ಭಾರತದ ಆರ್ಥಿಕ ಕುಸಿತ ಒಂದು ಅಚ್ಚರಿ: ಮುಂದಿನ ವರ್ಷ ಚೇತರಿಕೆ ಸಾಧ್ಯತೆ: ಐಎಂಎಫ್

ಹಣಕಾಸು ವಲಯದಲ್ಲಿರುವ ದೌರ್ಬಲ್ಯವನ್ನು ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಅಭಿವೃದ್ಧಿಗೆ ಆಧಾರವಾಗಿರುವ ವಲಯಗಳಿಗೆ ಪುಷ್ಟಿ ನೀಡುವ ಕೆಲಸ ಮಾಡುತ್ತಿದೆ. ಇದರಿಂದ ಆರ್ಥಿಕತೆಯ ವೇಗಕ್ಕೆ ಸಹಾಯಕವಾಗಲಿದೆ ಎಂದು ಐಎಂಎಫ್​ ಅಧಿಕಾರಿ ಹೇಳಿದ್ದಾರೆ.

Vijayasarthy SN | news18
Updated:October 23, 2019, 7:36 PM IST
ಭಾರತದ ಆರ್ಥಿಕ ಕುಸಿತ ಒಂದು ಅಚ್ಚರಿ: ಮುಂದಿನ ವರ್ಷ ಚೇತರಿಕೆ ಸಾಧ್ಯತೆ: ಐಎಂಎಫ್
ಐಎಂಎಫ್
  • News18
  • Last Updated: October 23, 2019, 7:36 PM IST
  • Share this:
ಸಿಂಗಾಪುರ(ಅ. 23): ಆರ್ಥಿಕ ಮುಗ್ಗಟ್ಟಿನಿಂದ ಆತಂಕಗೊಂಡಿರುವ ಭಾರತೀಯರಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಮಾಧಾನದ ಮಾಹಿತಿ ನೀಡಿದೆ. ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆ ವೇಗ ಹೆಚ್ಚಿಸಿಕೊಳ್ಳಲಿದೆ. ಕಾರ್ಪೊರೇಟ್ ತೆರಿಗೆ ಕಡಿತ ಸೇರಿದಂತೆ ವಿವಿಧ ಕ್ರಮಗಳ ನೆರವಿನಿಂದ ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7ರ ವೇಗದಲ್ಲಿ ಪ್ರಗತಿ ಸಾಧಿಸಬಹುದು ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ. ಈ ವರ್ಷ ಭಾರತದ ಆರ್ಥಿಕತೆ ಶೇ. 6.1ರಷ್ಟು ಬೆಳವಣಿಗೆ ಸಾಧಿಸಬಹುದು ಎಂದು ಅಂದಾಜಿಸಿದ್ದ ಐಎಂಎಫ್ ಮುಂದಿನ ವರ್ಷಕ್ಕೆ ಇದು ಇನ್ನಷ್ಟು ಹೆಚ್ಚಾಗಬಹುದು ಎಂದಿದೆ.

ಹಣಕಾಸು ವಲಯದಲ್ಲಿರುವ ದೌರ್ಬಲ್ಯವನ್ನು ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಅಭಿವೃದ್ಧಿಗೆ ಆಧಾರವಾಗಿರುವ ವಲಯಗಳಿಗೆ ಪುಷ್ಟಿ ನೀಡುವ ಕೆಲಸ ಮಾಡುತ್ತಿದೆ. ಇದರಿಂದ ಆರ್ಥಿಕತೆಯ ವೇಗಕ್ಕೆ ಸಹಾಯಕವಾಗಲಿದೆ ಎಂದು ಐಎಂಎಫ್​ನ ಏಷ್ಯಾ ಪೆಸಿಫಿಕ್ ವಿಭಾಗದ ಉಪ ನಿರ್ದೇಶಕ ಜೋನಾತನ್ ಓಸ್ಟ್ರಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೇಂದ್ರದ RCEP ನಡೆಯಿಂದ ರೈತರಿಗೆ ಮರಣ ಶಾಸನ: ಸಿದ್ದರಾಮಯ್ಯ

ಭಾರತದ ಆರ್ಥಿಕತೆ ದಿಢೀರ್ ಕುಸಿದಿರುವುದು ಐಎಂಎಫ್​ಗೂ ಅಚ್ಚರಿ ತಂದಿದೆಯಂತೆ: “ಆರ್ಥಿಕ ಹಿಂಜರಿತಕ್ಕೆ ಯಾವುದೋ ಒಂದಲ್ಲ, ಹಲವು ಕಾರಣಗಳಿವೆ. ಬ್ಯಾಂಕೇತರ ಹಣಕಾಸು ವಲಯ, ಗ್ರಾಮೀಣ ವಲಯಗಳಲ್ಲಿ ಹಿನ್ನಡೆಯಾಗಿರುವುದು; ಕಾರ್ಪೊರೇಟ್ ವಲಯದ ಅನಿಶ್ಚಿತ ಸ್ಥಿತಿ ಹೀಗೆ ವಿವಿಧ ಕಾರಣಗಳಿಂದಾಗಿ ಆರ್ಥಿಕ ಹಿನ್ನಡೆಯಾಗಿರಬಹುದು” ಎಂದು ಐಎಂಎಫ್ ಅಧಿಕಾರಿ ಹೇಳಿದ್ದಾರೆ.

ದೇಶದಲ್ಲಿ ವಿರೋಧ ಎದುರಿಸುತ್ತಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರತ್ವ (ಆರ್​ಇಸಿಪಿ) ಮತ್ತು ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಮಾತನಾಡಿದ ಐಎಂಎಫ್ ಅಧಿಕಾರಿ, ಭಾರತದ ಆರ್ಥಿಕತೆಗೆ ಪುಷ್ಟಿ ನೀಡಿರುವ ಸೇವಾ ವಲಯವನ್ನು ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಒಳಗೊಳ್ಳುವುದು ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

“ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಕೇವಲ ವಸ್ತುಗಳ ವ್ಯಾಪಾರವಲ್ಲ, ಸೇವಾ ವ್ಯಾಪಾರವನ್ನೂ ಒಳಗೊಳ್ಳುವುದು ಮುಖ್ಯ. ಸೇವಾ ವಲಯವು ಭಾರತ ಸೇರಿದಂತೆ ದಕ್ಷಿಣ ಏಷ್ಯಾ ಆರ್ಥಿಕತೆಗಳಿಗೆ ಒಳ್ಳೆಯ ಪುಷ್ಟಿ ನೀಡಬಲ್ಲುದು” ಎಂದವರು ತಿಳಿಸಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 23, 2019, 7:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading