ಸ್ಟಾರ್​ ಪ್ರಚಾರಕರ ಪಟ್ಟಿಯಿಂದ ಕಾಂಗ್ರೆಸ್​ ನಾಯಕ ಕಮಲ್​ನಾಥ್​ರನ್ನು ಕಿತ್ತೊಗೆದ ಚುನಾವಣಾ ಆಯೋಗ

ಇತ್ತೀಚೆಗೆ ಬಿಜೆಪಿ ನಾಯಕಿ ಇಮ್ರತಿ ದೇವಿಯನ್ನು ಐಟಂ ಎಂದು ಕರೆಯುವ ಮೂಲಕ ಕಮಲನಾಥ್​ ಸಾಕಷ್ಟು ವಿವಾದ ಸೃಷ್ಟಿಸಿದ್ದರು

ಕಾಂಗ್ರೆಸ್​ ನಾಯಕ ಕಮಲನಾಥ್​​

ಕಾಂಗ್ರೆಸ್​ ನಾಯಕ ಕಮಲನಾಥ್​​

 • Share this:
  ನವದೆಹಲಿ (ಅ.30):  ಮಧ್ಯ ಪ್ರದೇಶ ಉಪಚುನಾವಣೆಗೆ ಮುನ್ನವೇ ಕಾಂಗ್ರೆಸ್​ಗೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್​ ಸ್ಟಾರ್​ ಪ್ರಚಾರಕ ಪಟ್ಟಿಯಿಂದ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್​ ಅವರನ್ನು ಚುನಾವಣಾ ಆಯೋಗ ಕೈ ಬಿಟ್ಟಿದೆ. ಚುನಾವಣಾ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ ಆರೋಪದ ಮೇಲೆ ಈ ನಿರ್ಧಾರ ಕೈಗೊಂಡಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಇತ್ತೀಚೆಗೆ ಬಿಜೆಪಿ ನಾಯಕಿ ಇಮ್ರತಿ ದೇವಿಯನ್ನು ಐಟಂ ಎಂದು ಕರೆಯುವ ಮೂಲಕ ಕಮಲನಾಥ್​ ಸಾಕಷ್ಟು ವಿವಾದ ಸೃಷ್ಟಿಸಿದ್ದರು. ಈ ಕುರಿತು ತಮ್ಮ ನಾಯಕರ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರು ಕೂಡ ಒತ್ತಾಯಿಸಿದ್ದರು.

  ಈ ಕುರಿತು ಪ್ರಕಟಣೆ ಹೊರಡಿಸಿರುವ ಚುನಾವಣಾ ಆಯೋಗ, ಕಮಲನಾಥ್​ ಅವರು, ನೀತಿ ಸಂಹಿತೆ ಉಲ್ಲಂಘಿಸಿದ್ದರು. ಅಲ್ಲದೇ ಈ ಕುರಿತು ಅವರಿಗೆ ನೀಡಲಾದ ಸೂಚನೆಯನ್ನು ಕಡೆಗಣಿಸಿದ್ದರು. ಈ ಹಿನ್ನಲೆ ಅವರನ್ನು  ಪಕ್ಷದ ಸ್ಟಾರ್​ ಕ್ಯಾಂಪೇನರ್​ ಸ್ಥಾನಮಾನದಿಂದ ತೆಗೆದುಹಾಕುತ್ತಿರುವುದಾಗಿ ತಿಳಿಸಿದೆ. ಈ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮಧ್ಯಪ್ರದೇಶ ಉಪಚುನಾವಣೆಗಾಗಲಿ ಅಥವಾ ವಿಧಾನ ಸಭಾ ಚುನಾವಣೆಗಾಗಲಿ ಅವರಿಗೆ ತಾರಾ ಪ್ರಚಾರಕನಾಗಿ ಭಾಗಿಯಾಗುವ ಅನುಮತಿ ಇಲ್ಲ ಎಂದು ತಿಳಿಸಿದೆ.

  ಇದನ್ನು ಓದಿ: ಶಿಕಾರಿಪುರದ ರೀತಿ ಶಿರಾ ಕ್ಷೇತ್ರದ ಅಭಿವೃದ್ಧಿ; ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಭರವಸೆ

  ಈ ಮಧ್ಯೆ ಕಮಲ್​ನಾಥ್​ ಅವರು ಯಾವುದೇ ಪ್ರಚಾರ, ಸಮಾವೇಶ ಅಥವಾ ಭೇಟಿ ನಡೆಸಿದರೆ, ಅದರ ಸಂಪೂರ್ಣ ವೆಚ್ಚವನ್ನು ಕ್ಷೇತ್ರದ ಅಭ್ಯರ್ಥಿಯೇ ಸಂಪೂರ್ಣ ಭರಿಸಬೇಕು ಎಂದು ಕೂಡ ತಿಳಿಸಲಾಗಿದೆ.

  ಚುನಾವಣಾ ಆಯೋಗದ ಈ ನಿರ್ಧಾರವನ್ನು ಕಾಂಗ್ರೆಸ್​ ಖಂಡಿಸಿದ್ದು, ಇದೊಂದು ಅಸಂವಿಧಾನಿಕ ಕ್ರಮ. ಈ ಕುರಿತು ಸುಪ್ರೀಂ ಕೋರ್ಟ್​ ಮೆಟ್ಟಿಲೇರುವುದಾಗಿ ತಿಳಿಸಿದೆ.
  Published by:Seema R
  First published: