ಉದ್ಯೋಗ ಹೆಚ್ಚಳಕ್ಕೆ ಒತ್ತು; ಪ್ರಸಕ್ತ ಸಾಲಿನ ಜಿಡಿಪಿ ದರ ಶೇ 7ರಷ್ಟು ಹೆಚ್ಚಾಗುವ ನಿರೀಕ್ಷೆ; ನಿರ್ಮಲಾ ಸೀತಾರಾಮನ್​​

ರಾಜ್ಯಸಭೆಯಲ್ಲಿಂದು ಆರ್ಥಿಕ ಸಮೀಕ್ಷೆ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಆರ್ಥಿಕ ಸಮೀಕ್ಷೆಗಳು 2020ರ ಆರ್ಥಿಕ ವರ್ಷದ ವೇಳೆ ಜಿಡಿಪಿ ದರ ಶೇ 7ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದರು

Seema.R | news18
Updated:July 4, 2019, 4:23 PM IST
ಉದ್ಯೋಗ ಹೆಚ್ಚಳಕ್ಕೆ ಒತ್ತು; ಪ್ರಸಕ್ತ ಸಾಲಿನ ಜಿಡಿಪಿ ದರ ಶೇ 7ರಷ್ಟು ಹೆಚ್ಚಾಗುವ ನಿರೀಕ್ಷೆ; ನಿರ್ಮಲಾ ಸೀತಾರಾಮನ್​​
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​
Seema.R | news18
Updated: July 4, 2019, 4:23 PM IST
ನವದೆಹಲಿ (ಜು.4): ಪ್ರಸಕ್ತ ಸಾಲಿನ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದರ ಶೇ.7ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ

ರಾಜ್ಯಸಭೆಯಲ್ಲಿ ಇಂದು 2019  ಆರ್ಥಿಕ ಸಮೀಕ್ಷೆ ಮಂಡಿಸಿ ಮಾತನಾಡಿದ ಅವರು, ಈ ವರ್ಷ ಜಿಎಸ್​ಟಿ ಕುಸಿತ ಸಾಧ್ಯತೆ ಇದ್ದು,  2019- 2020ರ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ 7ರಷ್ಟು ಹೆಚ್ಚಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2018-19ರ ಸಾಲಿನ ಆಯವ್ಯಯ ಪುಸ್ತಕ


2018-19ರಲ್ಲಿ ವಿತ್ತೀಯ ಕೊರತೆ ಶೇ 5.8 ರಷ್ಟಿದ್ದು, 2017-18ರಲ್ಲಿ ಶೇ 6.4ರಷ್ಟಿತ್ತು ವಿತ್ತೀಯ ಕೊರತೆ ಪರಿಷ್ಕೃತ ಆಯವ್ಯಯದಲ್ಲಿ 3.4ರಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು ಇದು ಸರ್ಕಾರದ ಕಳವಳಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದರು.

ಲೋಕಸಭಾ ಚುನಾವಣೆ ಹಿನ್ನಲೆ ಜನವರಿಯಿಂದ ಮಾರ್ಚ್​ವರೆಗೆ ದೇಶದ ಆರ್ಥಿಕತೆ ಕುಸಿತ ಕಂಡಿತ್ತು. ಆದರೆ, ಮುಂದಿನ ತ್ರೈಮಾಸಿಕ ಅವಧಿಯಲ್ಲಿ  ಆರ್ಥಿಕತೆ ಚೇತರಿಕೆಯಾಗಲಿದೆ, ಈ ಬಾರಿ ಶೇ.6.1ರಷ್ಟು ನಿರುದ್ಯೋಗ ಪ್ರಮಾಣ ಕಡಿಮೆಯಾಗಲಿದ್ದು, ಉದ್ಯೋಗಾವಕಾಶ ಹೆಚ್ಚಿಸಲು ಒತ್ತು ನೀಡಲಾಗಿದೆ. ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಠಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ಸಿದ್ಧಾಂತಗಳ ನಡುವಿನ ಹೋರಾಟ ನಿರಂತರ, ರೈತ-ಬಡವರ ಪರ ನನ್ನ ನಿಲುವು; ರಾಹುಲ್​ ಗಾಂಧಿ!

ಪ್ರಧಾನಿ ನರೇಂದ್ರ ಮೋದಿ 2025ರ ಹೊತ್ತಿಗೆ 5 ಟ್ರಿಲಿಯನ್​ ಡಾಲರ್​ ಆರ್ಥಿಕತೆಯ ಗುರಿಯನ್ನು ಹೊಂದಿದ್ದು, ಇದರ ಸಾಕಾರಕ್ಕೆ ಪ್ರತಿ ವರ್ಷ ಕನಿಷ್ಠ ಶೇ.8ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬೇಕಿದೆ. ಉತ್ಪಾದನಾ ವಲಯವು ಎದುರಿಸುತ್ತಿರುವ ಸಮಸ್ಯೆಗಳಿಂದಾಗಿ ಜಿಡಿಪಿ ಬೆಳವಣಿಗೆಯ ದರ ಕುಸಿತವಾಗಿದೆ ಎಂದು ಸಮೀಕ್ಷೆ ತಿಳಿಸಿದೆ ಎಂದು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Loading...

First published:July 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...