ಜನರು ಮದುವೆಯಾಗುತ್ತಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿದೆ; ಕೇಂದ್ರ ಸಚಿವ ಸುರೇಶ್​ ಅಂಗಡಿ

ಕಾಂಗ್ರೆಸ್​ ಸೇರಿದಂತೆ ಅನೇಕ ಪ್ರತಿಪಕ್ಷಗಳು ದೇಶದ ಆರ್ಥಿಕತೆ ಕುಸಿತದ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಿವೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಎತ್ತುವ ಸಾಧ್ಯತೆ ಇದೆ.

Latha CG | news18-kannada
Updated:November 15, 2019, 9:07 PM IST
ಜನರು ಮದುವೆಯಾಗುತ್ತಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿದೆ; ಕೇಂದ್ರ ಸಚಿವ ಸುರೇಶ್​ ಅಂಗಡಿ
ಕೇಂದ್ರ ಸಚಿವ ಸುರೇಶ್ ಅಂಗಡಿ
  • Share this:
ನವದೆಹಲಿ(ನ.15): ದೇಶದ ಆರ್ಥಿಕತೆ ಕುಸಿಯುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಕೇಂದ್ರ ಸಚಿವ ಸುರೇಶ್​ ಅಂಗಡಿ ತಳ್ಳಿ ಹಾಕಿದ್ದಾರೆ. ರೈಲ್ವೆ ನಿಲ್ದಾಣ ಮತ್ತು ಏರ್​​​ಪೋರ್ಟ್​​ಗಳು ಜನರಿಂದ ತುಂಬಿವೆ ಮತ್ತು ಜನರು ಮದುವೆಯಾಗುತ್ತಿದ್ದಾರೆ. ಇದು ದೇಶದ ಆರ್ಥಿಕತೆ ಉತ್ತಮವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. 

ಕೊಲ್ಕತ್ತಾ-ದೆಹಲಿ ನಡುವಿನ ಪಶ್ಚಿಮ ಸರಕು-ಸಾಗಣೆ ಕಾರಿಡಾರ್​​ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಮದುವೆಯಾಗುತ್ತಿದ್ದು, ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಸಮರ್ಥಿಸಿಕೊಂಡರು.

ಪ್ರತೀ ಮೂರು ವರ್ಷಕ್ಕೊಮ್ಮೆ ದೇಶದ ಆರ್ಥಿಕತೆ ಕುಸಿಯುತ್ತದೆ ಆದರೆ ಶೀಘ್ರವೇ ಚೇತರಿಸಿಕೊಳ್ಳುತ್ತದೆ. ಆದರೆ ಕೆಲವು ಜನರು ಪ್ರಧಾನಿ ಮೋದಿಯವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ತೀಸ್ ಹಜಾರಿ ಕೋರ್ಟ್​ ಪ್ರಕರಣ: ಪೊಲೀಸರ ವಿರುದ್ಧ ಬೀದಿಗಿಳಿದ ವಕೀಲರು: ನಾಳೆ ಮುಷ್ಕರಕ್ಕೆ ಕರೆ

"ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಜನರಿಂದ ತುಂಬಿ ತುಳುಕುತ್ತಿವೆ ಮತ್ತು ಜನರು ಮದುವೆಯಾಗುತ್ತಿದ್ದಾರೆ. ಕೆಲವರು ಪ್ರಧಾನಿ ಮೋದಿಯವರ ವ್ಯಕ್ತಿತ್ವವನ್ನು ಹಾಳು ಮಾಡುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ," ಎಂದು ಸುರೇಶ್​ ಅಂಗಡಿ ಕಿಡಿಕಾರಿದರು.

ಕಾಂಗ್ರೆಸ್​ ಸೇರಿದಂತೆ ಅನೇಕ ಪ್ರತಿಪಕ್ಷಗಳು ದೇಶದ ಆರ್ಥಿಕತೆ ಕುಸಿತದ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಿವೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಎತ್ತುವ ಸಾಧ್ಯತೆ ಇದೆ.

ಹೊಸಕೋಟೆ ಉಪಚುನಾವಣೆ: ಎಂಟಿಬಿ ನಾಗರಾಜ್ ಬಳಿ ಇದೆ ಬರೋಬ್ಬರಿ 1 ಸಾವಿರದ 215 ಕೋಟಿ!
First published:November 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ