ಸುಧಾರಿಸಲಿದೆ ಭಾರತದ ಆರ್ಥಿಕತೆ?; ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ. 6.5ಕ್ಕೆ ಏರಿಕೆ ಸಾಧ್ಯತೆ

ಸರ್ಕಾರವೇ ಅಂದಾಜು ಮಾಡಿರುವಂತೆ 2019/20ರ ವರ್ಷದಲ್ಲಿ ಜಿಡಿಪಿ ಶೇ. 5ರಷ್ಟು ಮಾತ್ರ ಬೆಳವಣಿಗೆ ಸಾಧಿಸಬಹುದು. 2008ರ ನಂತರ ಇದು ಅತ್ಯಂತ ಕನಿಷ್ಠ ಜಿಡಿಪಿ ಅಭಿವೃದ್ಧಿ ದರವಾಗಿರಲಿದೆ. ಈಗ ಆರ್ಥಿಕ ತಜ್ಞರು 2021ರ ಜಿಡಿಪಿ ಲೆಕ್ಕಾಚಾರ ಹಾಕಿದ್ದು, ಆರ್ಥಿಕತೆ ಚೇತರಿ ಕಾಣಲಿದೆ ಎಂದು ಹೇಳಿದ್ದಾರೆ.

news18-kannada
Updated:February 10, 2020, 7:23 PM IST
ಸುಧಾರಿಸಲಿದೆ ಭಾರತದ ಆರ್ಥಿಕತೆ?; ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ. 6.5ಕ್ಕೆ ಏರಿಕೆ ಸಾಧ್ಯತೆ
ಸಾಂದರ್ಭಿಕ ಚಿತ್ರ
  • Share this:
ಮುಂಬೈ (ಜ.31): ಕಳೆದ ಕೆಲ ವರ್ಷಗಳಿಂದ ಇಳಿಕೆ ಗತಿಯಲ್ಲಿ ಸಾಗುತ್ತಿದ್ದ ದೇಶದ ಆರ್ಥಿಕತೆ ಕೊನೆಗೂ ಚೇತರಿಕೆ ಕಾಣುವ ಲಕ್ಷಣ ಗೋಚರವಾಗಿದೆ. 2020-21ರ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.6.5ಗೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸರ್ಕಾರವೇ ಅಂದಾಜು ಮಾಡಿರುವಂತೆ 2019-20ರ ವರ್ಷದಲ್ಲಿ ಜಿಡಿಪಿ ಶೇ. 5ರಷ್ಟು ಮಾತ್ರ ಬೆಳವಣಿಗೆ ಸಾಧಿಸಬಹುದು. 2008ರ ನಂತರ ಇದು ಅತ್ಯಂತ ಕನಿಷ್ಠ ಜಿಡಿಪಿ ಅಭಿವೃದ್ಧಿ ದರವಾಗಿರಲಿದೆ. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾದ ಹಿನ್ನೆಲೆಯಲ್ಲಿ ಆ ವರ್ಷ ಶೇ. 3.1ರಷ್ಟು ಮಾತ್ರ ಜಿಡಿಪಿ ಹೆಚ್ಚಳವಾಗಿತ್ತು.  ಈಗ ಆರ್ಥಿಕ ತಜ್ಞರು 2021ರ ಜಿಡಿಪಿ ಲೆಕ್ಕಾಚಾರ ಹಾಕಿದ್ದು, ಆರ್ಥಿಕತೆ ಚೇತರಿ ಕಾಣಲಿದೆ ಎಂದು ಹೇಳಿದ್ದಾರೆ.

ಈ ಬಾರಿ ದೇಶದ ಜನತೆಗೆ ಸರ್ಕಾರ ಖುಷಿ ಸುದ್ದಿ ನೀಡುವ ಸಾಧ್ಯತೆ ಇದೆ. ಕಳೆದ ವರ್ಷ ಕಾರ್ಪೋರೇಟ್​ ಟ್ಯಾಕ್ಸ್​​ ಕಡಿತಗೊಳಿಸಿತ್ತು. ಅಂತೆಯೇ ಈ ಬಾರಿ ವೈಯಕ್ತಿಕ ತೆರಿಗೆ ಮೊತ್ತ ಕಡಿಮೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. 2018-19ರಲ್ಲಿ ಜಿಡಿಪಿ ದರ ಶೇ. 6.8 ಇತ್ತು.

ಇದನ್ನೂ ಓದಿ: ಈ ವರ್ಷ ಜಿಡಿಪಿ ಅಭಿವೃದ್ಧಿ ದರ ಶೇ. 5: ಸರ್ಕಾರ ಅಂದಾಜು

ಜಿಡಿಪಿ ದರದಲ್ಲಿ ಗಮನಾರ್ಹ ಇಳಿಕೆ ಆರಂಭವಾಗಿದ್ದು ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ. ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಕೇವಲ ಶೇ. 4.5 ರಷ್ಟು ಮಾತ್ರ ಬೆಳವಣಿಗೆ ಹೊಂದಲು ಶಕ್ಯವಾಗಿತ್ತು. ಕೇಂದ್ರ ಸರ್ಕಾರ ಜಾರಿಗೊಳಿಸಿದ ನೋಟ್ ಬ್ಯಾನ್, ಜಿಎಸ್​ಟಿ ಇತ್ಯಾದಿ ಕ್ರಮಗಳು ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿವೆ ಎಂದು ಅನೇಕ ಅರ್ಥಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ

First published: January 31, 2020, 10:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading