ಭಾರತದ ಆರ್ಥಿಕತೆ ತಾನಾಗೇ 5 ಟ್ರಿಲಿಯನ್ ಡಾಲರ್ ಆಗುತ್ತದೆ; ಪ್ರಧಾನಿ ಬೇಕಿಲ್ಲ: ಕೇಂದ್ರದ ಆರ್ಥಿಕ ಗುರಿ ಬಗ್ಗೆ ಚಿದಂಬರಂ ಲೇವಡಿ

“ಶೇ. 12ರಷ್ಟು ಆರ್ಥಿಕ ಬೆಳವಣಿಗೆ ಇದ್ದರೆ ಅದು 6 ವರ್ಷದಲ್ಲಿ ದ್ವಿಗುಣಗೊಳ್ಳುತ್ತದೆ. ಶೇ. 11ರಷ್ಟು ಅಭಿವೃದ್ಧಿ ದರ ಇದ್ದರೆ 7 ವರ್ಷದಲ್ಲಿ ಆರ್ಥಿಕತೆ ಡಬಲ್ ಆಗುತ್ತದೆ” ಎಂಬ ತರ್ಕವನ್ನು ಚಿದಂಬರಮ್ ತಿಳಿಸಿದರು.

Vijayasarthy SN | news18
Updated:July 11, 2019, 6:28 PM IST
ಭಾರತದ ಆರ್ಥಿಕತೆ ತಾನಾಗೇ 5 ಟ್ರಿಲಿಯನ್ ಡಾಲರ್ ಆಗುತ್ತದೆ; ಪ್ರಧಾನಿ ಬೇಕಿಲ್ಲ: ಕೇಂದ್ರದ ಆರ್ಥಿಕ ಗುರಿ ಬಗ್ಗೆ ಚಿದಂಬರಂ ಲೇವಡಿ
ಪಿ. ಚಿದಂಬರಂ
  • News18
  • Last Updated: July 11, 2019, 6:28 PM IST
  • Share this:
ನವದೆಹಲಿ(ಜುಲೈ 11): ಇನ್ನೈದು ವರ್ಷದಲ್ಲಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್(50 ಲಕ್ಷ ಕೋಟಿ) ಡಾಲರ್ ಮೊತ್ತಕ್ಕೆ ತಂದು ನಿಲ್ಲಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಬಜೆಟ್​ನಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ವ್ಯಂಗ್ಯ ಮಾಡಿರುವ ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ. ಚಿದಂಬರಮ್, ಪ್ರಧಾನಿ ಅಥವಾ ಹಣಕಾಸು ಸಚಿವರು ಇಲ್ಲದಿದ್ದರೂ ದೇಶದ ಆರ್ಥಿಕತೆ ಆ ಮಟ್ಟಕ್ಕೆ ಸಹಜವಾಗಿಯೇ ಬರುತ್ತದೆ. ನೀವು ಮಾಡುವ ಕೆಲಸ ಮಾಡುವುದನ್ನು ಬಿಟ್ಟು ಜನರ ದಾರಿ ತಪ್ಪಿಸಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಮಾತನಾಡುತ್ತಿದ್ದ ಪಿ. ಚಿದಂಬರಮ್ ಅವರು ತಮ್ಮ ವಾದಕ್ಕೆ ಅಂಕಿ ಅಂಶಗಳನ್ನ ಉಲ್ಲೇಖಿಸಿದರು.

ಇದನ್ನೂ ಓದಿ: ದೇಶದಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿದೆ; ಲೋಕಸಭಾ ಸೋಲಿನ ಬಳಿಕ ಸಂಸತ್​ನಲ್ಲಿ ರಾಹುಲ್​ ಗಾಂಧಿ ಮೊದಲ ಭಾಷಣ

“ಶೇ. 12ರಷ್ಟು ಆರ್ಥಿಕ ಬೆಳವಣಿಗೆ ಇದ್ದರೆ ಅದು 6 ವರ್ಷದಲ್ಲಿ ದ್ವಿಗುಣಗೊಳ್ಳುತ್ತದೆ. ಶೇ. 11ರಷ್ಟು ಅಭಿವೃದ್ಧಿ ದರ ಇದ್ದರೆ 7 ವರ್ಷದಲ್ಲಿ ಆರ್ಥಿಕತೆ ಡಬಲ್ ಆಗುತ್ತದೆ” ಎಂಬ ತರ್ಕವನ್ನು ಚಿದಂಬರಮ್ ತಿಳಿಸಿದರು.

“1990-91ರಲ್ಲಿ ಭಾರತದ ಆರ್ಥಿಕತೆಯು 32 ಸಾವಿರ ಕೋಟಿ ಡಾಲರ್ ಇತ್ತು. 2003-04ರಲ್ಲಿ ಅದು 61.8 ಸಾವಿರ ಕೋಟಿ ಡಾಲರ್​ಗೆ ಏರಿಕೆಯಾಯಿತು. ನಂತರದ 4 ವರ್ಷದಲ್ಲಿ ಅದು 12.2 ಲಕ್ಷ ಕೋಟಿ ಡಾಲರ್​ಗೆ ಹೋಯಿತು. 2017ರಲ್ಲಿ ಇದೂ ದ್ವಿಗಣವಾಗಿ 24.8 ಲಕ್ಷ ಕೋಟಿ ಡಾಲರ್ ಹಂತ ತಲುಪಿತು. ಇದು ಆರ್ಥಿಕತೆಯ ಸಹಜ ಬೆಳವಣಿಗೆಯಾಗಿದೆ. ಇದನ್ನು ಕಾಂಪೌಂಡಿಂಗ್(ಚಕ್ರೀಕರಣ) ಎಂದು ವಿವರಿಸಲಾಗುತ್ತದೆ. ಹಣದ ವ್ಯವಹಾರ ಮಾಡುವವರಿಗೆ ತಿಳಿಯುವ ಸಾಮಾನ್ಯ ಜ್ಞಾನ ಇದು” ಎಂದು ಪಿ. ಚಿದಂಬರಮ್ ರಾಜ್ಯಸಭೆಯಲ್ಲಿ ತಿಳಿಸಿದರು.

ಇದನ್ನೂ ಓದಿ: ಒಂದು ವೇಳೆ ಮಧ್ಯಸ್ಥಿಕೆ ಸಮಿತಿ ವಿಫಲವಾದರೆ ಜುಲೈ 25ರಿಂದ ಅಯೋಧ್ಯೆ ಪ್ರಕರಣ ವಿಚಾರಣೆ; ಸುಪ್ರೀಂಕೋರ್ಟ್

“5 ಟ್ರಿಲಿಯನ್ ಡಾಲರ್ ಎಂಬುದು ಒಂದು ಸರಣ ಗಣಿತ ಲೆಕ್ಕಾಚಾರ. ಜನರನ್ನ ದಾರಿ ತಪ್ಪಿಸಬೇಡಿ. ವಾಸ್ತವಕ್ಕೆ ಬನ್ನಿ” ಎಂದು ಬಿಜೆಪಿಯ ಕಾಲೆಳೆದರು ಚಿದಂಬರಂ.ಇದೇ ವೇಳೆ, ದೇಶದ ಆರ್ಥಿಕತೆಯು ದುರ್ಬಲವಾಗಿದ್ದು, ಅದನ್ನು ಮೇಲೆತ್ತುವ ಯಾವುದಾದರೂ ಪ್ರಬಲ ಸುಧಾರಣಾ ಕ್ರಮವನ್ನು ತೆಗೆದುಕೊಳ್ಳುವಂತೆ ಚಿದಂಬರಂ ಅವರು ಕೇಂದ್ರ ಸರ್ಕಾರಕ್ಕೆ ತಿಳಿ ಹೇಳಿದರು.

ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್​ನಲ್ಲಿ ಯಾವುದೇ ಸುಧಾರಣಾ ಕ್ರಮ ಬಂದಿಲ್ಲ. ಅವರ ಬಜೆಟ್​ನಲ್ಲಿ ಯಾವ ಸತ್ವವೂ ಇಲ್ಲ. ಆರ್ಥಕತೆ ಸುಧಾರಿಸಲು ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಳ್ಳಬಹುದೆಂದು ನಿರೀಕ್ಷಿಸಿದ್ದೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವರು ಅಭಿಪ್ರಾಯಪಟ್ಟರು.
First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ