• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Indian Economy: ಭಾರತದಲ್ಲಿ ಇನ್ನೂ ತಾಂಡವವಾಡುತ್ತಿರುವ ಆರ್ಥಿಕ ಅಸಮಾನತೆ, ಇದಕ್ಕೆ ಶ್ರೀಮಂತರೇ ಕಾರಣ

Indian Economy: ಭಾರತದಲ್ಲಿ ಇನ್ನೂ ತಾಂಡವವಾಡುತ್ತಿರುವ ಆರ್ಥಿಕ ಅಸಮಾನತೆ, ಇದಕ್ಕೆ ಶ್ರೀಮಂತರೇ ಕಾರಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತ ಆರ್ಥಿಕತೆಯಲ್ಲಿ ಮುಂದುವರಿಯುತ್ತಿರುವ ದೇಶ ಎಂದೆನಿಸಿದರೂ ಇಂದಿಗೂ ಆಹಾರ, ವಸತಿಗಾಗಿ ಸಾಕಷ್ಟು ಜನ ಪರದಾಡುತ್ತಿದ್ದಾರೆ. ಶ್ರೀಮಂತರು ಹಾಗೂ ಬಡವರ ನಡುವಿನ ಸಮಸ್ಯೆ ಹೆಚ್ಚಾಗುತ್ತಿದ್ದು, ದೇಶದಲ್ಲಿ ಈ ಅಸಮಾನತೆ ಹೆಚ್ಚುತ್ತಲೇ ಇದೆ ಎಂದು ವಿಶ್ವ ಸಂಸ್ಥೆಯ ಅಧ್ಯಯನಗಳಿಂದ ತಿಳಿದುಬಂದಿದೆ.

ಮುಂದೆ ಓದಿ ...
  • Share this:

ಭಾರತ ಆರ್ಥಿಕತೆಯಲ್ಲಿ (Indian Economy) ಮುಂದುವರಿಯುತ್ತಿರುವ ದೇಶ ಎಂದೆನಿಸಿದರೂ ಇಂದಿಗೂ ಆಹಾರ (Food), ವಸತಿ ಹಾಗೂ ಗೇಣು ಬಟ್ಟೆಗಾಗಿಯೇ ಸಾಕಷ್ಟು ಜನರು ಪರದಾಡುತ್ತಿದ್ದಾರೆ. ಶ್ರೀಮಂತರು ಹಾಗೂ ಬಡವರ ನಡುವಿನ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಿದ್ದು, ದೇಶದಲ್ಲಿ ಈ ಅಸಮಾನತೆ (Inequality) ಹೆಚ್ಚುತ್ತಲೇ ಇದೆ ಎಂಬುದು ವಿಶ್ವ ಸಂಸ್ಥೆಯ ಅಧ್ಯಯನಗಳಿಂದ ತಿಳಿದುಬಂದಿದೆ.


ಶ್ರೀಮಂತರ ನಡುವೆ ಕುಸಿಯುತ್ತಿರುವ ಬಡವರು


ಇದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತವು ಹೆಚ್ಚಿನ ಆದಾಯದ ಗುಂಪಿನ ಮೇಲೆ ಬಂಡವಾಳ ಲಾಭದ ತೆರಿಗೆಯನ್ನು ಹೆಚ್ಚಿಸುವ ಮೂಲಕ ನೇರ ತೆರಿಗೆ ಕಾನೂನುಗಳನ್ನು ಪರಿಶೀಲಿಸುವ ಯೋಜನೆ ಕೈಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದರೂ ಈ ಯೋಜನೆಯನ್ನು ಮುಂದುವರಿಸುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ.


ಆದಾಯದ ಅಸಮಾನತೆಯನ್ನು ಕಡಿಮೆ ಮಾಡಲು ಈ ಯೋಜನೆಯನ್ನು ರೂಪಿಸಲಾಗುತ್ತಿದ್ದು, 813.5 ಮಿಲಿಯನ್ ಬಡವರಿಗೆ ಸಾಂಕ್ರಾಮಿಕ ನಂತರದ ಯುಗದಲ್ಲಿ ಇನ್ನೂ ಉಚಿತವಾಗಿ ಆಹಾರವನ್ನೊದಗಿಸುವುದು ಕಡ್ಡಾಯವಾಗಿದೆ. ಆದರೆ ಇಂತಹ ಯೋಜನೆಗಳನ್ನು ಆರಂಭಿಸುವ ಯಾವುದೇ ಉದ್ದೇಶವಿಲ್ಲ ಎಂಬುದನ್ನು ತಿಳಿಸಿರುವ ಹಣಕಾಸು ಸಚಿವಾಲಯವು, ಶ್ರೀಮಂತ ನಾಗರಿಕರ ಮೇಲೆ ತೆರಿಗೆಯನ್ನು ಹೆಚ್ಚಿಸುವ ಯಾವುದೇ ಯೋಜನೆಗಳನ್ನು ಆರಂಭಿಸುವ ಉದ್ದೇಶವಿಲ್ಲ ಎಂದು ತಿಳಿಸಿದೆ.


ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್‌’ ಕಾರ್ಯಕ್ರಮದ 100ನೇ ಸಂಚಿಕೆಯ ಹೈಲೈಟ್ಸ್ ಇಲ್ಲಿದೆ


ಬಡವರ ಮೇಲಿನ ಶೋಷಣೆ ಹೆಚ್ಚುತ್ತಿದೆ


ಇದಲ್ಲದೆ, ಹೆಚ್ಚಿದ ಹಣದುಬ್ಬರ ಮತ್ತು ಹೆಚ್ಚಿನ ನಿರುದ್ಯೋಗ ದರದ ನಡುವೆ ಐಷಾರಾಮಿ ವಸ್ತುಗಳು ಹಾಗೂ ಇನ್ನಿತರ ಮೂಲ ಗ್ರಾಹಕ ಸರಕುಗಳ ಬೇಡಿಕೆಯಲ್ಲಿ ಇದೀಗ ವ್ಯತ್ಯಾಸ ಉಂಟಾಗಿದ್ದು ಬಡವರೇ ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ ಹಾಗೂ ತುತ್ತು ಅನ್ನಕ್ಕೂ ಶ್ರಮ ಪಡುತ್ತಿದ್ದಾರೆ.


ವಿಶ್ವ ಅಸಮಾನತೆಯ ವರದಿ ನೀಡಿರುವ ಮಾಹಿತಿ ಏನು?


ಈ ಹಣಕಾಸು ವರ್ಷದಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯುತ್ತದೆ. ಆದರೆ ಆರ್ಥಿಕ ಅಸಮಾನತೆ ಭಾರತದಲ್ಲಿ ಇನ್ನೂ ಹೆಚ್ಚಾಗುತ್ತಲೇ ಇದೆ ಎಂಬುದು ಆರ್ಥಿಕ ತಜ್ಞರ ಮಾತಾಗಿದೆ. ವಿಶ್ವ ಅಸಮಾನತೆಯ ವರದಿ 2022 ರ ಮಾಹಿತಿಯ ಪ್ರಕಾರ ಭಾರತವು ವಿಶ್ವದ ಅತ್ಯಂತ ಅಸಮಾನ ದೇಶಗಳಲ್ಲಿ ಒಂದಾಗಿದೆ ಇದಕ್ಕೆ ಕಾರಣ ಹೆಚ್ಚುತ್ತಿರುವ ಬಡತನ ಹಾಗೂ ಶ್ರೀಮಂತ ವರ್ಗಗಳು ಎಂದು ವರದಿ ಬಹಿರಂಗಪಡಿಸಿದೆ.


ಭಾರತೀಯರ ಆದ್ಯತೆಗಳು


ಭಾರತದಲ್ಲಿ ಆ್ಯಪಲ್ ತನ್ನ ಮೊದಲ ರಿಟೇಲ್ ಸ್ಟೋರ್ ಅನ್ನು ತೆರೆಯುವ ಭರಾಟೆಯ ನಡುವೆಯೇ ಐಷಾರಾಮಿ ಫೋನ್‌ಗಳನ್ನು ಖರೀದಿಸುವ ಗ್ರಾಹಕರು ಸ್ಟೋರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಆದರೆ ಇಲ್ಲಿರುವ ಕಠೋರ ಸತ್ಯವೆಂದರೆ ಏಷ್ಯಾದ ರಾಷ್ಟ್ರದ ತಲಾ ಆದಾಯವು ಐಫೋನ್ ತಯಾರಕರು ರಿಟೇಲ್ ಸ್ಟೋರ್‌ಗಳನ್ನು ಹೊಂದಿರುವ 26 ದೇಶಗಳಲ್ಲಿಯೇ ಅತ್ಯಂತ ಕಡಿಮೆ ಎಂದೆನಿಸಿದೆ.


ಸಾಂದರ್ಭಿಕ ಚಿತ್ರ


ಐಷಾರಾಮಿ ಕಾರುಗಳ ಮಾರಾಟವು ಅದರ ಹಿಂದಿನ ವರ್ಷಕ್ಕಿಂತ 2022 ರಲ್ಲಿ ಇನ್ನಷ್ಟು ವೇಗವನ್ನು ಪಡೆದುಕೊಂಡಿತು, ಆದರೆ ಬಳಕೆದಾರರ ವಾಹನವಾಗಿ ಕಂಡುಬರುವ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಬಜಾಜ್ ಆಟೋ ಮಾರಾಟವು 10% ರಷ್ಟು ಕುಸಿದಿದ್ದು ನಷ್ಟಕ್ಕೆ ಗುರಿಯಾಗಿದೆ. ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಯಾಗಲಿದೆ ಎಂದು ಮರ್ಸಿಡಿಸ್-ಬೆನ್ಜ್ ನಿರೀಕ್ಷಿಸುತ್ತಿದೆ.


ಆರು ವರ್ಷಗಳಲ್ಲಿ ಮೊದಲ ಬಾರಿಗೆ, ಭಾರತದಲ್ಲಿ ಗ್ರಾಮೀಣ ಹಣದುಬ್ಬರವು 2023 ರ ಹಣಕಾಸು ವರ್ಷದಲ್ಲಿ ನಗರ ಹಣದುಬ್ಬರಕ್ಕಿಂತ ಹೆಚ್ಚಾಗಿದೆ. ಭಾರತದ ಚಿಲ್ಲರೆ ಹಣದುಬ್ಬರವು ಕಳೆದ ವರ್ಷ ಏಪ್ರಿಲ್‌ನಲ್ಲಿ ಎಂಟು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿತ್ತು ಮತ್ತು ಇನ್ನೂ ಹೆಚ್ಚಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ 6% ಮಿತಿಯನ್ನು ಮೀರಿದೆ. ಇದರಿಂದ ಬ್ಯಾಂಕ್‌ಗಳು ಗೃಹ ಸಾಲಗಳು ಅಂತೆಯೇ ಇನ್ನಿತರ ಸಾಲಗಳ ಮೇಲಿನ ಬಡ್ಡಿದರಗಳನ್ನು ಏರಿಸಲು ಕಾರಣವಾಯಿತು.




ಆಹಾರ, ಬಟ್ಟೆ, ವಸತಿಯಂತಹ ಮೂಲಭೂತ ಅಗತ್ಯತೆಗಳು


ಭಾರತದಲ್ಲಿ ಆ್ಯಪಲ್, ಮರ್ಸಿಡಿಸ್‌ನಂತಹ ಐಷಾರಾಮಿ ಬ್ರ್ಯಾಂಡ್‌ಗಳು ಆರಂಭಗೊಂಡಿದ್ದರೂ ಇಂದಿಗೂ ಸಾಕಷ್ಟು ಜನತೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಲ್ಲಿ ಶ್ರಮಪಡುತ್ತಿದ್ದಾರೆ, ಪರದಾಡುತ್ತಿದ್ದಾರೆ.


ಮೂಲಭೂತ ಅವಶ್ಯಕತೆಗಳಾದ ಆಹಾರ, ಬಟ್ಟೆಬರೆ ಹಾಗೂ ವಸತಿಗಳ ಮೇಲಿನ ದರ ಏರುತ್ತಿದೆ. ಇಲ್ಲಿ ಉಳ್ಳವರಿಗೆ ಈ ದರ ಏರಿಕೆ ಸಮಸ್ಯೆ ಅಲ್ಲದೇ ಇದ್ದರೂ ಇಲ್ಲದವರು ಇನ್ನಷ್ಟು ಪಾತಾಳಕ್ಕೆ ತಲುಪುತ್ತಿದ್ದಾರೆ.ಒಟ್ಟಿನಲ್ಲಿ ಉಳ್ಳವರು ಇನ್ನಷ್ಟು ಐಷಾರಾಮಿ ವಸ್ತುಗಳಿಗೆ ಹಾತೊರೆಯುತ್ತಿದ್ದರೆ ಏನೂ ಇಲ್ಲದ ಬಡವರು ತುತ್ತು ಅನ್ನಕ್ಕಾಗಿಯೇ ಹಾತೊರೆಯುತ್ತಿದ್ದಾರೆ.

First published: