ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿವಾದಾತ್ಮಕ ಟ್ವೀಟ್ ಅಳಿಸುವಂತೆ ಟ್ವಿಟರ್​ಗೆ ಚುನಾವಣಾ ಆಯೋಗ ಮನವಿ

ಫೆ.8ರಂದು ನಡೆಯಲಿರುವ ದೆಹಲಿ ಚುನಾವಣೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸೆಣಸಾಟವಾಗಿದೆ, ದೆಹಲಿಯ ರಸ್ತೆಯಲ್ಲಿ ಪಾಕಿಸ್ತಾನ ಸ್ಪರ್ಧಿಸಲಿದೆ ಎಂದು ಕೋಮುಪ್ರಚೋದನಾಕಾರಿ ಟ್ವೀಟ್​ ಮಾಡಿದ್ದರು.

ಬಿಜೆಪಿ ನಾಯಕ ಕಪಿಲ್ ಮಿಶ್ರಾ

ಬಿಜೆಪಿ ನಾಯಕ ಕಪಿಲ್ ಮಿಶ್ರಾ

  • Share this:
ನವದೆಹಲಿ (ಜ.24): ದೆಹಲಿ ಚುನಾವಣೆಯಲ್ಲಿ ಭಾರತ-ಪಾಕಿಸ್ತಾನದ ನಡುವಿನ ಹೋರಾಟ ಎಂದು ಹೋಲಿಕೆ ಮಾಡಿ ಟ್ವೀಟ್​ ಮಾಡಿದ್ದ  ಬಿಜೆಪಿ ಅಭ್ಯರ್ಥಿ ಕಪಿಲ್​ ಮಿಶ್ರಾ ವಿರುದ್ಧ ಚುನಾವಣಾ ಆಯೋಗ ಕೆಂಗಣ್ಣು ಬೀರಿದೆ. ಈ ಕುರಿತು ಕಾರಣ ಕೇಳಿ ನೋಟಿಸ್​ ಜಾರಿ ಮಾಡಿದ್ದು, ಕ್ರಮವನ್ನು ಎದುರಿಸುವಂತೆ ಸೂಚನೆ ನೀಡಿದೆ.

ಮಿಶ್ರಾ ಅವರ ಹೇಳಿಕೆ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ವ್ಯತ್ಯಾಸ ಸೃಷ್ಟಿಸುವುದು ಅಥವಾ ವೈಷಮ್ಯ ಹರಡುವುದು ಅಥವಾ ಭಿನ್ನ ಸಮುದಾಯದ ನಡುವೆ ಆತಂಕ ಸೃಷಿಸಿದೆ ಎಂದು ಆರೋಪಿಸಲಾಗಿದೆ.

ಇನ್ನು ಈ ಟ್ವೀಟ್​ ಕುರಿತು ಮುಂದಿನ 24ಗಂಟೆಯೊಳಗೆ ವರದಿ ನೀಡಬೇಕು ಎಂದು ಕೂಡ ಕಪಿಲ್​ ಮಿಶ್ರಾಗೆ ಸೂಚನೆ ನೀಡಲಾಗಿದೆ.

ಫೆ.8ರಂದು ನಡೆಯಲಿರುವ ದೆಹಲಿ ಚುನಾವಣೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸೆಣಸಾಟವಾಗಿದೆ, ದೆಹಲಿಯ ರಸ್ತೆಯಲ್ಲಿ ಪಾಕಿಸ್ತಾನ ಸ್ಪರ್ಧಿಸಲಿದೆ ಎಂದು ಕೋಮುಪ್ರಚೋದನಾಕಾರಿ ಟ್ವೀಟ್​ ಮಾಡಿದ್ದರು.

ಇನ್ನು ಈ ಕುರಿತು ಚುನಾವಣಾ ಆಯೋಗ ಸಾಮಾಜಿಕ ಜಾಲತಾಣ ಟ್ವೀಟರ್​ಗೂ ಕೂಡ ಪತ್ರ ಬರೆದಿದೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಈ ಟ್ವೀಟ್​ ಅನ್ನು ತೆಗೆದುಹಾಕುವಂತೆ ತಿಳಿಸಿದೆ.

ಇನ್ನು ಈ ಟ್ವೀಟ್​ ಕುರಿತು ವಿವರಣೆ ನೀಡಿರುವ ಮಾಜಿ ಎಎಪಿ ಸಚಿವರು, ದೆಹಲಿಯ ಹಲವು ಪ್ರದೇಶದಗಳಲ್ಲಿ ಸಣ್ಣ ಪಾಕಿಸ್ತಾನ ನಿರ್ಮಾಣವಾಗಿದೆ, ಶಾಹೀನ್​ ಬಾಗ್​ ಇಂದೆರ್​​ ಲೋಕ್​, ಚಂದ್​ ಬಾಗ್​ ಹಲವು ಪ್ರದೇಶಗಳು ಸಣ್ಣ ಪಾಕಿಸ್ತಾನವಾಗಿದೆ. ಪ್ರತಿಭಟನಾಕಾರರು ಇಲ್ಲಿನ ರಸ್ತೆ, ಪ್ರದೇಶಗಳಿಗೆ ಸಾಮಾನ್ಯ ಜನರಿಗೆ ಪ್ರವೇಶ ನಿಷೇಧಿಸುವ ಮೂಲಕ ತೊಂದರೆ ನೀಡುತ್ತಿದ್ದಾರೆ ಎಂದಿದ್ದರು.

ನೋಟಿಸ್​ ಕುರಿತು ಮಾತನಾಡಿದ ಅವರು, ಈ ಕುರಿತು ನಾನು ಉತ್ತರ ನೀಡುತ್ತೇನೆ. ನಾನು ತಪ್ಪು ಮಾತನಾಡಿದ್ದೇನೆ ಎಂದು ನನಗೆ ಅನ್ನಿಸಿಲ್ಲ. ಈ ದೇಶದಲ್ಲಿ ಸತ್ಯ ಮಾತನಾಡುವುದೇ ಅಪರಾಧ, ನಾನು ಸತ್ಯವನ್ನೇ ಹೇಳಿದ್ದೇನೆ. ಜೊತೆಗೆ ನನ್ನ ಹೇಳಿಕೆ ಪರ ದೃಢವಾಗಿ ನಿಲ್ಲುತ್ತೇನೆ ಎಂದಿದ್ದಾರೆ.

ಇದನ್ನು ಓದಿ: ದೆಹಲಿ ಚುನಾವಣೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹೋರಾಟ: ಬಿಜೆಪಿ ಅಭ್ಯರ್ಥಿ ಕಪಿಲ್​​ ಮಿಶ್ರಾ

ದೆಹಲಿಯ ಮಾಡೆಲ್​ ಟೌನ್​ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವ ಮಿಶ್ರಾ ಈ ಹಿಂದೆ ಅರವಿಂದ್​ ಕೇಜ್ರಿವಾಲ್​ ಆಪ್ತರಾಗಿದ್ದರು. ಕೇಜ್ರಿವಾಲ್​ ಅವರ ವಿರುದ್ಧ ಬಹಿರಂಗವಾಗಿ ಭ್ರಷ್ಟಚಾರ ಆರೋಪ ಮಾಡುವ ಮೂಲಕ ಎಎಪಿಯಿಂದ ಹೊರ ಹೋಗಿದ್ದರು.

ಮಿಶ್ರಾ ಅವರ ನಾಮಪತ್ರವನ್ನು ರದ್ದು ಮಾಡುವಂತೆ ಎಎಪಿ ಚುನಾವಣಾ ಆಯೋಗಕ್ಕೆ ಕೋರಿದೆ.
First published: