ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ; ಪ್ರಗ್ಯಾ ಠಾಕೂರ್​ ಪ್ರಚಾರಕ್ಕೆ 72 ಗಂಟೆ ನಿಷೇಧ ಹೇರಿದ ಚುನಾವಣಾ ಆಯೋಗ

Lok Sabha Elections 2019; ಎಟಿಎಸ್​ ಮುಖ್ಯಸ್ಥ ಹುತಾತ್ಮ ಯೋಧ ಹೇಮಂತ್ ಕರ್ಕರೆ ಹಾಗೂ ಬಾಬರಿ ಮಸೀದಿ ದ್ವಂಸ ಪ್ರಕರಣ ಕುರಿತ ಪ್ರಗ್ಯಾ ಠಾಕೂರ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚುನಾವಣಾ ಆಯೋಗ ಇಂತಹ ಹೇಳಿಕೆಗಳು ಒಪ್ಪತಕ್ಕುದ್ದಲ್ಲ ಎಂದು ಕಿಡಿಕಾರಿದೆ.

MAshok Kumar | news18
Updated:May 2, 2019, 9:35 AM IST
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ; ಪ್ರಗ್ಯಾ ಠಾಕೂರ್​ ಪ್ರಚಾರಕ್ಕೆ 72 ಗಂಟೆ ನಿಷೇಧ ಹೇರಿದ ಚುನಾವಣಾ ಆಯೋಗ
ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್.
  • News18
  • Last Updated: May 2, 2019, 9:35 AM IST
  • Share this:
ನವ ದೆಹಲಿ : ಮಧ್ಯಪ್ರದೇಶದ ಭೂಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಹುರಿಯಾಳು ಸಾಧ್ವಿ ಪ್ರಗ್ಯಾ ಠಾಕೂರ್ ಮುಂದಿನ 72 ಗಂಟೆಗಳ ಕಾಲ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ಚುನವಣಾ ಆಯೋಗ ನಿಷೇಧ ಹೇರಿದೆ.

ಪ್ರಗ್ಯಾ ಠಾಕೂರ್ ವಿರುದ್ಧ ದಾಖಲಾಗಿರುವ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆಯನ್ನು ಬುಧವಾರ ಆರಂಭಿಸಿದ್ದ ಚುನಾವಣಾ ಆಯೋಗ ಈ ಮಹತ್ವದ ತೀರ್ಪು ನೀಡಿದೆ.

ಇದನ್ನೂ ಓದಿ : ಭೂಪಾಲ್​ ಲೋಕಸಭಾ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಠಾಕೂರ್ ಆಯ್ಕೆಗೆ ಎನ್​ಡಿಎ ನಾಯಕರಿಂದಲೇ ವಿರೋಧ

ಎಟಿಎಸ್​ ಮುಖ್ಯಸ್ಥ ಹುತಾತ್ಮ ಯೋಧ ಹೇಮಂತ್ ಕರ್ಕರೆ ಹಾಗೂ ಬಾಬರಿ ಮಸೀದಿ ದ್ವಂಸ ಪ್ರಕರಣ ಕುರಿತ ಪ್ರಗ್ಯಾ ಠಾಕೂರ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚುನಾವಣಾ ಆಯೋಗ ಇಂತಹ ಹೇಳಿಕೆಗಳು ಒಪ್ಪತಕ್ಕುದ್ದಲ್ಲ ಎಂದು ಕಿಡಿಕಾರಿದೆ. ಅಲ್ಲದೆ ಭವಿಷ್ಯದಲ್ಲಿ ಇಂತಹ ಬೇಜಾವಾಬ್ದಾರಿ ಹೇಳಿಕೆಗಳನ್ನು ನೀಡದಂತೆಯೂ ಎಚ್ಚರಿಕೆ ನೀಡಿದೆ.

ನಿಷೇಧದ ಅವಧಿ ಮಾರ್ಚ್.2 ರ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದ್ದು, 72 ಗಂಟೆಗಳ ಕಾಲ ಪ್ರಗ್ಯಾ ಠಾಕೂರ್ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವಂತಿಲ್ಲ.

ಈ ಹಿಂದೆ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಠಾಕೂರ್, “ಮಲೆಗಾಂವ್​ ಸ್ಫೋಟ ಪ್ರಕರಣದಲ್ಲಿ ಅಂದಿನ ಎಟಿಎಸ್ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ನನ್ನನ್ನು ಬಲವಂತವಾಗಿ ಸಿಲುಕಿಸಿದ್ದರು. ಇದೇ ಕಾರಣಕ್ಕೆ ನಾನು ಕೊಟ್ಟ ಶಾಪದಿಂದ ಆತ 26/11ರ ತಾಜ್​ ಹೋಟೆಲ್ ಉಗ್ರರ ದಾಳಿಯ ವೇಳೆ ಸಾವನ್ನಪ್ಪಿದ್ದರು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ರಾಷ್ಟ್ರಾಧ್ಯಂತ ಜನ ಖಂಡನೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : ಮಾಲೆಗಾಂವ್ ಬಾಂಬ್​ ಸ್ಫೋಟದ​​ ಆರೋಪಿ ಸಾಧ್ವಿ ಪ್ರಗ್ಯಾ ಬಿಜೆಪಿ ಸೇರ್ಪಡೆ; ಭೂಪಾಲ್​ನಲ್ಲಿ ದಿಗ್ವಿಜಯ ಸಿಂಗ್ ವಿರುದ್ಧ ಕಣಕ್ಕೆ?ಅಲ್ಲದೆ 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಅವರು, “ಬಾಬರಿ ಮಸೀದಿ ಧ್ವಂಸ ಪ್ರಕರಣ ನಮಗೆ ಹೆಮ್ಮೆಯ ಪ್ರತೀಕ” ಎಂದು ಹೇಳಿದ್ದರು. ಈ ಎರಡೂ ಹೇಳಿಕೆಯ ವಿರುದ್ಧ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದವು.

First published:May 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading