಾದ ಮಂಡಿಸಿದ್ದಾರೆ. ಇದನ್ನು ಚಿದಂಬರಂ ಪರ ವಕೀಲ ಕಪಿಲ್​ ಸಿಬಲ್​ ವಿರೋಧಿಸಿದರಾದರೂ ಕೋರ್ಟ್​ ಮನ್ನಣೆ ನೀಡಲಿಲ್ಲ.

ಐಎನ್​ಎಕ್ಸ್​ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಬಂಧನಕ್ಕೊಳಗಾಗಿದ್ದ ಚಿದಂಬರಂ ಅಕ್ಟೋಬರ್​ 17ರವರೆಗೆ ನ್ಯಾಯಾಂಗ ಬಂಧನ ಅನುಭವಿಸುತ್ತಿದ್ದಾರೆ. ಅದಾದ ನಂತರವೂ ಚಿದಂಬರಂಗೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ಬದಲಾಗಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.
First published:October 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading